Author: Nammur Express Karkala

ಕೋಣಂದೂರಲ್ಲಿಂದು ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ! – ಸಾವಿರಾರು ಯಕ್ಷಪ್ರಿಯರ ಆಗಮನ ನಿರೀಕ್ಷೆ: ಸರ್ವ ಸಿದ್ಧತೆ – ಸರ್ವರನ್ನು ಸ್ವಾಗತಿಸಿದ ಆಯೋಜಕ ಸಮಿತಿ NAMMUR EXPRESS NEWS ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿ ವತಿಯಿಂದ ಖ್ಯಾತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ದಿನಾಂಕ ಕೋಣಂದೂರಲ್ಲಿ ಇಂದು ಸಂಜೆ 6ರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ನಡೆಯಲಿದೆ. ಕೊಡಚಾದ್ರಿ ಟ್ರಸ್ಟ್ ಸ್ಥಾಪಕರು, ತೀರ್ಥಹಳ್ಳಿ ನಾಯಕರು ಆದ ಡಾ. ಆರ್.ಎಂ. ಮಂಜುನಾಥ ಗೌಡ ಸರ್ವರನ್ನು ಸ್ವಾಗತಿಸಿದ್ದಾರೆ. ಯಕ್ಷಗಾನ 6 ಗಂಟೆಯಿಂದ 11 ಗಂಟೆವರೆಗೆ ನಡೆಯಲಿದೆ. 5 ಗಂಟೆ ಕಾಲ ಮಿತಿ ಯಲ್ಲಿ ಯಕ್ಷಗಾನ ನಡೆಯಲಿದ್ದು, ಈಗಾಗಲೇ ಜನರ ಆಗಮನ ಶುರುವಾಗಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆ ಗಮನ ಸೆಳೆಯಲಿದೆ. ಕೊಡಚಾದ್ರಿ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ಮಧು ಸೂಧನ ನಾವುಡ ನೇತೃತ್ವದಲ್ಲಿ ಕೋಣಂದೂರಲ್ಲಿ ಯಕ್ಷಗಾನ ನಡೆಯಲಿದ್ದು, ವಿದ್ಯುತ್ ಅಲಂಕಾರ…

Read More

ಶಾರದಾಂಬೆ ಮಡಿಲಿನ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ! – ನಕ್ಸಲೆಟ್ ಹೆಸರಿನಲ್ಲಿ ಸರ್ಕಾರದ ಅನುದಾನ ನಿರ್ಲಕ್ಷ – ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ – ದಶಕಗಳ ಜನರ ಮನವಿಗೆ ಬೆಲೆಯೇ ಇಲ್ಲ ನಮ್ಮೂರ್ ಪ್ರಾಬ್ಲಮ್ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರಕಲ್ ಗ್ರಾಮದ ಕಿಗ್ಗ ಊರಿನಿಂದ ಚೆಟ್ಟುಗುಣಿ ಗ್ರಾಮಕ್ಕೆ ಹೋಗುವ ಕಾಲುಸಂಕ ಇಂದಿಗೂ ಜನರ ಬದುಕಿನ ನಾಡಿಯಾಗಿದೆ. ದಶಕಗಳಿಂದ ಈ ಮಾರ್ಗದ ದುರಸ್ತಿ ಬೇಡಿಕೆಗಳನ್ನು ಗ್ರಾಮಸ್ಥರು ಶಾಸಕರವರೆಗೂ ತಲುಪಿಸಿದರೂ, ಪ್ರತಿಸಾರಿ ಹಿಂತಿರುಗುವ ಉತ್ತರ ಅದು ನಕ್ಸಲೇಟು ಪ್ರದೇಶ, ಅಭಿವೃದ್ಧಿ ಸಾಧ್ಯವಿಲ್ಲ! ಎಂದು ನಿರ್ಲಕ್ಷದಿಂದ ಉತ್ತರ ಕೊಡುತ್ತಿದ್ದಾರೆ. ಗ್ರಾಮದಲ್ಲಿ 30 ಮನೆಗಳಿದ್ದು ಆದರೆ ಜನರ ಹೋರಾಟ ಮತ್ತು ತಾಳ್ಮೆ ಕಟ್ಟೆಈಗ ಒಡೆಯುತ್ತಿದೆ. ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ಇದೇ ದುಸ್ಥಿತಿಯ ಕಾಲುಸಂಕದ ಮೇಲೆ ನಡೆಯಬೇಕಾದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಕಲ್ಲು ಮಣ್ಣು ಮಿಶ್ರಿತ, ಮಳೆಗಾಲದಲ್ಲಿ ಹಾದಿಯೇ ಮಾಯವಾಗುವ ಈ ಮಾರ್ಗವು, ಇಂದು ಮಾನವ ಹಕ್ಕುಗಳನ್ನೇ ಪ್ರಶ್ನಿಸುವ…

Read More

ತೀರ್ಥಹಳ್ಳಿ ತಾಲೂಕು ಆಫೀಸ್ ಮುಂದೆ ಕಳೆ ಹೊಡೆಯುವವರು ಬೇಕಾಗಿದ್ದಾರೆ…! * ತಾಲೂಕು ಆಫೀಸ್ ಮುಂದಿನ ಕಸದ ತೋಪಿನಲ್ಲಿ ಅಡಗಿ ಕುಳಿತ ನಾಲ್ಕು ಮುಖದ ಸಿಂಹ * ತಾಲೂಕು ಕಚೇರಿ ಎದುರು ಕಲೆಯನ್ನು ಹಾಳು ಮಾಡಿದ ಆಡಳಿತ! NAMMUR EXPRESS NEWS ವರದಿ:ಉಮೇಶ್ ದೇಮ್ಲಾಪುರ ತೀರ್ಥಹಳ್ಳಿ: ಒಂದು ಕಾಲದಲ್ಲಿ ಅಧಿಕಾರದ ಪವಿತ್ರ ನೆಲೆ ಎಂದೇ ಕರೆಯಲ್ಪಟ್ಟ ತೀರ್ಥಹಳ್ಳಿ ತಾಲೂಕು ಕಚೇರಿ ಇಂದೀಗ ಕಳೆ-ಕಸದ ಕೋಟೆಯಾಗಿ ಮಾರ್ಪಟ್ಟಿದೆ. ಕಚೇರಿಯ ಮುಂಭಾಗದಲ್ಲಿ ಹುಲ್ಲು, ಕಳೆ, ಕಸ ಮತ್ತು ನಿರ್ಲಕ್ಷ್ಯದ ಗಿಡಗಳು ಸ್ಪರ್ಧೆ ನಡೆಸುತ್ತಿವೆ. ಒಳಗೆ ಹೋಗುವ ಮುನ್ನವೇ ಸಾರ್ವಜನಿಕರಿಗೆ ತೋರುವ ದೃಶ್ಯ ಇದು ಕಚೇರಿ ಅಲ್ಲ, ಪಾಳು ಬಿದ್ದ ಪಾರ್ಕ್ ಎಂಬ ಭಾವನೆ ಮೂಡಿಸುತ್ತಿದೆ. ಮಲೆನಾಡಿನ ಸೊಬಗನ್ನು ತೋರಿಸಲು ಒಬ್ಬ ಶ್ರೇಷ್ಠ ಕಲಾವಿದನು ತಮ್ಮ ಶ್ರಮದಿಂದ ಪುತ್ತಳಿಗಳನ್ನು ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದರೂ, ಅದರ ಮುಂದಿನ ಭಾಗದ ಕಳೆ-ಕಸವು ಆ ಕಲೆಯನ್ನೇ ಮುಚ್ಚಿ ಹಾಕಿದೆ. ತೇಜಸ್ಸು ತೋರುವ ಶಿಲ್ಪಗಳು ಈಗ ಕಳೆಗಳಲ್ಲಿ ಮಣ್ಣಿನ ಬಣ್ಣ ಪಡೆದು, ಕಲಾವಿದನ…

Read More

ದೆಹಲಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಡಾಕ್ಟರ್ ಅರೆಸ್ಟ್! – 13 ಮಂದಿ ಜನರ ಬಲಿ ಪಡೆದ ಕಾರು ಬಾಂಬ್ ಸ್ಫೋಟ – ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ: ಎಲ್ಲೆಡೆ ಸಂತಾಪ ಪ್ರಾಣ ತೆತ್ತ ಜೀವಗಳಿಗೆ ಭಾವಪೂರ್ಣ ಶ್ರದ್ದಾಂಜಲಿ NAMMUR EXPRESS NEWS ನವ ದೆಹಲಿ: ನವ ದೆಹಲಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟಿಸಿದ್ದು 13 ಜನ ಬಲಿ ಆಗಿದ್ದಾರೆ. ನವ ದೆಹಲಿ ಮೆಟ್ರೋ ನಿಲ್ದಾಣದ ಒಳಭಾಗದ ಗಾಜುಗಳು ಸ್ಫೋಟದಿಂದಾಗಿ ಪುಡಿಪುಡಿಯಾಗಿವೆ. ಘಟನಾ ಸ್ಥಳದಲ್ಲಿ ಸುಮಾರು 22ಕ್ಕೂ ಹೆಚ್ಚು ವಾಹನಗಳು, ಬೈಕ್‌ಗಳು ಮತ್ತು ಸುತ್ತಮುತ್ತಲ ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಜೈಷೆ ಮಹಮದ್ ಸಂಘಟನೆ ಸೇರಿದ ಪುಲ್ವಾಮ ದಾಳಿ ಮಾಡಿದ ಕಾರು ಮಾದರಿ ದಾಳಿ ಇದಾಗಿದ್ದು, ಫಾರಿದಾಬಾದಿನ…

Read More

ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು!? – ನವೆಂಬರ್ ಕ್ರಾಂತಿ ಆಗುತ್ತಾ…?…ಹಲವು ಕುತೂಹಲ – ಡಿಕೆಶಿಗೆ ನಾಲ್ಕು ದಿನ ಶುಭ ದಿನಾಂಕ ಕೊಟ್ಟ ಗುರೂಜಿ NAMMUR EXPRESS NEWS ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣಕ್ಕೆ ಸಜ್ಜು..ನವೆಂಬರ್ ಕ್ರಾಂತಿ ಆಗುತ್ತಾ…..ಹಲವು ಕುತೂಹಲ..ಡಿಕೆಶಿಗೆ ನಾಲ್ಕು ದಿನ ಶುಭ ದಿನಾಂಕ ಕೊಟ್ಟ ಗುರೂಜಿ…! ಹೀಗೊಂದು ಚರ್ಚೆ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಆಪ್ತ ಸಚಿವರು ಎಷ್ಟೇ ಅಪಸ್ವರ ಎತ್ತಿದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ನ.21 ಇಲ್ಲವೇ 26ಕ್ಕೆ ಅಧಿಕಾರ ವಹಿಸಿ ಕೊಳ್ಳುವ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ನಿರ್ದಿಷ್ಟ ದಿನ ಮತ್ತು ಶುಭ ಗಳಿಗೆಯ ಮಾಹಿತಿಯನ್ನು ಶಿವಕುಮಾರ್, ಭಕ್ತಿ- ಭಾವದಿಂದ ನಂಬಿರುವ ತುಮಕೂರು ಜಿಲ್ಲೆಯ ಮಠದ ಗುರುಗಳು, 21 ಹಾಗೂ 26 ಸೇರಿದಂತೆ ನಾಲ್ಕು ದಿನಗಳ ಶುಭ ಗಳಿಗೆಯ ಮುಹೂರ್ತ ದಿನಗಳ ನಿಗದಿಪಡಿಸಿದ್ದಾರೆ. ಬರುವ ನವೆಂಬರ್ 20ಕ್ಕೆ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಅವಧಿ ಪೂರ್ಣಗೊಳ್ಳಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಳ್ಳುವುದಕ್ಕೂ…

Read More

ಕರಾವಳಿ ಟಾಪ್ ನ್ಯೂಸ್ * ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟೀಸ್ * ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ * ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ * ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ •ಬಂಟ್ವಾ‌ಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ; ವ್ಯಕ್ತಿಯ ಬಂಧನ * ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು •ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ * ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ * ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ * ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ * ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟಸ್ ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ತಂಡವು ನಾಲ್ವರಿಗೆ ನೋಟಿಸ್ ನೀಡಿದ್ದು, ನಾಲ್ವರ…

Read More

ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿದ ವಾಗ್ದೇವಿ ಪಿಯು ಕಾಲೇಜು! – ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಪಿಯು ಕಾಲೇಜಿನ ಅಮೂಲ್ಯ ಕೆ.ಪಿ – ಸಾಧಕ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ ಆಡಳಿತ ಮಂಡಳಿ NAMMUR EXPRESS NEWS ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಅಮೂಲ್ಯ ಕೆಪಿ ಇತ್ತೀಚಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಇವರು ತುಮಕೂರು ಜಿಲ್ಲೆಯಲ್ಲಿ ನಡೆಸಿದ  ಪದವಿ ಪೂರ್ವ ಕಾಲೇಜುಗಳ 2025-26 ನೇ ಸಾಲಿನ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಆಟವನ್ನುಪ್ರರ‍್ಶಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಕೊಂಡ್ಲೂರು ಗ್ರಾಮದ ಕೊಗ್ರಿ ನಿವಾಸಿಗಳಾದ ಶ್ರೀ ಅನ್ನಪೂರ್ಣ ಮತ್ತು ಪೂರ್ಣೇಶ್ ದಂಪತಿಗಳ ಪುತ್ರಿಯಾಗಿದ್ದು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳ ಈ ಸಾಧನೆಯನ್ನು ತರ‍್ಥಹಳ್ಳಿ ತಾಲ್ಲೂಕಿನ ಜನತೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರು, ಉಪನ್ಯಾಸಕ ವೃಂದ ಮತ್ತು ಪೋಷಕರು ಅಭಿನಂದಿಸಿ…

Read More

ಕಾಡಾನೆ ದಾಳಿ ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ * ಕಾಡಾನೆ ದಾಳಿಗೆ ಮೃತಪಟ್ಟಿದ್ದ ಹರೀಶ್ ಹಾಗೂ ಉಮೇಶ್ * ಇಬ್ಬರನ್ನು ಕೊಂದ ಕಾಡಾನೆ ಪತ್ತೆ, ಸೆರೆಗೆ ಆದೇಶ NAMMMUR EXPRESS NEWS ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾ ಪಂ ಯ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ನಿಷ್ಕ್ರಿಯತೆಯ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಮೃತರ ಕುಟುಂಬಗಳಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಅರಣ್ಯ ಇಲಾಖೆ ವನ್ಯಜೀವಿ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ದೂರಿದರು. ಡಿ.ಎಫ್.ಓ ಜನರ ವಿಶ್ವಾಸ ಕಳೆದುಕೊಂಡಿದ್ದು,ಪ್ರಾಣಿಗಳಿಗೆ ಹಾನಿಯಾದರೆ ಕಾನೂನು ಕ್ರಮ ತೆಗೆದುಕೊಳ್ಳುವ ಸರ್ಕಾರ, ಮನುಷ್ಯ ಜೀವಕ್ಕೆ ಯಾವುದೇ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. * ಮೃತರ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶನಿ ದೇವರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ​ಮೇಷ ರಾಶಿಯವರಿಗೆ ಈ ದಿನ ಶುಭ ಮತ್ತು ಯಶಸ್ಸು ತುಂಬಿರುತ್ತದೆ. ನಿಮಗೆ ಉತ್ತಮ ಉದ್ಯೋಗಾವಕಾಶಗಳು ಸಿಗುತ್ತವೆ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಇಂದು ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು, ಏಕೆಂದರೆ ಇದು ನಷ್ಟಗಳಿಗೆ ಕಾರಣವಾಗಬಹುದು. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಕೆಲಸದಲ್ಲಿ ಯಶಸ್ಸಿನ ದಿನ. ಆದರೆ ನೀವು ಅದಕ್ಕಾಗಿ ಶ್ರಮಿಸಬೇಕಾಗಬಹುದು. ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ, ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.…

Read More

ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದಲೇ ವೆಬ್‌ಸೈಟ್! – ಡಿಜಿಟಲ್ ಜ್ಞಾನ ಮೂಡಿಸುತ್ತಿರುವ ವರ್ಡ್‌ಪ್ರೆಸ್ ಕ್ಯಾಂಪಸ್‌ ಕನೆಕ್ಟ್ ಕಾರ್ಯಾಗಾರ – ಡಿಜಿಟಲ್ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ನೈಜ ಅನುಭವದ ಉದ್ದೇಶ NAMMUR EXPRESS NEWS ಕುಂದಾಪುರ : ಡಿಜಿಟಲ್ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ನೈಜ ಅನುಭವ ನೀಡುವ ಉದ್ದೇಶದಿಂದ ನಡೆದ ವರ್ಡ್‌ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ ಕಾರ್ಯಾಗಾರವು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜು, ಕುಂದಾಪುರದಲ್ಲಿ ಯಶಸ್ವಿಯಾಗಿ ನೆರವೇರಿತು. 65 ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್ ಸೈಟ್‌ಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳು ವರ್ಡ್ ಪ್ರೆಸ್ ಡಾಟ್ ಕಾಮ್ ನೀಡಿದ ಉಚಿತ ಒಂದು ವರ್ಷದ ಯೋಜನೆಯ ನೆರವಿನಿಂದ ತಮ್ಮ ಆಲೋಚನೆಗಳನ್ನು ಆನ್ ಲೈನ್‌ನಲ್ಲಿ ನೈಜ ರೂಪಕ್ಕೆ ತಂದರು. ತರಗತಿಯಲ್ಲಿ ಕಲಿತ ವಿಷಯಗಳನ್ನು ನೈಜ ಪ್ರಯೋಗ ರೂಪದಲ್ಲಿ ಅನ್ವಯಿಸುವ ಅವಕಾಶ ನೀಡಿದ ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿತು. ಕಾರ್ಯಾಗಾರಕ್ಕೆ ಡಾ| ಬಿ.ಬಿ. ಹೆಗ್ಡೆ ಕಾಲೇಜು ಆತಿಥ್ಯ ವಹಿಸಿತು. ಪ್ರಾಚಾರ್ಯ ಡಾ| ಕೆ. ಉಮೇಶ್ ಶೆಟ್ಟಿ, ಉಪಪ್ರಾಚಾರ್ಯ…

Read More