ಶೃಂಗೇರಿ: ಮನುಷ್ಯನಿಗೆ ಸಾವು ಯಾವ ರೂಪದಲ್ಲಾದರೂ ಬರಬಹುದು ಎನ್ನುವ ಮಾತು ಜಲಜನಿತವಾಗಿದೆ. ಆದರೆ ಯುವಕನೊಬ್ಬನ ಪಾಲಿಗೆ ಯಮನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ರೂಪದಲ್ಲಿ ಬಂದಿರುವ ಹೃದಯ ವಿದ್ರಾವಕ ಘಟನೆ, ಸೋಮವಾರದಂದು ಮೆಣಸೆ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಬಸ್ ಮತ್ತು ಬೈಕ್ ನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇದರ ಪರಿಣಾಮವಾಗಿ ಬೈಕ್ ಸವಾರನಾದ ಯುವಕ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಮೃತ ದುರ್ದೈವಿಯನ್ನು ಕುಂಚೇಬೈಲ್ ಸಮೀಪದ ಹೊಸನಗರ ಸೈಟ್ ನಿವಾಸಿ, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಕುಲಾಲ್ ಎಂದು ಗುರುತಿಸಲಾಗಿದೆ.
5 ದಿನದ ಹಿಂದೆ ಮದುವೆಯಾಗಿದ್ದವ ಅಪಘಾತಕ್ಕೆ ಬಲಿ!
ನಾಗರಾಜ್ ಕುಲಾಲ್ ಅವರ ವಿವಾಹವು ಕಳೆದ ಐದು ದಿನಗಳ ಹಿಂದೆಯಷ್ಟೇ ನಡೆದಿದ್ದು, ಮದುವೆ ಮುಗಿದ ಸಂಭ್ರಮದಲ್ಲಿದ್ದ ಮನೆ ಈಗ ಸೂತಕದ ವಾತಾವರಣದಿಂದ ಕೂಡಿ, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.







