ಮೇ 7ಕ್ಕೆ ಅಚಲ ಶಚ್ಚಿಂದ್ರ ಹೆಗ್ಡೆ ನೆನಪು-ನುಡಿ ನಮನ
– ಅಚಲ ಅವರ ಸೇವೆ, ಮಾನವೀಯ ಮೌಲ್ಯ ನೆನೆಯುವ ಕಾರ್ಯಕ್ರಮ
– ತೀರ್ಥಹಳ್ಳಿಯ ಟಿಎಸ್ ಟಿ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಕ್ರೀಡಾಪಟು, ರಾಷ್ಟ್ರಮಟ್ಟದ ಮಾಜಿ ಖೋ ಖೋ ಆಟಗಾರ್ತಿ ಹಾಗೂ ಕೊಡಚಾದ್ರಿ ಮಹಿಳಾ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಅಚಲ ಶಚ್ಚಿಂದ್ರ ಹೆಗ್ಡೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಇದೀಗ ಅವರ ಸೇವೆ, ಮಾನವೀಯ ಮೌಲ್ಯವನ್ನು ನೆನೆಯುವ ಸಂದರ್ಭ.
ಅಚಲ ಶಚ್ಚಿಂದ್ರ ಹೆಗ್ಡೆ ತಮ್ಮ ನಿಷ್ಕಲ್ಮಶ ನಗು ಮತ್ತು ಸ್ನೇಹದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇವರ ಅಕಾಲಿಕ ಮರಣ ಇಂದಿಗೂ ಕೆಲವರ ಪಾಲಿಗೆ ಆರಗಿಸಿಕೊಳ್ಳಲಾಗದ ಕಹಿ ಸತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಆಪ್ತರು ಮತ್ತು ಹಿತೈಷಿಗಳು ಸೇರಿಕೊಂಡು ಶ್ರೀಮತಿ ಅಚಲ ಅವರ ಜೀವನೋತ್ಸಾಹ ಮತ್ತು ಸ್ನೇಹಮಯ ವ್ಯಕ್ತಿತ್ವವನ್ನು ಸ್ಮರಿಸಿಕೊಳ್ಳಲು ನಿಶ್ಚಯಿಸಿದ್ದು, ಇದರ ಅಂಗವಾಗಿ ಮೇ 7ರ ಗುರುವಾರದಂದು ಮಧ್ಯಾಹ್ನ 3:30ಕ್ಕೆ ‘ನೆನಪು ನುಡಿ ನಮನ’ ಕಾರ್ಯಕ್ರಮವನ್ನು, ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕುವೆಂಪು ಲೇಔಟ್, ಕೆ.ಸಿ.ರಸ್ತೆಯಲ್ಲಿನ ಟಿಎಸ್ ಟಿ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದಾರೆ. ಈ ನೆನಪಿನ ಕಾರ್ಯಕ್ರಮಕ್ಕೆ ಎಲ್ಲಾ ಅಚಲ ಶಚ್ಚಿಂದ್ರ ಹೆಗ್ಡೆ ಅವರ ಸ್ನೇಹಿತರು, ಆಪ್ತರು, ಕೊಡಚಾದ್ರಿ ಮಹಿಳಾ ಬ್ಯಾಂಕ್ ಷೇರುದಾರರು, ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು, ಸಮಸ್ತ ತೀರ್ಥಹಳ್ಳಿ ಜನತೆಯನ್ನು ಸ್ವಾಗತಿಸಿದ್ದಾರೆ.








