ತೀರ್ಥಹಳ್ಳಿ: ಬ್ರಹ್ಮಾವರದ ಎಸ್.ಎಂ.ಎಸ್. ಕನ್ವೆನ್ಷನ್ ಹಾಲ್ನಲ್ಲಿ ಅ.25ರಂದು ನಡೆದ ರಾಷ್ಟ್ರಮಟ್ಟದ ವಿಕೆ ಬುಡೋಕನ್ ಟ್ರೋಫಿ–2026 ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಪ್ರಶಸ್ತಿ ವಿಜೇತರ ವಿವರ ಹೀಗಿದೆ:
1. ಅಚಿಂತ್ಯ ಜಿ. ಭಟ್ (Achintya G. Bhat) – ಕುಮಿಟೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ.
2. ಅಜ್ರಾ ಇಲ್ಹಾಮ್ (Azra Ilham) – ಕುಮಿಟೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ.
3. ಕ್ಲಿಯೋನ್ ಫ್ಯಾಬಿಯೊ ಮಾರ್ಟಿಸ್ (Cleon Fabio Martis) – ಕುಮಿಟೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ.
4. ಅಭಿನವ್ (Abhinav) – ಕುಮಿಟೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ.
5. ಅರ್ಫಾ ಜಿಖ್ರಾ (Arfa Zikhra) – ಕುಮಿಟೆ ಪ್ರಥಮ ಸ್ಥಾನ, ಕಟಾ ತೃತೀಯ ಸ್ಥಾನ.
6. ಮನಿತ್ ಜೆ. (Manith J.) – ಕುಮಿಟೆ ಪ್ರಥಮ ಸ್ಥಾನ, ಕಟಾ ತೃತೀಯ ಸ್ಥಾನ.
7. ಆರ್ಯನ್ ಅಚ್ಚುತ ನಾಯಕ್ (Aryan Achutha Nayak) – ಕುಮಿಟೆ ಪ್ರಥಮ ಸ್ಥಾನ, ಕಟಾ ತೃತೀಯ ಸ್ಥಾನ.
8. ಧೀಮಂತ್ ಡಿ. ರಾವ್ (Dheemanth D. Rao) – ಕುಮಿಟೆ ಪ್ರಥಮ ಸ್ಥಾನ.
9. ಅಯ್ಮಾನ್ ಖಲಾತ್ ಶರೀಫ್ (Ayman Khalath Shariff) – ಕುಮಿಟೆ ತೃತೀಯ ಸ್ಥಾನ.
ವಿದ್ಯಾರ್ಥಿಗಳ ಈ ಸಾಧನೆಗೆ ಅವರ ನಿರಂತರ ಅಭ್ಯಾಸ, ಶಿಸ್ತು ಮತ್ತು ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಈ ಯಶಸ್ಸಿಗೆ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ನ ಮುಖ್ಯಸ್ಥರಾದ ಮಹಾಬಲ ಜೋಯಿಸ್ ಅವರು ಹರ್ಷ ವ್ಯಕ್ತಪಡಿಸಿ, ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.







