ಸಹ್ಯಾದ್ರಿ ಐಸಿಎಸ್ಇ ಶಾಲೆ ಅಮೋಘ ಸಾಧನೆ!
– ನಿರಂತರ 13 ವರ್ಷ ಶೇ.100 ಫಲಿತಾಂಶ ದಾಖಲು
– ತೀರ್ಥಹಳ್ಳಿಯಲ್ಲಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಸಾಧನೆ: ಅಭಿನಂದನೆಗಳು
ತೀರ್ಥಹಳ್ಳಿ ಪಟ್ಟಣದ ಸಹ್ಯಾದ್ರಿ ಐಸಿಎಸ್ಇ ಶಾಲೆ ಈ ವರ್ಷ ಕೂಡ ಶೇ.100 ಫಲಿತಾಂಶ ದಾಖಲು ಮಾಡುವ ಮೂಲಕ ಸಾಧನೆ ಮಾಡಿದೆ. 13 ವರ್ಷಗಳ ಶೇಕಡ 100 ಫಲಿತಾಂಶದ ದಾಖಲೆ ಮಾಡಿದ್ದು, 2025- 2026 ನೇ ಸಾಲಿನಲ್ಲಿ ಐಸಿಎಸ್ಇ ಬೋರ್ಡ್ ಪರೀಕ್ಷೆಗೆ ಒಟ್ಟು 60 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 25 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, 03 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸಿನಲ್ಲಿ ಉತ್ತೀರ್ಣ ರಾಗುವ ಮೂಲಕ ಈ ಬಾರಿಯೂ ಶೇಖಡ 100ರ ಫಲಿತಾಂಶದ ದಾಖಲೆಯನ್ನು ಮಾಡಿ, ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದ ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.








