ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಕ್ಷಣಗಣನೆ!
– ಇಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟ
– ಫಲಿತಾಂಶ ವೀಕ್ಷಿಸುವುದು ಹೇಗೆ?.. ವೀಕ್ಷಿಸಿ..!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ/ಬೆಂಗಳೂರು: ಎಸ್.ಎಸ್. ಎಲ್. ಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕಾತುರತೆ ಹೆಚ್ಚಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಎಸ್ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವುದಾಗಿ ಸಚಿವ ಮಧು ಬಂಗಾರಪ್ಪ ಅವರು ಘೋಷಣೆ ಮಾಡಿದ್ದಾರೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
- ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ಸರಳ ಹಂತಗಳ ಮೂಲಕ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:karresults.nic.in ಅಥವಾ kseab.karnataka.gov.in.
- ಲಿಂಕ್ ಆಯ್ಕೆ ಮಾಡಿ: ಮುಖಪುಟದಲ್ಲಿ ಕಾಣುವ ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮಾಹಿತಿ ನಮೂದಿಸಿ:ನಿಮ್ಮ ನೊಂದಣಿ ಸಂಖ್ಯೆ(Registration number) ಮತ್ತು ಜನ್ಮ ದಿನಾಂಕವನ್ನು(DOB) ಸರಿಯಾಗಿ ನಮೂಡಿಸಿ.
- ಸಲ್ಲಿಸಿ: ‘Submit’ ಬಟನ್ ಒತ್ತಿರಿ.
ಅಂಕಪಟ್ಟಿ ಪಡೆಯಿರಿ: ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ. ಮುಂದಿನ ದಾಖಲೆಗಾಗಿ ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಡಿಜಿಟಲ್ ಪ್ಲಾಟ್ಫಾರ್ಮ್ಗಳು: ವೆಬ್ಸೈಟ್ ಮಾತ್ರವಲ್ಲದೆ, 2 DigiLocker & KarnatakaOne ಅಪ್ಲಿಕೇಶನ್ ಮೂಲಕವೂ ಫಲಿತಾಂಶವನ್ನು ಪಡೆಯಬಹುದಾಗಿದೆ.
ಯಾವುದೇ ಅಡ್ಡಿ ಇಲ್ಲ ಎಂದ ಶಿಕ್ಷಣ ಸಚಿವ
ಕೋರ್ಟ್ ಆದೇಶದಿಂದ ಫಲಿತಾಂಶ ವಿಳಂಬವಾಗಬಹುದು ಎಂಬ ಆತಂಕ ಪೋಷಕರಲ್ಲಿತ್ತು. ಆದರೆ ಇದಕ್ಕೆ ತೆರೆ ಎಳೆದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಧ್ಯಾಹ್ನ 12 ಗಂಟಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಾಗಲಿದೆ. ಯಾವುದೇ ತಾಂತ್ರಿಕ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.








