ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆಗೆ ನಂ.1
– ಜಿಲ್ಲೆಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ ಅನಘ
– 24 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ
– ಶೇ. 99.60 ದಾಖಲೆ ಫಲಿತಾಂಶ: ರಾಜ್ಯಕ್ಕೆ ಬೆಸ್ಟ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಗೆ ತೀರ್ಥಹಳ್ಳಿ ತಾಲೂಕು ಎಸ್. ಎಸ್. ಎಲ್. ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಅಲ್ಲದೆ ರಾಜ್ಯದಲ್ಲೇ ಕರಾವಳಿ ಶಿಕ್ಷಣ ಮೀರಿಸುವ ಫಲಿತಾಂಶ ಬಂದಿದೆ. ಶಿವಮೊಗ್ಗ ಜಿಲ್ಲೆಗೆ ನಂ.1 ಸ್ಥಾನ ಪಡೆದಿದೆ, ಶೇ.99.60 ಫಲಿತಾಂಶ ದಾಖಲು ಮಾಡಿದೆ. ಒಟ್ಟು 1488 ವಿದ್ಯಾರ್ಥಿಗಳ ಪೈಕಿ 1482 ಮಂದಿ ಉತ್ತಿರ್ಣರಾಗಿದ್ದು, 6 ಮಂದಿ ಮಾತ್ರ ಫೇಲ್ ಆಗಿದ್ದಾರೆ. ಒಟ್ಟು 37 ಮಕ್ಕಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.
27 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ
ತೀರ್ಥಹಳ್ಳಿ ತಾಲೂಕಿನ 27 ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ 24 ಶಾಲೆ ಶೇ. 100 ಫಲಿತಾಂಶ ದಾಖಲು ಮಾಡಿವೆ. ಒಟ್ಟು 35 ಶಾಲೆ ಶೇ. 100 ಫಲಿತಾಂಶ ದಾಖಲು ಮಾಡಿದೆ. 11 ಖಾಸಗಿ ಶಾಲೆಗಳು ಶೇ. 100 ಫಲಿತಾಂಶ ದಾಖಲು ಮಾಡಿದೆ. 2025-26 ಶೇ.94 ಫಲಿತಾಂಶ ದಾಖಲಾಗಿದ್ದು, ಈ ವರ್ಷ 99.60 ಫಲಿತಾಂಶ ದಾಖಲಾಗಿದೆ.
ರಾಜ್ಯಕ್ಕೆ ಉತ್ತಮ ಫಲಿತಾಂಶ: ಬಿಇಓ ಗಿರಿರಾಜ್ ಸಂತಸ
ವಿದ್ಯಾರ್ಥಿಗಳು, ಶಿಕ್ಷಕರು,ಪೋಷಕರು ಸಹಕಾರ ಹಾಗೂ ಇಒ, ಶಾಸಕರು,ಜಿಲ್ಲಾ ಪಂಚಾಯತ್ ಸಿಇಒ, ಎಲ್ಲ ಎಸ್. ಡಿ. ಎಂ. ಸಿ,, ಎಲ್ಲಾ ಜನ ಪ್ರತಿನಿಧಿಗಳು, ಗ್ರಾಮಸ್ಥರ ಸಹಕಾರಕ್ಕೆ ಬಿಇಒ ಗಿರಿರಾಜ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದಲ್ಲೇ ಮಾದರಿ ಫಲಿತಾಂಶ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಅನಘ ಟಾಪರ್!
ಶಿವಮೊಗ್ಗ ಜಿಲ್ಲೆಗೆ ಅನಘ ಟಾಪರ್ ಆಗಿದ್ದಾರೆ. ಅನಘ ಅವರು ಕೋಣಂದೂರು ಸಮೀಪದ ಮೇಲಿನ ಕಡಗೋಡು ಗ್ರಾಮದ ಶಿಕ್ಷಕ ದಂಪತಿಗಳಾದ ಖಂಡಕ ಶಾಲೆಯ ಶಿಕ್ಷಕ ಶಿವಕುಮಾರ್ ಕೆ. ಎಂ ಹಾಗೂ ಕೊಂಡ್ಲುರು ಪ್ರೌಢ ಶಾಲೆ ಶಿಕ್ಷಕಿ ಮಂಗಳ ಅವರ ಪುತ್ರಿ. ಈಕೆ ಸಾಧನೆಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೇಗರವಳ್ಳಿ ಶಾಲೆ ಸರ್ಕಾರಿ ಶಾಲೆಯಲ್ಲಿ ಟಾಪರ್
ಮೇಗರವಳ್ಳಿ ಸರ್ಕಾರಿ ಪ್ರೌಢ ಶಾಲೆ ರಿಫತ್ ಸುಲ್ತಾನ ( 612) ಅವರು ಸರ್ಕಾರಿ ಶಾಲೆಗಳ ಪೈಕಿ ಅತೀ ಹೆಚ್ಚು ಅಂಕ ಗಳಿಸಿ ಟಾಪರ್ ಆಗಿದ್ದಾರೆ.
ಹಳ್ಳಿ ಪ್ರತಿಭೆ ಉತ್ತಮ ಸಾಧನೆ ಮಾಡಿದ್ದಾರೆ.
ರಾಜ್ಯದಲ್ಲೇ ತೀರ್ಥಹಳ್ಳಿ ಅಪರೂಪದ ಸಾಧನೆ: ಆರಗ ಸಂತಸ
ರಾಜ್ಯದ ಫಲಿತಾಂಶಕ್ಕಿಂತ ತೀರ್ಥಹಳ್ಳಿ ಫಲಿತಾಂಶ ಹೆಚ್ಚಿದೆ. ಕಳೆದ ವರ್ಷ ರಾಜ್ಯಕ್ಕೆ ನಾವು ಮೊದಲ ಸ್ಥಾನ ಪಡೆದಿದ್ದೆವು. ಈಗ ತೀರ್ಥಹಳ್ಳಿ ಕರಾವಳಿ ಮೀರಿಸುತ್ತಿದೆ. ಪಿಯುಸಿ ಮತ್ತು ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯದಲ್ಲೇ ಅತ್ಯಂತ ಹೆಮ್ಮೆಯ ಸಾಧನೆ ಮಾಡಿದೆ. ಇಡೀ ತಾಲೂಕಿನಲ್ಲಿ 6 ಜನ ಮಾತ್ರ ಅನುತ್ತಿರ್ಣರಾಗಿದ್ದಾರೆ. ಶಿಕ್ಷಕರ ಸೇವೆ, ಪೋಷಕರ ಶ್ರಮ, ಮಕ್ಕಳ ಸಾಧನೆ, ಎಸ್. ಡಿ. ಎಂ. ಸಿ ಉತ್ತಮ ಸಾಧನೆಗೆ ಕಾರಣವಾಗಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅವರು, ರಾಜ್ಯದಲ್ಲೇ ಮಾದರಿ ಫಲಿತಾಂಶ ದಾಖಲಾಗಿದೆ. ಶಿಕ್ಷಕರ ಸಾಧನೆ ಮಾದರಿ. ಮೂರು ಮಕ್ಕಳು ಮರು ಫಲಿತಾಂಶದಲ್ಲಿ ಪಾಸಾಗಲಿದ್ದಾರೆ. ಶಿಕ್ಷಣ ಅಧಿಕಾರಿಗಳಾದ ಗಿರಿರಾಜ್ ಅವರ ಸೇವೆ ಕೂಡ ಅಪಾರ. ಈ ಸಾಧನೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.








