ತೀರ್ಥಹಳ್ಳಿ: ರೈತರು, ಕೃಷಿ ಕಾರ್ಮಿಕರ ಬದುಕನ್ನೇ ದುರ್ಬರಗೊಳಿಸುವ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಸಹಕಾರ ನಾಯಕರು ಆದ ಡಾ. ಮಂಜುನಾಥ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಬೃಹತ್ ಪಾದಯಾತ್ರೆ ನಡೆದಿದೆ.
ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಈ ಹೋರಾಟ ಹಮ್ಮಿಕೊಂಡಿದ್ದು ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ ತೀರ್ಥಹಳ್ಳಿ ಪಟ್ಟಣದ ಸಮೀಪದ ಉಂಟೂರು ಕಟ್ಟೆ ಕೈಮರದಿಂದ ಪ್ರಾರಂಭಗೊಂಡು ತಾಲೂಕು ಕಚೇರಿಯ ಆವರಣದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಸಲಾಗುತ್ತಿದೆ.
ಉಂಟೂರುಕಟ್ಟೆ ಕೈಮರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ವೇದಿಕೆಯಿಂದ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದೆ. ಶಾಸಕ ಬೇಳೂರು ಗೋಪಾಲಕೃಷ್ಣ, ಶಿಮುಲ್ ಅಧ್ಯಕ್ಷ ವಿದ್ಯಾಧರ, ವಿಜಯದೇವ್ ಸೇರಿ ನೂರಾರು ನಾಯಕರು, ಮುಖಂಡರು ಪಾಲ್ಗೊಂಡಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ 146 ಗ್ರಾಮಗಳು, ಸಾಗರದ 126 ಗ್ರಾಮಗಳು, ಹೊಸನಗರದ 125 ಗ್ರಾಮಗಳು, ಶಿವಮೊಗ್ಗದ 64 ಗ್ರಾಮಗಳು, ಶಿಕಾರಿಪುರದ 12 ಗ್ರಾಮಗಳು ಭಾದಿತ ಗ್ರಾಮಗಳಾಗಿದ್ದು, ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಜನವಿರೋಧಿ ಅಧಿಸೂಚನೆಯನ್ನು ಕೈ ಬಿಡಲು ಭಾರೀ ಪ್ರಮಾಣದ ಹೋರಾಟ ನಡೆಯುತ್ತಿದೆ.
ತೀರ್ಥಹಳ್ಳಿ ಹಾಗೂ ಹೊಸನಗರ, ಶಿವಮೊಗ್ಗ ಭಾಗದ ಡಾ. ಸುಂದರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ , ಶಶಿಧರ್ ರೆಹಮತುಲ್ಲಾ ಅಸಾದಿ,ಶಶಾಂಕ್ ಹೆಗಡೆ, ನಾಬಳ ಸಚಿಂದ್ರ ಹೆಗಡೆ, ಜೀನ ವಿಕ್ಟರ್, ರಾಘವೇಂದ್ರ ಶೆಟ್ಟಿ,ಸುಶೀಲ ಶೆಟ್ಟಿ, ಕಟ್ಟೆಹಕ್ಕು ಕಿರಣ್, ಹಾರೋಗೋಳಿಗೆ ಪದ್ಮಾನಾಬ್ ಸೇರಿದಂತೆ ನೂರಾರು ಮುಖಂಡರು ಭಾಗಿಯಾಗಿದ್ದಾರೆ.







