ಉಡುಪಿ: ದೇಶದ ಹಲವೆಡೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಸೇವಿಸಲು ಯೋಗ್ಯವಲ್ಲದ ಆಹಾರ ಉತ್ಪನ್ನಗಳನ್ನು ಪತ್ತೆ ಮಾಡುತ್ತಿರುವ ನಡುವೆಯೇ, ಸಾಮಾನ್ಯರು ಹೆಚ್ಚಾಗಿ ಬಳಸುವ ಬಾಳೆಹಣ್ಣಿಗೂ ಕೃತಕ ಬಣ್ಣ ಹಚ್ಚಿ ಮಾರಾಟ ಮಾಡುತ್ತಿದ್ದ ಜಾಲ ಉಡುಪಿಯಲ್ಲಿ ಬಯಲಾಗಿದೆ.
ಗುರುವಾರ (ಆ.20) ಉಡುಪಿ ತಾಲೂಕಿನ ಅಲೆವೂರಿನಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದ ತಂಡ ಬಾಳೆಕಾಯಿ ಮಂಡಿಗೆ ದಾಳಿ ನಡೆಸಿದ್ದು, ಕೃತಕ ಬಣ್ಣ ಹಚ್ಚಿ ಮಾರಾಟಕ್ಕೆ ಸಿದ್ಧಪಡಿಸಿದ್ದ ಸುಮಾರು 5 ಸಾವಿರ ಕೆಜಿ ಬಾಳೆಕಾಯಿಗಳನ್ನು ಸೀಜ್ ಮಾಡಿದೆ. ವಶಪಡಿಸಿಕೊಂಡ ಬಾಳೆಕಾಯಿಗಳ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಬಾಳೆಕಾಯಿಗಳಿಗೆ ಕೃತಕ ಬಣ್ಣ ಹಚ್ಚಲು ಬಳಸುತ್ತಿದ್ದ ರಾಸಾಯನಿಕಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಡಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿ ರಶ್ಮಿ ನೇತೃತ್ವದ ತಂಡವು ಅಲೆವೂರಿನ ಮೂರು ಕಡೆ ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ಅಕ್ರಮ ಬಯಲಾಗಿದೆ
ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ: ವೇಗಕ್ಕೆ ಪಟ್ಟು!
ಕರಾವಳಿ: ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಮಂಜುನಾಥ್ ಭಂಡಾರಿ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಭಾಗಶಹ ಅರಣ್ಯ ಸಂಬಂಧಿಸಿದ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ತಾಂತ್ರಿಕ ಕಾರಣಗಳಿಂದ ಕುಂಟುತ್ತಾ ಸಾಗಿದ್ದು ಇದರಿಂದ ಸಾರ್ವಜನಿಕರಿಗೆ ಅಗತ್ಯ ನಿರಪೇಕ್ಷಣ ಪಡೆಯಲು ಅಡೆತಡೆ ಉಂಟಾಗಿದ್ದು ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಆದಷ್ಟು ಬೇಗ ಸರ್ವೆ ಕಾರ್ಯ ಮುಗಿಸಲು ಹಾಗೂ ಮೂಲಭೂತ ಸೌಲಭ್ಯಗಳ ಕುರಿತ ಕಾಮಗಾರಿಗಳಿಗೆ ಬೇಕಾದ ನಿರಾಕ್ಷೇಪಣಾ ಪತ್ರವನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಮಾನ್ಯ ಅರಣ್ಯ ಜೀವಶಾಸ್ತ್ರ ಹಾಗೂ ಪರಿಸರ ಮಂತ್ರಿಗಳನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು







