ತೀರ್ಥಹಳ್ಳಿ: ಲಯನ್ಸ್ ಕ್ಲಬ್ ತೀರ್ಥಹಳ್ಳಿ ಇವರ ನೇತೃತ್ವದಲ್ಲಿ ಈಶ್ವರ್ ಮಲ್ಪೆ ತಂಡದವರ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣಾ ಕಾರ್ಯಕ್ರಮವನ್ನು 25 ಅಕ್ಟೋಬರ್ 2026ರ ಭಾನುವಾರದಂದು ಬೆಳಿಗ್ಗೆ 10:೦೦ ಗಂಟೆಯಿಂದ ಸಂಜೆ 5:00ರವರೆಗೆ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಈಶ್ವರ್ ಮಲ್ಪೆ ತಂಡದವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಇದೀಗ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯಮಾಡುವ ಉದ್ದೇಶದಿಂದಾಗಿ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ.
ಟೀಮ್ ಈಶ್ವರ್ ಮಲ್ಪೆ ಸಂಸ್ಥೆಯಿಂದ ಶ್ರವಣ ಯಂತ್ರಕ್ಕೆ ಆಗುವ ಶೇಕಡ 40ರಷ್ಟು ವೆಚ್ಚವನ್ನು ಮೊತ್ತವನ್ನು ಭರಿಸಲಾಗುತ್ತಿದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಶಿಬಿರದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ತಮ್ಮ ಹೆಸರನ್ನು ಕರೆ ಮಾಡಿ ನೋಂದಾಯಿಸಿಕೊಳ್ಳಬೇಕೆಂದು, ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿಗಳು ಇದ್ದಲ್ಲಿ ಅದನ್ನು ಜೊತೆಗೆ ತೆಗೆದುಕೊಂಡು ಬರಬೇಕೆಂದು, ನೋಂದಾಯಿಸಿಕೊಳ್ಳುವ ಮೊದಲ 20 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಶಿಬಿರದಲ್ಲಿ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಭಾಗವಹಿಸುತ್ತಾರೆ. ಸರ್ವರನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಾಥ್ ಜೋಯ್ಸ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.







