ಹೊಸನಗರ: ರಸ್ತೆ ಸಂಪೂರ್ಣ ಅಸ್ತವ್ಯಸ್ತ..!!
– ಮರು ಡಾಂಬರೀಕರಣಕ್ಕೆ ಇಟ್ಟ ಹಣ ಏನಾಯ್ತು?
– ಅಪಾಯಕಾರಿಯದಂತಹ ರಸ್ತೆಯಿಂದ ಸಾರ್ವಜನಿಕರಿಗೆ ತೊಂದರೆ
NAMMUR EXPRESS NEWS
ಹೊಸನಗರ ತಾಲೂಕು ತ್ರಿಣಿವೇ ಗ್ರಾಮ ಪಂಚಾಯತ್ ರಾಮಚಂದ್ರಪುರ ಮಠಕ್ಕೆ ಸಂಪರ್ಕವಾಗಿರುವ ರಸ್ತೆ ನೇರಳೆಯಿಂದ ಹೊಳೆಮತ್ತಿ, ಹೊಳೆಮತ್ತಿ – ಇಟ್ಟಕ್ಕಿಯಿಂದ ಬಿಲ್ಲೋಡಿವರೆಗಿನ ರಸ್ತೆಯ ಅಭಿವೃದ್ಧಿ 14 ವರ್ಷಗಳ ಹಿಂದೆ ಪೂರ್ಣಗೊಂಡಿತ್ತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಈ ರಸ್ತೆ 2014ರಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ರಸ್ತೆ ಅಭಿವೃದ್ಧಿಗೆ ಅಥವಾ ಮರು ಡಾಂಬರೀಕರಣಕ್ಕೆ ಆರು ವರ್ಷಕ್ಕೆ ಅವಧಿಯನ್ನು ನಿಗದಿಪಡಿಸಲಾಗಿತ್ತು ಆದರೆ ಹತ್ತು ವರ್ಷಗಳು ಪೂರ್ಣಗೊಂಡಿದ್ದರೂ ಕೂಡ ಯಾವುದೇ ರೀತಿಯ ಡಾಂಬರೀಕರಣ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಒಂದು ಕೋಟಿ ಹಣವನ್ನು ಕೂಡ ಈ ಡಾಂಬರೀಕರಣಕ್ಕಾಗಿ ಮೀಸಲಿಟ್ಟಿದ್ದಾರೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಆದ್ದರಿಂದ ಸ್ಥಳೀಯರು ಕೂಡ ಡಾಂಬರೀಕರಣ ಆಗಬೇಕು ಎಂದು ಅಗ್ರಹಿಸಿದ್ದಾರೆ ಯಾವುದೇ ರೀತಿಯಲ್ಲೂ ಕೂಡ ಅಭಿವೃದ್ಧಿಪಡಿಸುತ್ತಿಲ್ಲ.
ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಮೂರು ವರ್ಷಗಳ ನಂತರ ಕೂಡ ಅಭಿವೃದ್ಧಿ ಮಾಡುತ್ತೇವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು ಇನ್ನೂ ಕೂಡ ಯಾವುದೇ ರೀತಿಯ ರಸ್ತೆ ಡಾಂಬರೀಕರಣ ಮಾಡಿಲ್ಲ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ರೀತಿಯ ಸಮಸ್ಯೆ ಎದುರಾಗಿದೆ. ಎಲ್ಲಾ ರೀತಿಯಲ್ಲೂ ಕೂಡ ಅಧಿಕಾರಿಗಳಿಗೆ, ಶಾಸಕ ಆರಗ ಜ್ಞಾನೇಂದ್ರ ಎಲ್ಲರಿಗೂ ಕೂಡ ಈ ರಸ್ತೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯ ಸಮಸ್ಯೆಗಳು ಸಾರ್ವಜನಿಕರು ಎದುರಿಸುವಂತಹ ಆಗಿದೆ.
ತುಂಬಾ ಅಪಾಯಕಾರಿ ಆದಂತಹ ರಸ್ತೆಯಾಗಿದೆ, ಅದರಲ್ಲೂ ಕಾಡು ಪ್ರಾಣಿಗಳ ಸಂಚಾರ ತುಂಬಾ ಹೆಚ್ಚಾಗಿದೆ. ಸೇತುವೆ ಕೂಡ ಸಂಪೂರ್ಣ ಹದಗೆಟ್ಟಿದೆ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ರೀತಿಯ ನಷ್ಟ ಎದುರಾಗುತ್ತಿದೆ. ಸರಿಯಾದ ಬಸ್ಸಿನ ವ್ಯವಸ್ಥೆ ಕೂಡ ಇಲ್ಲ ಈ ರೀತಿಯ ರಸ್ತೆ ಹದಗೆಟ್ಟಿರುವುದರಿಂದ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಾರ್ವಜನಿಕರು ಪ್ರತಿಯೊಬ್ಬರಿಗೂ ಕೂಡ ಸಮಸ್ಯೆಗಳು ಎದುರಿಸುವಂತಾಗಿದೆ. ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೂ ಕೂಡ ಸ್ಥಳೀಯರಿಂದ ಮಾಹಿತಿಗಳನ್ನು ರವಾನೆ ಮಾಡಲಾಗಿದೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳು ಕೂಡ ನಡೆಯುತ್ತಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.








