ಬೆಂಗಳೂರು: ಮಲೆನಾಡು ಮೂಲದ ಖ್ಯಾತ ಗಾಯಕಿ ಡಾ.ಶಮಿತಾ ಮಲ್ನಾಡ್ ಅವರ ವಿಶೇಷ ಮಹಿಳಾ ಬ್ಯಾಂಡ್ ‘ಜನನಿ’ ತಂಡದಿಂದ ಅಕ್ಟೋಬರ್ 9ರ ಶುಕ್ರವಾರದಂದು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಡಾ.ಟಿ.ಎ.ಶರವಣ ಅವರ ಸಹಯೋಗದೊಂದಿಗೆ ‘ಸಂಗೀತ ಮತ್ತು ಆಧ್ಯಾತ್ಮ’ ಕಾರ್ಯಕ್ರಮವನ್ನು ಸಂಜೆ 5:30ಕ್ಕೆ ಬೆಂಗಳೂರಿನ ಯಡಿಯೂರು ಕೆರೆಯಲ್ಲಿರುವ ಪುನೀತ್ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಅವಧೂತರಾದ ಶ್ರೀ ಶ್ರೀ ಶ್ರೀ ವಿನಯ್ ಗುರೂಜಿ ಅವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನನಿ ತಂಡದ ಹಾಡುಗಳ ಬಿಡುಗಡೆ, ಸಂಗೀತ ಮತ್ತು ಸಂವಾದ ನಡೆಯಲಿದೆ.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಸ್.ಪಿ.ದಯಾನಂದ್, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಶ್ವನಾಥ್ ಪಿ.ಹಿರೇಮಠ್, ಸಮಾಜ ಸೇವಕರಾದ ನೀಲಕಂಠ ಆರ್. ಗೌಡ, ಬೆಂಗಳೂರು ಮೆಟ್ರೋದ ಕಾರ್ಯನಿರ್ವಾಹಕ ನಿರ್ದೇಶಕರಾದ ಶಾಂತ ಎಲ್ ಹುಲ್ಮನಿ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಎನ್. ಆರ್.ರಮೇಶ್, ಬೆಂಗಳೂರು ಇಂಟರ್ನ್ಯಾಷನಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಸಂಸ್ಥಾಪಕರಾದ ಡಾ.ಡಿ.ಮುನಿರಾಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಾ.ಮಾ.ಹರೀಶ್ ಅವರು ಉಪಸ್ಥಿತಲಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಮನಶಾಸ್ತ್ರಜ್ಞರಾದ ಡಾ.ಪದ್ಮಾಕ್ಷಿ ಲೋಕೇಶ್ ಅವರು ನಡೆಸಿಕೊಡಲಿದ್ದಾರೆ. ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ, ಜಿಕೆಜಿಎಸ್- ಗೆಲುವು ಕನ್ನಡ ಗೆಳೆಯರ ಸಮಿತಿ, ಅಡಿಕೆ ನಾಡು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಮಲೆನಾಡು ಹಿತರಕ್ಷಣಾ ವೇದಿಕೆ, ಮಲೆನಾಡು ಮಿತ್ರ ವೃಂದ, ಸಹ್ಯಾದ್ರಿ ಸಂಘ, ಸುವರ್ಣ ಮಲೆನಾಡು ಸಂಘ ಸಹಕಾರ ನೀಡಲಿದ್ದಾರೆ. ಧ್ವನಿ ಮತ್ತು ಬೆಳಕು ಅನಿಲ್ ಸೌಂಡ್ಸ್ ಮತ್ತು ಮಹೇಶ್ ಕಲಾಧರೆ ತಂಡದವರಿಂದ ನೃತ್ಯ ಪ್ರದರ್ಶನಗೊಳ್ಳಲಿದೆ.
ಸರ್ವರಿಗೂ ಸುಸ್ವಾಗತ







