
ನೂತನ ಎಂಎಲ್ಸಿ ಬಿಟಿ ಶ್ರೀನಿವಾಸ್ ಅಭಿನಂದನೆ ಸಂಭ್ರಮ!
– ನನ್ನ ಗೆಲುವಿಗೆ ಶ್ರಮಿಸಿದ ಎಲ್ಲ ಮತದಾರರಿಗೆ ಧನ್ಯವಾದ
– ಬಿಜೆಪಿ, ಕಾರಜೋಳ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
NAMMUR EXPRESS NEWS
ಹೊಸದುರ್ಗ : ನಿರಂತರ ಆಶ್ರಮವಹಿಸಿ ನನ್ನ ಗೆಲುವಿಗೆ ಕಾರಣರಾದ ನನ್ನ ಕ್ಷೇತ್ರದ ಎಲ್ಲಾ ಶಾಸಕರು ಸಚಿವರು ಹಾಗೂ ಮತದಾರ ಬಂಧುಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಭರವಸೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ ಅಭಿನಂದನಾ ಸಮಾರಂಭ’ ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು, ನಿರಂತರವಾಗಿ ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸುವೆ, ಶಿಕ್ಷಕರಿಗೆ ಸಂಬಂಧಿಸಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಅರಿವಿದೆ. ಏಳನೇ ವೇತನ ಆಯೋಗ ಜಾರಿ, ಒ.ಪಿ.ಎಸ್ ಜಾರಿ, ಅನುದಾನಿತ ಶಾಲೆಗಳ ಬಲಪಡಿಸುವಿಕೆ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಾಮಾಣಿಕ ಪ್ರಯತ್ನ ಮಾಡಿ, ಸಮಸ್ಯೆಗಳಿಗೆ ಅಂತ್ಯ ಹಾಡುವೆ. ಮತದಾರರ ಆರ್ಶೀವಾದಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುವೆ ಎಂದರು.
ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೇತನ ತಾರತಮ್ಯ , ಅನುದಾನಿತ ಶಾಲಾ ಶಿಕ್ಷಕರು ಅತಂತ್ರ ಸ್ಥಿತಿ, ಖಾಲಿ ಹುದ್ದೆಗಳು, 414 ಕ್ಕೂ ಅಧಿಕ ಅನುದಾನಿತ ಶಾಲೆಗಳು ಸರ್ಕಾರದ ಆದೇಶಕ್ಕೆ ಎದುರು ನೋಡುತ್ತಿರುವುದು, ಎಷ್ಟೋ ಜನ ಶಿಕ್ಷಕರಿಗೆ ನಿಗದಿತ ಸಮಯದಲ್ಲಿ ಸಂಬಳ ಆಗುತ್ತಿಲ್ಲ, ಶೇ. 100 ರಷ್ಟು ಡಿಪ್ಲೋಮಾ ಕಾಲೇಜುಗಳಲ್ಲಿ ಪ್ರಾಂಶುಪಾಲರಿಲ್ಲ, ವರ್ಗಾವಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಈ ಭಾಗದಲ್ಲಿ 1952 ರಿಂದಲೂ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ, ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ನಮ್ಮದೆ ಸರ್ಕಾರವಿದ್ದು, ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುವೆ ಎಂದು ಭರವಸೆ ನೀಡಿದರು.
ನಮ್ಮ ರಾಜ್ಯದಲ್ಲಿ ಹಣಕಾಸು ಮುಗ್ಗಟ್ಟು ಎದುರಾಗುವಂತೆ ಮಾಡಿರುವುದು ಬಿಜೆಪಿ ಸರ್ಕಾರ, ಅವರೇ ಪಾಪರ್ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ನೀಡುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಿದೆ, ಹಣಕಾಸಿನ ತೊಂದರೆ ಎದುರಾಗದಂತೆ ನಿಭಾಯಿಸುತ್ತಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಮಾಜಿ ಮುಖ್ಯಮಂತ್ರಿ ‘ಎಸ್. ನಿಜಲಿಂಗಪ್ಪ, ಹಾಗೂ ಮಾಜಿ ಸಚಿವ ಏಕಾಂತಯ್ಯ ಸೇರಿದಂತೆ ಹಲವು ಮುತ್ಸದ್ದಿ ರಾಜಕಾರಣಿಗಳು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸಮರ್ಥರಿದ್ದಾರೆ, ಈ ಬಗ್ಗೆ ನೂತನ ಸಂಸದರಿಗೆ ಆಲಸ್ಯ ಬೇಡ. ಎಲ್ಲಾ ತಾಲ್ಲೂಕುಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೇ ಮಾತನಾಡುತ್ತಾರೆ, ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಾ? ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ್ದೀರಾ? ಲೆಕ್ಕ ಕೊಡಿ ಎಂದು ಸಂಸದ ಗೋವಿಂದ ಎಂ ಕಾರಜೋಳ ವಿರುದ್ಧ ಹರಿಹಾಯ್ದರು.
367 ಕೆರೆಗಳಿಗೆ ನೀರು ತುಂಬಿಸಲು ಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರ. ಮಾಡದಕೆರೆ ಹಾಗೂ ಕಸಬಾ ಹೋಬಳಿ ಕೆರೆಗಳಿಗೆ ಸದ್ಯದಲ್ಲೇ ಭದ್ರಾ ನೀರು ಬರಲಿದ್ದು, ಪ್ರಥಮ ಫಲಾನುಭವಿಗಳು ಹೊಸದುರ್ಗ ತಾಲ್ಲೂಕಿನವರಾಗುತ್ತಾರೆ. ಇಲ್ಲಿ ನೂತನ ಸಂಸದರು ಮಾಡುವಂತ ಕೆಲಸವಿಲ್ಲ. ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂಬ ಮಾತನ್ನು ಹಿಂಪಡೆಯಿರಿ. ರಾಜ್ಯ ಸರ್ಕಾರದ ವಿರುದ್ಧ ಮಾತನಾಡದೆ, ಕೇಂದ್ರದಿಂದ ಅನುದಾನ ತಂದು ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿರಿ. ಮಾತು ಕಡಿಮೆ ಮಾಡಿ, ಕೆಲಸ ಮಾಡಿ, ಎಂದು ಕಾರಜೋಳ ಅವರಿಗೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರನ್ನು ಗೆಲ್ಲಿಸಿಬೇಕೆಂದು ಬಹಳ ಕೆಲಸ ಮಾಡಿದರೂ, ಸೋಲಾಗಿದೆ. ಜನರ ತೀರ್ಪಿಗೆ ಬದ್ಧರಾಗಿದ್ದು, ಸ್ವಾಗತಿಸುತ್ತೇವೆ. ಮತದಾರರ ಮನಸ್ಸು ಗೆಲ್ಲುವುದರಲ್ಲಿ ವಿಫಲರಾಗಿದ್ದೇವೆ. ಈ ಸೋಲಿನ ಹೊಣೆ ಹೊರುತ್ತೇವೆಂದು ಶಾಸಕರು ಭಾವುಕರಾದರು.’ ಸೋತರೂ, ಗೆದ್ದರೂ ಜನ ಸಂಪರ್ಕ ಹೊಂದಿದ್ದಾರೆ. ಕ್ಷೇತ್ರದ ಜನತೆಗೆ ದುಡಿದಿದ್ದೇನೆ. ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸೋಲಾಗಿದೆ. ಎದೆಗುಂದದೆ ಈ ಅನೀರಿಕ್ಷಿತ ಸೋಲನ್ನು ಸ್ವೀಕರಿಸುವೆ ಎಂದು ಮಾಜಿ ಸಂಸದೆ ಬಿ.ಎನ್. ಚಂದ್ರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದರು.’
ಈ ವೇಳೆ ಕೆಪಿಸಿಸಿ ಸದಸ್ಯರುಗಳಾದ ಎಂ.ಪಿ. ಶಂಕರ್, ಅಲ್ತಾಫ್ ಪಾಷಾ, ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪದ್ಮನಾಭ್, ಲೋಕೇಶ್ವರಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶೇಖರಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಉಪನ್ಯಾಸಕರ ಸಂಘದ ಅಧ್ಯಕ್ಷ ಕಾಂತ್ ರಾಜ್ ಎ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಕಾಂಗ್ರೆಸ್ ಮುಖಂಡರುಗಳಾದ ಗೋ. ತಿಪ್ಪೇಶ್, ಯಶ್ವಂತ್ ಗೌಡ, ರಾಜೇಂದ್ರ ಪ್ರಸಾದ್, ದೀಪಿಕಾ ಸತೀಶ್, ಎಂ.ಎಚ್ ಕೃಷ್ಣಮೂರ್ತಿ, ಲೋಕೇಶ್ವರಪ್ಪ, ನಾಯಿಗೆರೆ ಚಂದ್ರಶೇಖರ್, ಕೆಂಚಪ್ಪ, ಹನುಮನಾಯ್ಕ್, ಟಿ. ರವೀಂದ್ರ, ಅಜ್ಜಪ್ಪ ಬನಸೀಹಳ್ಳಿ, ಕೆ.ಸಿ ನಿಂಗಪ್ಪ, ಸುಬ್ಬಣ್ಣ , ನೇತ್ರಾವತಿ, ಇಲ್ಕಲ್ ಅಜ್ಜಪ್ಪ, ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಧರ್, ಜಯಣ್ಣ ಐಟಿಐ ಕಾಲೇಜು ಉಪನ್ಯಾಸಕರು, ಸುರೇಶ್ ಆರ್. ಲಕ್ಷ್ಮಯ್ಯ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಿಕ್ಷಕರುಗಳಿದ್ದರು.
