ತೀರ್ಥಹಳ್ಳಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸು ಏಕಾಏಕಿ ಹಿಮ್ಮುಖವಾಗಿ ಚಳಿಸಿದ ಪರಿಣಾಮ 5ಕ್ಕೂ ಹೆಚ್ಚು ಕಾರುಗಳು ಜಕಂಗೊಂಡ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.
ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು ರಾಜಲಕ್ಷ್ಮಿ ಬಸ್ ಡ್ರೈವರ್ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ನೂರಾರು ಜನ ಸೇರಿದ್ದಾರೆ. ಹಳೆಯ ಬಸ್ ಇದಾಗಿದ್ದು ಭೀಕರ ಅಪಘಾತ ನಡೆಯುವ ಸಾಧ್ಯತೆ ಇತ್ತು. ಪೊಲೀಸರು ಜನರನ್ನು ಚದುರಿಸಿದರು







