ಟಾಪ್ 3 ನ್ಯೂಸ್ ತೀರ್ಥಹಳ್ಳಿ: ಏನೇನು?
– ತೀರ್ಥಹಳ್ಳಿ : ಅಸಾದಿ ವಿರುದ್ಧ ಅ.18ಕ್ಕೆ ಅವಿಶ್ವಾಸ ಮಂಡನೆಗೆ ಸಭೆ
– ತೀರ್ಥಹಳ್ಳಿಯಲ್ಲಿ ಡಾ.ಜಿ ಶಂಕರ್ ಹುಟ್ಟುಹಬ್ಬ ಆಚರಣೆ
– ಸಹ್ಯಾದ್ರಿ ಶಾಲೆ, ಕುಶಾವತಿಯಲ್ಲಿ ವಾಲ್ಮೀಕಿ ನಮನ
NAMMUR EXPRESS NEWS
ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿ ಅಧ್ಯಕ್ಷ್ಯ ರೆಹಮತ್ ಉಲ್ಲಾ ಅಸಾದಿ ವಿರುದ್ಧ ಕಾಂಗ್ರೆಸ್ ಪಕ್ಷದ 6 ಕೌನ್ಸಿಲರ್ಗಳು ಅವಿಶ್ವಾಸ ವ್ಯಕ್ತಪಡಿಸಿ ಪತ್ರ ನೀಡಿ 38 ದಿನಗಳು ಕಳೆದಿದೆ. ನಾನಾ ರೀತಿಯ ತಂತ್ರ ಪ್ರಯೋಗದ ಮೂಲಕ ಅಸಾದಿ ಹಾಗೂ ಹೀಗೂ ಅವಿಶ್ವಾಸನಿರ್ಣಯ ಸಭೆ ನಡೆಯದಂತೆ ನೋಡಿಕೊಂಡಿದ್ದರು. ಇದೀಗ ಕೊನೆಗೂ ಅವಿಶ್ವಾಸ ನಿರ್ಣಯದ ಸಭೆಗೆ ಇದೇ ತಿಂಗಳ 18ನೇ ತಾರೀಖು ನಿಗದಿಯಾಗಿದೆ.
ಆ ದಿನ ಸಭೆಯಲ್ಲಿ ಬಿಜೆಪಿ ಸದಸ್ಯರು ಕೈಗೊಳ್ಳುವ ತೀರ್ಮಾನದ ಮೇಲೆ ಅಸಾದಿ ಭವಿಷ್ಯ ನಿರ್ಧಾರವಾಗಲಿದೆ.
– ತೀರ್ಥಹಳ್ಳಿಯಲ್ಲಿ ಡಾ.ಜಿ ಶಂಕರ್ ಹುಟ್ಟುಹಬ್ಬ ಆಚರಣೆ..!!
ತೀರ್ಥಹಳ್ಳಿ ತಾಲ್ಲೂಕು ಮೊಗವೀರ ಮಹಾಜನ ಸಂಘ ಮತ್ತು ಮೊಗವೀರ ಯುವಸಂಘಟನೆಯ ವತಿಯಿಂದ ನಾಡೋಜ ಡಾ.ಜಿ. ಶಂಕರ್ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಅ. 5ರ ಭಾನುವಾರದಂದು ಬಸವಾನಿಯ ಸಾವಿತ್ರಮ್ಮ ರಾಮಶ್ರಮ ಸೇವಾಟ್ರಸ್ಟ್ ಮಾತೃಮಂದಿರ ಆಶ್ರಮದಲ್ಲಿ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ.ಜಿ. ಶಂಕರ್ ಅವರು ಮೊಗವೀರ ಸಮಾಜದ ಶಕ್ತಿ, ಸಮಾಜದ ಆಸ್ತಿ. ಇವರು ಎಲ್ಲರ ನಾಯಕರಾಗಿ ರೂಪುಗೊಂಡಿದ್ದು, ನೂರುಕಾಲ ಸುಖವಾಗಿ ಬಾಳಲಿ, ಆ ಮೂಲಕ ಸಮಾಜೋದ್ದಾರದ ಕಾರ್ಯ ಇವರಿಂದ ಇನಷ್ಟು ನಡೆಯಲಿ ಎಂದು ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಸಹ್ಯಾದ್ರಿ ಶಾಲೆ, ಕುಶಾವತಿಯಲ್ಲಿ ವಾಲ್ಮೀಕಿ ನಮನ
ದಿನಾಂಕ 7/10/25ರಂದು ಸಹ್ಯಾದ್ರಿ ಆಂಗ್ಲಮಾಧ್ಯಮ ಶಾಲೆ ಕುಶಾವತಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಕೂಳೂರು ಕೃಷ್ಣಮೂರ್ತಿರವರು, ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಗ್ನೆಸ್ ಮೆಂಡೋನ್ಸ ಮತ್ತು ಸಹಶಿಕ್ಷಕರ ಉಪಸ್ಥಿತಿಯಲ್ಲಿ ಶ್ರೀ ರಾಮಾಯಣದ ಕರ್ತೃ ,ಆದಿಕವಿ ವಾಲ್ಮೀಕಿ ರವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ಸ್ಮರಿಸುತ್ತಾ ,ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಸಹಶಿಕ್ಷಕಿ ಕಾವ್ಯಶ್ರೀರವರು ವಾಲ್ಮೀಕಿರವರ ಜೀವನ -ಸಾಧನೆ, ರಾಮಾಯಣದ ರಚನೆಯ ಕುರಿತು ತಿಳಿಸಿದರು. ಮುಖ್ಯ ಶಿಕ್ಷಕಿಯಾದ ಆಗ್ನೆಸ್ ಮೆಂಡೋನ್ಸರವರು ಸರ್ವರಿಗೂ ವಂದಿಸಿದರು.








