ಗಾರೆ ಕೆಲಸದವರ ಮಗಳು ತೀರ್ಥಹಳ್ಳಿಗೆ ಟಾಪರ್!
– ಬಡತನದಲ್ಲಿ ಅರಳಿದ ತನಿಕಲ್ ಪ್ರತಿಭೆ ನಮಿತಾ!
– ಸತತವಾಗಿ ಮೂರನೇ ಬಾರಿಗೆ ಶಾಲೆಗೆ ಶೇ.100 ಫಲಿತಾಂಶ
ತೀರ್ಥಹಳ್ಳಿ: ಇದ್ದವರು ರ್ಯಾಂಕ್ ಬರೋದು ಸಹಜ. ಆದರೆ ಬಡ ಕುಟುಂಬದಲ್ಲಿ ಜನಿಸಿ ತಂದೆ ಗಾರೆ ಕೆಲಸ ಮಾಡಿ ಮಗಳಿಗೆ ಎಲ್ಲಾ ಸೌಲಭ್ಯ ನೀಡಿ, ಆಕೆ ಇದೀಗ ಸರ್ಕಾರಿ ಶಾಲೆಗಳ ಪೈಕಿ ಟಾಪರ್ ಆಗಿದ್ದಾಳೆ. ಹೌದು. ತೀರ್ಥಹಳ್ಳಿ ತಾಲೂಕಿನ ತನಿಕಲ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಮಿತ ಟಿ ಎಂ ಇವಳು 613 ಅಂಕ ಪಡೆದು ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಟಾಪರ್ ಆಗಿರುತ್ತಾಳೆ.
ನಮಿತಾ ಶ್ರೀಮತಿ ಲತಾ ತನಿಕಲ್ ಹಾಗೂ ಶ್ರೀ ಮಂಜುನಾಥ ತನಿಕಲ್ ಇವರ ಪುತ್ರಿ. ಮಗಳ ಸಾಧನೆಗೆ ತಂದೆ ತಾಯಿ ಕೂಲಿ ಕೆಲಸವನ್ನು ಮಾಡಿ ಯಾವುದೇ ಅಡೆ ತಡೆ ಬರದ ಹಾಗೆ ಶಿಕ್ಷಣ ನೀಡಿರುತ್ತಾರೆ. ಇವಳು ಈ ಸಾಧನೆ ಮಾಡಿ ತೀರ್ಥಹಳ್ಳಿ ತಾಲ್ಲೂಕಿಗೆ ತನಿಕಲ್ ಊರಿಗೆ ಗೌರವವನ್ನು ತಂದಿರುತ್ತಾಳೆ.
ಹಳ್ಳಿ ಹುಡುಗಿ ಛಾಯಾದೇವಿ ಸಾಧನೆ!
ಶಾಲೆಯ ಛಾಯಾದೇವಿ ಎನ್ ಆರ್ 609 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಕೂಲಿ ಕುಟುಂಬದಲ್ಲಿ ಜನಿಸಿದ ಈಕೆ ಚಂದ್ರಕಲಾ ಹಾಗೂ ರಮೇಶ ದಂಪತಿಯ ಮಗಳು. ಬಡತನವನ್ನೇ ಮೆಟ್ಟಿ ನಿಂತು ಈ ಹುಡುಗಿ ಸಾಧನೆ ಮಾಡಿ ಶಾಲೆಗೆ ಊರಿಗೆ ಕೀರ್ತಿಯನ್ನು ತಂದಿರುತ್ತಾಳೆ.
ಇಬ್ಬರು ಸಾಧಕ ವಿದ್ಯಾರ್ಥಿಗಳನ್ನು ಶಾಲೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕ ವೃಂದ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು ಸೇರಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಾಜ್ಯಕ್ಕೆ ಪ್ರಥಮ ರ್ಯಾಂಕ್ ಕೊಟ್ಟ ಶಾಲೆ!
ತನಿಕಲ್ ಶಾಲೆಯ ವಿದ್ಯಾರ್ಥಿ ಶ್ರೀಶಾ ಬಿ ಎಸ್ 2020 -21 ಸಾಲಿನಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಮಟ್ಟದ ವರೆಗೆ ಶಾಲೆಯ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದನು ಕೂಡ ಸ್ಮರಿಸಬೇಕು.








