ತೀರ್ಥಹಳ್ಳಿ ಶಾಲೆಗಳು, ವಿದ್ಯಾರ್ಥಿಗಳ ಸಾಧನೆ!
– ಹ್ಯಾಟ್ರಿಕ್ ಶೇ.100 ಫಲಿತಾಂಶ ದಾಖಲಿಸಿದ ಕಟ್ಟೆಹಕ್ಕಲು ಶಾಲೆ
– ಕೋಣಂದೂರು: ಎಚ್.ವಿ. ದೇವಿಪ್ರಸಾದ್ಗೆ 5ನೇ ರ್ಯಾಂಕ್
– ಪತ್ರಕರ್ತ ಕೊಪ್ಪಲು ಪುತ್ರ ದಿಶಾಂತ್ ಶೇ.95 ಅಂಕದ ಸಾಧನೆ!
– ತೀರ್ಥಹಳ್ಳಿ ಅನಂತಮೂರ್ತಿ ಶಾಲೆ ಉತ್ತಮ ಫಲಿತಾಂಶ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಟ್ಟೆ ಹಕ್ಲು ಸತತ ಮೂರನೇ ಬಾರಿಗೆ ಶೇಕಡ ನೂರರಷ್ಟು ಫಲಿತಾಂಶ ದಾಖಲು ಮಾಡಿದೆ.
ಆಂಗ್ಲ ಮಾಧ್ಯಮದಲ್ಲಿ ಆತ್ಮಿಕ 606 ಮತ್ತು ಕನ್ನಡ ಮಾಧ್ಯಮದಲ್ಲಿ ರಚನಾ ಕೆ ಆರ್ 565 ಅಂಕಗಳಿಸಿ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸಾಧಕ ಮಕ್ಕಳಿಗೆ ಶಾಲೆಯ ಎಸ್.ಡಿ.ಎಂ. ಸಿ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿರುತ್ತಾರೆ.
ಪತ್ರಕರ್ತ ಕೊಪ್ಪಲು ಪುತ್ರ ದಿಶಾಂತ್ ಶೇ.95 ಅಂಕದ ಸಾಧನೆ!
ತೀರ್ಥಹಳ್ಳಿ : ಎಸ್ಎಸ್ಎಲ್’ಸಿ ಪರೀಕ್ಷಾ ಫಲಿತಾಂಶದಲ್ಲಿ ಪತ್ರಕರ್ತ ರಾಮಚಂದ್ರ ಕೊಪ್ಪಲು ಅವರ ಪುತ್ರನಾಗಿರುವ ದಿಶಾಂತ್ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. ಪ್ರಜ್ಞಾಭಾರತಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿರುವ ದಿಶಾಂತ್ 593/625 ಅಂಕ ಪಡೆಯುವ ಮೂಲಕ ಶೇ 95% ಪಡೆದಿದ್ದಾರೆ. ಇವರು ತೀರ್ಥಹಳ್ಳಿಯ ಪತ್ರಕರ್ತ ರಾಮಚಂದ್ರ ಕೊಪ್ಪಲು ಹಾಗೂ ಶಾರದಾಂಬ ದಂಪತಿಗಳ ಪುತ್ರರಾಗಿದ್ದಾರೆ.
ಕೋಣಂದೂರು: ಎಚ್.ವಿ. ದೇವಿಪ್ರಸಾದ್ಗೆ 5ನೇ ರ್ಯಾಂಕ್
ಕೋಣಂದೂರು: ನವಜ್ಯೋತಿ ಆಂಗ್ಲಮಾಧ್ಯಮ ಶಾಲೆಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ97 ಪರೀಕ್ಷೆಯಲ್ಲಿ ಶೇ97.1 ಫಲಿತಾಂಶ ಲಭಿಸಿದೆ.
ಎಚ್.ವಿ.ದೇವಿಪ್ರಸಾದ್ 99.36 (621) ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾನೆ. ಕನ್ನಡ 125, ಇಂಗ್ಲಿಷ್ 98, ಹಿಂದಿ 100, ಗಣಿತ 98, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕ ಪಡೆದಿದ್ದಾನೆ. ಈತ ಮಲ್ಲಿಕಟ್ಟೆ ಸಮೀಪದ ಹೊಸಮನೆ ಎಚ್. ವಿ.ಉಮೇಶ್ ಮತ್ತು ಸವಿತಾ ಅವರ ಪುತ್ರ. ಬಿ.ಎ.ಶಾವಣಿ 603 (96.48).ಅಮೂಲ್ಯ 602 (96.32), ಎಚ್. ಬಿ. ಅದ್ವಯ್ 601 (96.16), : ಮೊಹಮ್ಮದ್ ಸಾಜನ್ 601 (96.16) ಎಸ್.ಎ.ಧನ್ಯಾ 600 (96) ಅಂಕ ಪಡೆದಿದ್ದಾರೆ. 24 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು, ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.
ಯು.ಆರ್.ಅನಂತಮೂರ್ತಿ ಪ್ರೌಢ ಶಾಲೆಗೆ ಶೇ.100% ಫಲಿತಾಂಶ
ತೀರ್ಥಹಳ್ಳಿ: ಈ ಸಾಲಿನ ಎಸ್. ಎಸ್.ಎಲ್ಸಿ ಫಲಿತಾಂಶದಲ್ಲಿ ಯು.ಆರ್.ಅನಂತಮೂರ್ತಿ ಪ್ರೌಢ ಶಾಲೆಗೆ ಶೇ.100% ಫಲಿತಾಂಶ ಬಂದಿದೆ. 15 ಡಿಸ್ಟಿಂಕ್ಷನ್, ಪ್ರಥಮ 47, ದ್ವಿತೀಯ 6, ಪಾಸ್ 3 ಆಗಿದ್ದು ಆಶಿಕ್ ಎಚ್.ಎಸ್ 599 ಶೇ.95.94 ಅಂಕದೊಂದಿಗೆ ಟಾಪರ್ ಆಗಿದ್ದಾರೆ.








