ಬೆಂಗಳೂರು: ಬಸ್ ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ಬಸ್ ಗಳಲ್ಲಿ ಪ್ರಯಾಣಿಸುವವರು ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡುವುದು, ಜೋರಾಗಿ ಶಬ್ಧವನ್ನಿಟ್ಟುಕೊಂಡು ಹಾಡು ಕೇಳುವುದು, ರೀಲ್ಸ್ ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮವನ್ನು ಮೀರಿ ಈ ರೀತಿ ವರ್ತಿಸಿ ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡಿದರೆ ಅಂತಹ ವ್ಯಕ್ತಿಗಳನ್ನು ಬಸ್ ನಿಂದ ಯಾವುದೇ ಮುಲಾಜಿಲ್ಲದೆ ಕೆಳಗಿಳಿಸುವಂತೆ ಬಸ್ ನ ನಿರ್ವಾಹಕರಿಗೆ ಸಂಸ್ಥೆಯ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಬಸ್ಸಲ್ಲಿ ಕೂಡ ಈ ನಿಯಮ ಇದೆ.
ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡುವುದು, ಜೋರಾಗಿ ಹಾಡು ಕೇಳುವುದು, ಯೂಟ್ಯೂಬ್ ವಿಡಿಯೋ, ರೀಲ್ಸ್ ಗಳನ್ನು ಹಾಕಿಕೊಂಡು ನೋಡುವ ಮೂಲಕ ಇತರ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವುದನ್ನು ನಿಷೇಧಿಸಲಾಗಿದ್ದು, ಇದನ್ನು ಬೆಂಗಳೂರು ಮಹಾನಗರ ಪಾಲಿಕೆ ಬಸ್ ಗಳಲ್ಲೂ ನಿಯಮ ಬದ್ಧವಾಗಿ ಅಳವಡಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು ನಿರ್ಣಯವನ್ನು ಕೈಗೊಂಡಿದೆ.







