ನವದೆಹಲಿ: ಸಾರ್ವಜನಿಕರು ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಿ ಅಥವಾ ಸೇವೆಯನ್ನು ಪಡೆದುಕೊಂಡಾದ ಬಳಿಕ ಅವುಗಳಿಗೆ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಮಾಡುವುದು ಸಹಜ. ಆದರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇದೀಗ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ನಿರ್ಣಯದ ಪ್ರಕಾರ ಇನ್ನು ಮುಂದೆ ಇಂತಹ ವ್ಯವಸ್ಥೆಗಳ ಮೂಲಕ ಜನರು ಹಣವನ್ನು ಪಾವತಿಸಿದ್ದೇ ಆದಲ್ಲಿ ಅದಕ್ಕೆ ಶುಲ್ಕವನ್ನು ತೆರಬೇಕಾಗಿದೆ. ಮಾಹಿತಿಯ ಪ್ರಕಾರ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಯುಪಿಐ ಮೂಲಕ ಹಣವನ್ನು ವರ್ಗಾಯಿಸಿದರೆ ಅದಕ್ಕೆ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆದರೆ 2000ಕ್ಕಿಂತ ಮೇಲ್ಪಟ್ಟ ಮೊತ್ತವನ್ನು ಇವುಗಳ ಮೂಲಕ ವರ್ಗಾಯಿಸಿದರೆ ಶೇಕಡ 0.4ರಷ್ಟು ಅಂದರೆ 300 ರೂಪಾಯಿಗಳಷ್ಟು ಗರಿಷ್ಠ ಶುಲ್ಕ ಇರಲಿದೆ. ಹಾಗೆಯೇ 2000ಕ್ಕಿಂತ ಕಡಿಮೆ ಮೊತ್ತವನ್ನು ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ವರ್ಗಾಯಿಸಿದ್ದಲ್ಲಿ ಎಂದಿನಂತೆಯೇ ಉಚಿತವಾಗಿಯೇ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಕಳೆದ ಆರುವರ್ಷಗಳಿಂದ ಈ ರೀತಿಯ ಸೇವೆಗಳು ಉಚಿತವಾಗಿಯೇ ನಡೆಯುತ್ತಿದ್ದವು. ಇದರೊಂದಿಗೆ ಜನಸಾಮಾನ್ಯರ ದೈನಂದಿನ ಅಗತ್ಯ ಸೇವೆಗಳಾದ ರೈಲ್ವೆ, ವಿದ್ಯುತ್, ನೀರು, ಶಿಕ್ಷಣ ಶುಲ್ಕ ಮೊದಲಾದವುಗಳಿಗೆ ಮಾಡಲಾಗುವ ಪಾವತಿಯ ಮೊತ್ತ ನೂರು ರೂಪಾಯಿ ಮೇಲ್ಪಟ್ಟು ಎಷ್ಟೇ ಇದ್ದರೂ 5ರೂಪಾಯಿ ಪಾವತಿಸುವುದನ್ನು ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ ಹೊಸ ಶುಲ್ಕ ಕೇವಲ ವ್ಯಾಪಾರಿಗಳಿಗೆ ಮಾತ್ರ ವಿಧಿಸಲಾಗಿದ್ದು, ಇದನ್ನು ಗ್ರಾಹಕರು ಪಾವತಿಸಬೇಕಿಲ್ಲ ಎನ್ನುವುದನ್ನು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಈ ಹೊಸ ನಿಯಮದ ಪ್ರಕಾರ 2000 ರೂಪಾಯಿ ಮೇಲ್ಪಟ್ಟ ವ್ಯಾಪಾರಿಗಳು ಮತ್ತು ಗ್ರಾಹಕರ ವಹಿವಾಟುಗಳ ಮೇಲೆ 0.4ರಷ್ಟು ವಹಿವಾಟು ಶುಲ್ಕವನ್ನು ವಿಧಿಸಲು ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದ್ದು, ಅಕ್ಟೋಬರ್ 15 ರಿಂದ ಜಾರಿಗೊಳಿಸುವಂತೆ ಆದೇಶವನ್ನು ನೀಡಲಾಗಿದೆ. ಹಾಗೆಯೇ 75.000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಪಾವತಿಗೆ 300 ರೂಪಾಯಿಗಳಷ್ಟು ಶುಲ್ಕದ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಹಿಂದೆ ತಿಳಿಸಿರುವಂತೆ 2000ಕ್ಕಿಂತ ಕಡಿಮೆ ಮೌಲ್ಯದ ಹಣ ಪಾವತಿಗೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಹಣದ ಪಾವತಿಯ ಪ್ರಮಾಣ ಶೇಕಡ 37ರಷ್ಟಿದ್ದರೆ ಮತ್ತು ಬೆಲೆಯಲ್ಲಿ ಶೇಕಡ 70ರಷ್ಟು ಪಾಲನ್ನು ಹೊಂದಿದ್ದರೆ ಯಾವುದೇ ರೀತಿಯ ಶುಲ್ಕವಿರದೆ, ಹಿಂದಿನಂತೆ ಉಚಿತ ಸೇವೆ ಲಭ್ಯವಾಗಲಿದೆ.







