ಟಾಪ್ 3 ನ್ಯೂಸ್ ತೀರ್ಥಹಳ್ಳಿ
ಸಕ್ರೆಬೈಲ್ ಬಳಿ ಬೈಕಿಗೆ ಸಿಕ್ಕಿ ಚಿರತೆ ಸಾವು!
– ಬೈಕ್ ಸವಾರ ಗಂಭೀರ: ಕೇಸು ದಾಖಲು
ತೀರ್ಥಹಳ್ಳಿಯಲ್ಲಿ ಗೋ ಸಾಗಿಸುತ್ತಿದ್ದವರ ಮೇಲೆ ಹಲ್ಲೆ!
– ವಾಹನ ಸಮೇತ ಮೂವರ ತೀರ್ಥಹಳ್ಳಿ ಪೊಲೀಸರು ವಶಕ್ಕೆ: ಸಂಧಾನ?
ತೀರ್ಥಹಳ್ಳಿ, ತಳುವೆ, ಹಿಲಿಕೆರೆಯಲ್ಲಿ ಕಾರು ಆಕ್ಸಿಡೆಂಟ್!
– ತೀರ್ಥಹಳ್ಳಿ ತಾಲೂಕಲ್ಲಿ ಹೆಚ್ಚಿದ ಅಪಘಾತ: ಕಾರಣ ಏನು?
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸಕ್ರೆಬೈಲ್ ಬಳಿ ಶುಕ್ರವಾರ ಮಧ್ಯಾಹ್ನ ಬೈಕ್ ಹಾಗೂ ಚಿರತೆ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿರತೆಯೊಂದು ಸಾವನ್ನಪ್ಪಿದ್ದು ಬೈಕ್ ಸವಾರನನ್ನು ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ಸವಾರನಿಗೆ ಅರಣ್ಯ ಪ್ರದೇಶದಿಂದ ಚಿರತೆ ಹಠಾತ್ತನೆ ರಸ್ತೆ ದಾಟಲು ಬಂದಿದ್ದು, ಕ್ಷಣಾರ್ಧದಲ್ಲಿ ಬೈಕ್ ಚಿರತೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಗೋ ಸಾಗಿಸುತ್ತಿದ್ದವರ ಮೇಲೆ ಹಲ್ಲೆ!
– ವಾಹನ ಸಮೇತ ಮೂವರ ತೀರ್ಥಹಳ್ಳಿ ಪೊಲೀಸರು ವಶಕ್ಕೆ: ಸಂಧಾನ?
ತೀರ್ಥಹಳ್ಳಿ ನಗರದಿಂದ ದಾವಣಗೆರೆಗೆ ಈಚರ್ ವಾಹನದಲ್ಲಿ ಗೋವನ್ನು ಸಾಗಿಸುತ್ತಿದ್ದ ವಾಹನದ ಸಮೇತ ಮೂವರನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಣಂದೂರು ಸಮೀಪ ವಾಹನವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು ವಾಹನದಲ್ಲಿ ಹತ್ತು ಗೋವುಗಳು ಇದ್ದವು. ಮಾಹಿತಿ ಪ್ರಕಾರ ಗೋವನ್ನು ದಾವಣಗೆರೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕೆಲ ಯುವಕರು ಘಟನೆ ವೇಳೆ ಓರ್ವನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನವನ್ನು ಇರಿಸಲಾಗಿದ್ದು ವಾಹನದಲ್ಲಿ ಗೋವನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.. ಹೈವೇ ಪೆಟ್ರೋಲ್ ಮಾಳೂರು ಠಾಣೆಯ ಮಂಜಪ್ಪ ಹಾಗೂ ಡ್ರೈವರ್ ಡಿಸೋಜ ಅವರು ಕಾರ್ಯಾಚರಣೆ ನಡೆಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದ ಗೋಶಾಲೆಗೆ ದನಗಳನ್ನು ಸಾಗಿಸುತ್ತಿದ್ದ ಬಿಜೆಪಿ ಮುಖಂಡ ಒಡ್ಡಿನ ಬೈಲು ಸುಬ್ಬಣ್ಣ ಎಂಬುವರು ದನ ಕದಿಯುತ್ತಿದ್ದಾರೆ ಎಂಬ ತಪ್ಪು ತಿಳುವಳಿಕೆಯಿಂದ ಸುಬ್ಬಣ್ಣ ಅವರನ್ನ ಹಿಡಿದು ತಳ್ಳಾಡಿ, ಚಾಲಕನ ಮೇಲೆ ಹಲ್ಲೆಗೈದು ವಾಹನ ಸಮೇತ ಪೊಲೀಸರಿಗೆ ಒಪ್ಪಿಸಿದ್ದರೆ, ಶಾಸಕ ಜ್ಞಾನೇಂದ್ರರ ಮಧ್ಯ ಪ್ರವೇಶ ಮಾಡಿ ಪೊಲೀಸರಿಗೆ ವಾಸ್ತವ ಮನವರಿಕೆ ಮಾಡಿಕೊಟ್ಟು ದನಗಳನ್ನು ಚಿತ್ರದುರ್ಗದ ಗೋಶಾಲೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಸಂಧಾನ ಮಾಡಿದರು ಎಂದು ತಿಳಿದು ಬಂದಿದೆ.
ತಳುವೆ, ಹಿಲಿಕೆರೆಯಲ್ಲಿ ಕಾರು ಅಪಘಾತ: ಗಾಯ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತಳುವೆ, ಹಿಲಿಕೆರೆ ಬಳಿ ನಡೆದ ಪ್ರತ್ಯೇಕ ಕಾರು ಅಪಘಾತದಲ್ಲಿ ಎರಡು ಕಾರುಗಳು ಶುಕ್ರವಾರ ಜಖಮ್ ಗೊಂಡಿವೆ. ತಳುವೆ ಬಳಿ ಕಾರೊಂದು ಮೋರಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ. ಇನ್ನು ಹಿಲಿಕೆರೆ ಜಟ್ಟಿನಮಕ್ಕಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿದೆ.








