ಕೊಪ್ಪ: ಕೊಪ್ಪ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅವರ ಒಂಬತ್ತನೇ ವರ್ಷದ ಮಲೆನಾಡು ಎಕೋ ಡ್ರೈವ್ ಅತ್ಯಂತ ಯಶಸ್ವಿಯಾಗಿ ನಡೆದಿದೆ. ವಿಕಾಸ್ ಬೇಗಾನೆಯವರ ನಿವಾಸದಲ್ಲಿ ಈ ಒಂದು ಜೀಪ್ ಗಳ ಆಫ್ ರೋಡ್ ರ್ಯಾಲಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಒಟ್ಟು 12 ಕಿಮೀ ಈ ರ್ಯಾಲಿ ನಡೆಸಲಾಗಿದ್ದು ಅತ್ತಿಕುಳಿ ಎಸ್ಟೇಟ್ ನಲ್ಲಿ ಮುಕ್ತಾಯಗೊಳಿಸಲಾಯಿತು.
ಒಟ್ಟು 180ಕ್ಕೂ ಅಧಿಕ ಜೀಪ್ ಗಳು ಆಫ್ ರೋಡ್ ರ್ಯಾಲಿಯಲ್ಲಿ ಬಾಗವಹಿಸಿ ಮಲೆನಾಡು ಎಕೋ ಡ್ರೈವ್ ಅನ್ನು ಯಶಸ್ವಿಗೊಳಿಸಿದರು. ಕಿರಿದಾದ ಟ್ರ್ಯಾಕ್ನಲ್ಲಿ ಜೀಪ್ ಗಳ ಕಲರವ ಹಳ್ಳಕೊಳ್ಳಗಳನ್ನು ದಾಟಿ ಜೀಪುಗಳು ಬರುವುದನ್ನು ನೋಡಿದರೆ ಮೈ ನವಿರೇಳಿಸುತ್ತಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಕೂಡ ಆಫ್ ರೋಡ್ ರ್ಯಾಲಿಗೆ ಬಂದಿದ್ದು ಅತ್ಯಂತ ವಿಶೇಷವಾಗಿತ್ತು.
ಈ ಒಂದು ಆಫ್ ರೋಡ್ ಡ್ರೈವ್ ಅನ್ನು ಚೇತನ್ ರೆಡ್ಡಿ ಹಾಗೂ ವಿಶ್ವನಾಥ್ ಗದ್ದೆಮನೆ ಅವರ ಪ್ರಾಯೋಜಕತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪ ಮೋಟಾರ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷರಾದ ಸಚಿನ್ ನಂದಿಗೋಡು ,ಶಾಸಕರಾದ ಟಿ ಡಿ ರಾಜೇಗೌಡ, ಕೌರಿ ಪ್ರಕಾಶ್, ಬಿ ಜಿ ಗೋಪಾಲ ಗೌಡ, ವಿಕಾಸ್ ಬೇಗಾನೆ, ಪೃಥಿರಾಜ್ ಕೌರಿ, ರೋಹಿತ್ ಬಾಳೆಗದ್ದೆ, ಸುನೀಲ್ ಇ , ಅನೂಪ್ ನಾರ್ವೆ, ಇಂದ್ರೇಶ್, ವಿಜಯ್ ತನೂಡಿ, ಸತೀಶ್ ಗದ್ದೆಮನೆ, ಕೇಶವ ಗೌಡ ತನೊಡಿ ಉಪಸ್ಥಿತರಿದ್ದರು.
ಕೊಪ್ಪ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದು 2026 ರ ಮಲ್ನಾಡ್ ಎಕೋ ಡ್ರೈವ್ ಅನ್ನು ಯಶಸ್ವಿಗೊಳಿಸಿದರು. ತನುಡಿ, ಮಕ್ಕಿಮನೆ, ಹತ್ತಿಕುಳಿ ಗ್ರಾಮಸ್ಥರು ಸಹಕಾರ ನೀಡಿದ್ದರು.







