ಶಿವಮೊಗ್ಗ: ಅಡಿಕೆ ದರದಲ್ಲಿ ಕೊಂಚ ಏರಿಕೆ ಕಾಣುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಡಿಕೆಯ ದರ ನವೆಂಬರ್ 5ರ ಗುರುವಾರದ ದರದಲ್ಲಿ ಈ ಹಿಂದೆ 49.169 ರೂಪಾಯಿಯಷ್ಟಿದ್ದ ರಾಶಿ, ಇಡಿ ಅಡಿಕೆ ದರವು ಇದೀಗ 50.000ದ ಗಡಿ ದಾಟಿದೆ.
ಇನ್ನುಳಿದಂತೆ ಸರಕು/ಹಸ ಅಡಿಕೆ ದರವು ಕ್ವಿಂಟಲ್ ಗೆ ಕನಿಷ್ಠ 55.50, ಗರಿಷ್ಠ 93.29 ಮತ್ತು ಮಾದರಿ ದರ 83.30, ಬೆಟ್ಟೆ ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 51.574, ಗರಿಷ್ಠ 58.66 ಮತ್ತು ಮಾದರಿ ದರ 57.65, ರಾಶಿ ಇಡಿ ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 42.೦೦, ಗರಿಷ್ಠ 50.೦೦ ಮತ್ತು ಮಾದರಿ ದರ 47.58, ಗೊರಬಲು ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 19.೦೦, ಗರಿಷ್ಠ 39.39 ಮತ್ತು ಮಾದರಿ ದರ 36. 41, ಹೊಸ ರಾಶಿ ಇಡಿ ಅಡಿಕೆ ದರ ಕ್ವಿಂಟಲ್ ಗೆ ಕನಿಷ್ಠ 45.19, ಗರಿಷ್ಠ 48.78 ಮತ್ತು ಮಾದರಿ ಬೆಲೆ 47.58 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಅಡಿಕೆ ದರ ಏರಿಕೆ ಕಾಣುತ್ತಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.







