ಮೇಲಿನಕುರುವಳ್ಳಿಯ ಶ್ರೀಮಾರಿಕಾಂಬ ದೇವಸ್ಥಾನದಲ್ಲಿ ಅದ್ದೂರಿ ಕರಗ ಮಹೋತ್ಸವ
– ಶ್ರೀಮಾರಿಕಾಂಬ ದೇವಿಗೆ ತುಂಗಾ ನದಿಯಿಂದ ತುಂಗಾ ತೀರ್ಥವನ್ನು ತಂದು ಅಭಿಷೇಕ
– ಮೇ 4ರಿಂದ 6ರವರೆಗೆ 53ನೇ ವರ್ಷದ ಕರಗ ಮಹೋತ್ಸವ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಮೇಲಿನಕುರುವಳ್ಳಿಯ ಶ್ರೀಮಾರಿಕಾಂಬ ದೇವಸ್ಥಾನದಲ್ಲಿ ಅಷ್ಟಭುಜ ಶ್ರೀಮಾರಿಕಾಂಬ ದೇವಿಯ ಸನ್ನಿಧಾನದಲ್ಲಿ 53ನೇ ವರ್ಷದ ಕರಗ ಮಹೋತ್ಸವವನ್ನು ಮೇ 4ರ ಸೋಮವಾರದಿಂದ ಮೇ 6ರ ಬುಧವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಮೊದಲ ದಿನವಾದ ಮೇ4ರ ಸೋಮವಾರದಂದು ಬೆಳಿಗ್ಗೆ 7:00ಗಂಟೆಗೆ ಶ್ರೀಮಾರಿಕಾಂಬ ದೇವಿಗೆ ತುಂಗಾ ನದಿಯಿಂದ ತುಂಗಾ ತೀರ್ಥವನ್ನು ತಂದು ಅಭಿಷೇಕ ಮಾಡಲಾಗುತ್ತದೆ.
10:೦೦ಗಂಟೆಗೆ ಚಂಡಿಕಾ ಹೋಮ ನಡೆಯಲಿದ್ದು, 12:30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂರ್ಪಣೆಯನ್ನು ಏರ್ಪಡಿಸಲಾಗಿದೆ. ಸಂಜೆ 6:೦೦ಗಂಟೆಗೆ ಶ್ರೀಮಾರಿಕಾಂಬ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ತುಂಗಾ ನದಿಗೆ ಹೊರಟು, ಕರಗ ಜೋಡಣೆ ಮಾಡಿ ಶ್ರೀದೇವಿಯ ಸನ್ನಿಧಿಗೆ ತರಲಾಗುತ್ತದೆ. ಬಳಿಕ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಲಿದೆ. ದಿನಾಂಕ 5ರ ಮಂಗಳವಾರದಂದು ಬೆಳಿಗ್ಗೆ 7:00ಗಂಟೆಗೆ ದೇವಿಯ ಸನ್ನಿಧಾನದಿಂದ ತುಂಗಾ ನದಿಗೆ ಹೊರಟು ಹರಕೆಯನ್ನು(ಅಗ್ನಿಕುಂಡ) ತಂದು ಶ್ರೀದೇವಿಗೆ ಸಮರ್ಪಿಸಿ, ಬಳಿಕ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 5:00ಗಂಟೆಗೆ ಪ್ರತಿ ಭಕ್ತಾದಿಗಳ ಮನೆಯಿಂದ ತಂಬಿಟ್ಟು ದೀಪ ಸೇವೆಯನ್ನು ತಂದು ಶ್ರೀಮಾರಿಕಾಂಬ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಸಂಜೆ 7:30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಕೊನೆಯ ದಿನವಾದ ಮೇ6ರ ಬುಧವಾರದಂದು ಬೆಳಿಗ್ಗೆ 8:೦೦ಗಂಟೆಗೆ ಶ್ರೀಮಾರಿಕಾಂಬ ದೇವಿಗೆ ಹರಕೆಯನ್ನು ಒಪ್ಪಿಸಲಾಗುತ್ತದೆ. ಮಧ್ಯಾಹ್ನ 12:30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 6:00ಗಂಟೆಗೆ ಆಚರಣೆಯ ಪ್ರಮುಖ ಭಾಗವಾದ ಕರಗ ಮೆರವಣಿಗೆ ನಡೆಯಲಿದ್ದು, ಶ್ರೀಮಾರಿಕಾಂಬ ದೇವಿಯ ಮೂರ್ತಿಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ತನು ಮನ ಮತ್ತು ಧನದ ಸಹಕಾರದೊಂದಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀದೇವರುಗಳ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀಮಾರಿಕಾಂಬ ದೇವಿಯ ಮತ್ತು ನಾಗದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.








