ಕರಾವಳಿ ಟಾಪ್ ನ್ಯೂಸ್
• ಬೆಳ್ತಂಗಡಿ: ವಿಷ ಸೇವಿಸಿ ಯುವತಿ ಆತ್ಮಹತ್ಯೆ
• ಉಡುಪಿ: ಸ್ವಚ್ಛತೆಯ ಸಂದರ್ಭದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ
• ಧರ್ಮಸ್ಥಳ: ರಸ್ತೆ ಅಪಘಾತ; ಚಾಲಕರಿಗೆ ಗಾಯ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಬೆಳ್ತಂಗಡಿ: ವಿಷ ಸೇವಿಸಿ ಯುವತಿ ಆತ್ಮಹತ್ಯೆ
ಬೆಳ್ತಂಗಡಿ: ಯುವತಿಯೊಬ್ಬಳು ಪ್ರೀತಿಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಬೆಳಾಲು ಗ್ರಾಮದ ಬಾಳೆಮಂಡಿಕಲ್ಲು ನಿವಾಸಿ ರಮಾ ಎಂದು ಗುರುತಿಸಲಾಗಿದೆ. ಏಪ್ರಿಲ್ 19ರಂದು ರಮಾ ಇಲಿಪಾಷಾಣ ಸೇವಿಸಿ ಅತ್ಮಹತ್ಯೆಗೆ ಪ್ರಯತ್ನಿಸಿದ್ದಳು. ತಕ್ಷಣ ಅವಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 29ರಂದು ಸಾವನ್ನಪ್ಪಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಏಪ್ರಿಲ್ 30ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮಾ ವಾಮದಪದವು ಕಾಲೇಜ್ ನಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ. ತನಿಖೆಯ ಬಳಿಕ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
• ಉಡುಪಿ: ಸ್ವಚ್ಛತೆಯ ಸಂದರ್ಭದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ
ಉಡುಪಿ: ಬಾವಿಯ ಸ್ವಚ್ಛತೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ಕೆಲಸ ಮುಗಿಸಿ ಮೇಲೆ ಬರುತ್ತಿದ್ದ ಸಮಯದಲ್ಲಿ, ಆಯಾತಪ್ಪಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ, ಕೊರಂಗ್ರಪಾಡಿ ಎನ್ನುವಲ್ಲಿ ನಡೆದಿದೆ. ಶ್ರೀಶ ಎನ್ನುವವರು ಮನೆಯ ಸಮೀಪದಲ್ಲಿದ್ದ 35 ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸಲೆಂದು ಇಳಿದಿದ್ದರು ಎನ್ನಲಾಗಿದೆ. ಸ್ವಚ್ಛತೆಯನ್ನು ಮುಗಿಸಿ ಬಾವಿಯೊಳಗಿನಿಂದ ಮೇಲೆ ಬರುವ ಸಂದರ್ಭದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಸಿಲುಕಿದ್ದರು.
ಆಗ ಶ್ರೀಶ ಅವರ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸತೀಶ್, ಅಶ್ವಿನ್ ಸನಿಲ್, ಮಹಾಬಲೇಶ್ವರ, ಹರಿಕಾಂತ್, ಭರತ್ ಎನ್, ಸಂತೋಷ್ ಶೆಟ್ಟಿ, ಅಮರ್ ಕಟ್ಟಿ ಮತ್ತು ರಾಕೇಶ್ ಅವರು ಕಾರ್ಯಾಚರಣೆ ನಡೆಸಿ ಶ್ರೀಶ ಅವರನ್ನು ರಕ್ಷಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಧರ್ಮಸ್ಥಳ: ರಸ್ತೆ ಅಪಘಾತ; ಚಾಲಕರಿಗೆ ಗಾಯ
ಧರ್ಮಸ್ಥಳ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ, ಗುರುವಾರದಂದು ನೀರಚಿಲುಮೆ ಸಿದ್ದಾವಣ ನರ್ಸರಿ ಸಮೀಪದಲ್ಲಿ ನಡೆದಿದೆ. ಉಜಿರೆ ಕಡೆಯಿಂದ ಧರ್ಮಸ್ಥಳದ ಕಡೆಗೆ ಸಾಗುತ್ತಿದ್ದ ಮಂಡ್ಯ ಮೂಲದ ಕಾರು ಮತ್ತು ಧರ್ಮಸ್ಥಳದಿಂದ ಉಜಿರೆಯ ಕಡೆಗೆ ತೆರಳುತ್ತಿದ್ದ ಉಡುಪಿಯ ಕಾರಿನ ನಡುವೆ ಚಾಲಕರ ನಿಯಂತ್ರಣ ತಪ್ಪಿ ಪರಸ್ಪರ ಢಿಕ್ಕಿ ಸಂಭವಿಸಿದೆ. ಪರಿಣಾಮವಾಗಿ ಎರಡೂ ಕಾರಿನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ ಅಪಘಾತದ ರಭಸಕ್ಕೆ ಎರಡೂ ಕಾರುಗಳಿಗೂ ಹಾನಿಯಾಗಿದೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.







