ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಶುರುವಾಗಿದೆ, ಆರು ದಿನಗಳ ಕಾಲ ಬೇರೆ ಬೇರೆ ಹೆಸರು ಮತ್ತು ವಿಧಾನಗಳಲ್ಲಿ ಹಬ್ಬ ಆಚರಿಸಲ್ಪಡುತ್ತಿದೆ. ಯಾವತ್ತು ಏನೇನಿದೆ..? ಇಲ್ಲಿದೆ ಮಾಹಿತಿ.
ಯಾವತ್ತು ಏನೇನು…?
– ನವೆಂಬರ್ 7ರ ಶನಿವಾರದಂದು ನೀರು ತುಂಬುವ ಹಬ್ಬ
– ನವೆಂಬರ್ 8ರ ಭಾನುವಾರದಂದು ಅಭ್ಯಂಜನ ಸ್ನಾನ ಅಥವಾ ನರಕ ಚತುರ್ದಶಿ ಹಾಗೂ ಧನಲಕ್ಷ್ಮೀ ಪೂಜೆ ನಡೆಯಲಿದೆ.
– ನವೆಂಬರ್ 9ರ ಸೋಮವಾರದಂದು ಅಮಾವಾಸ್ಯೆ ಅಥವಾ ಧಾನ್ಯಲಕ್ಷ್ಮೀ ಪೂಜೆ ನೆರವೇರಲಿದ್ದು ಅಂದು ಕೆಲವೆಡೆ ಗೋಪೂಜೆಯನ್ನು ಆಚರಿಸುತ್ತಿದ್ದಾರೆ.
ನವೆಂಬರ್ 10ರ ಮಂಗಳವಾರದಂದು ಕೂಡ ಬಲಿಪಾಡ್ಯಮಿ ಅಂಗವಾಗಿ ಗೋಪೂಜೆ ನೆರವೇರಲಿದೆ.
ನವೆಂಬರ್ 11ರ ಬುಧವಾರದಂದು ಹಬ್ಬದ ಕರಿ ಅಥವಾ ಭಗಿನೀ ಗೃಹೇ ಭೋಜನಂ ಎಂದು ಕೆಲವು ಸಮುದಾಯದವರು ಈ ಹಬ್ಬವನ್ನು ಆಚರಿಸಲಿದ್ದಾರೆ.
ನವೆಂಬರ್ 12ರ ಗುರುವಾರದಂದು ಅಂತಿಮವಾಗಿ ವರ್ಷ ತುಡುಕು ಅಥವಾ ಕದಿರು ತರುವದನ್ನು ಬೆಳಿಗ್ಗೆ 7.30ರಿಂದ 9:೦೦ ಗಂಟೆಯ ಒಳಗೆ ಅಥವಾ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1:30ರ ಒಳಗೆ ಆಚರಿಸಲಾಗುವುದು.
ಸಮಸ್ತ ಜನತೆಗೆ ದೀಪಾವಳಿ ಶುಭಾಶಯಗಳು







