ತೀರ್ಥಹಳ್ಳಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಲೆನಾಡ ಗ್ರಾಹಕರ ಮೆಚ್ಚಿನ ಚಿನ್ನಾಭರಣ ಮಳಿಗೆ ಗಾಯತ್ರಿ ಜುವೆಲ್ಲರ್ಸ್ ಅಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಲಾಯಿತು.
ಸಾಮಾಜಿಕ ಕೆಲಸದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಮಂಜುನಾಥ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ಉತ್ತಮ ಶಿಕ್ಷಕರು ಎಂದು ಸನ್ಮಾನಿಸಿ ಗೌರವಿಸಲಾಯಿತು.
ಸುಮಾರು 13 ಶಿಕ್ಷಕರಿಗೆ ಹಾಗೂ ಪ್ರೌಢಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಣ ಅಧ್ಯಕ್ಷರು ಸನ್ಮಾನಿಸಲಾಯಿತು.
ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕ ಅನಂತ ಪದ್ಮನಾಭ ಸೇವಾ ಹೆಜ್ಜೆ
ಸನ್ಮಾನದ ನಂತರ ಎಲ್ಲಾ ಶಿಕ್ಷಕರು ತಮ್ಮ ಶಿಕ್ಷಣ ದಿನಾಚರಣೆಯ ಶುಭ ನುಡಿಯನ್ನು ನುಡಿದರು. ಕಾರ್ಯಕ್ರಮ ಆಯೋಜನೆ ಮೂಲಕ ಶಿಕ್ಷಣ ಕ್ಷೇತ್ರದ ಸಾಧಕರನ್ನು ಗೌರವಿಸಿದ ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಅವರು, ಸಮಾಜಕ್ಕೆ ಶಿಕ್ಷಕರ ಸೇವೆ ಅಪಾರ. ಮುಂದಿನ ವರ್ಷದಲ್ಲಿ ಉತ್ತಮ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರಿಗೂ ಕೂಡ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಅವರನ್ನು ಕೂಡ ಸನ್ಮಾನಿಸುವ ಗೌರವಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಡಾನ್ ರಾಮಣ್ಣ ಹಾಗೂ ಗಾಯತ್ರಿ ಜ್ಯುವೆಲ್ಲರ್ಸಿನ ಹಿತೈಷಿಗಳು ಹಾಗೂ ಗ್ರಾಹಕರು ಶಿಕ್ಷಕರು ಹಾಗೂ ಗಾಯತ್ರಿ ಜುವೆಲ್ಲರ್ಸಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕಾರ ಮಾಡಿದ ಶಿಕ್ಷಕರು
1. ಶಿವಪ್ಪ – ಸರ್ಕಾರಿ ಪ್ರೌಢಶಾಲೆ ಹೆದ್ದೂರು
2. ಶ್ರೀಧರ್- ಸರ್ಕಾರಿ ಪ್ರೌಢಶಾಲೆ ಮೇಳಿಗೆ
3. ಅನಿತ- ಸರ್ಕಾರಿ ಪ್ರೌಢಶಾಲೆ ಗುಡ್ಡೇಕೊಪ್ಪ
4. ಶಾಹಿದಾ- ಸರ್ಕಾರಿ ಪ್ರೌಢಶಾಲೆ ಕೊಂಡ್ಲೂರು
5. ನಾಗರಾಜ ಕೆ.ಬಿ- ಸರ್ಕಾರಿ ಪ್ರೌಢಶಾಲೆ ಕನ್ನಂಗಿ
6. ವಾಸುದೇವ- ಎಸ್.ವಿ.ಎಸ್ ಪ್ರೌಢಶಾಲೆ ಆಗುಂಬೆ
7. ಮಾರುತಿ- ಸರ್ಕಾರಿ ಪ್ರೌಢಶಾಲೆ ಕಡ್ತೂರು
8. ಮಂಜಣ್ಣ ನಾಯಕ್- ಡಾ.ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿ
9. ಜಯಲಕ್ಷ್ಮೀ ಎನ್- ಪಿ.ಎಂ.ಶ್ರೀ ಶಾಲೆ ಹಿರೇಗದ್ದೆ
10.ಪ್ರಕಾಶ್ ಟಿ.ಪಿ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟೆಹಕ್ಕಲು
11. ಪೂರ್ಣಿಮಾ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳಗಾರು
12. ಸವಿತಾ ಪಿ.ಎಸ್- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ
13. ಸುದರ್ಶನ್- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದಲ
14. ಗಾಯಿತ್ರಿ ಕೆ.ಎಲ್- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತ್ಯಾರಂದೂರು
15. ಗೀತಾ ಎಲ್.ಎಂ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಂಚದಕಟ್ಟೆ





