ತೀರ್ಥಹಳ್ಳಿ : ಆಗಸ್ಟ್ 28 ರ ಶುಕ್ರವಾರ ಬೆಳಿಗ್ಗೆ 9-30ಕ್ಕೆ ಕುರುವಳ್ಳಿ ಬೊಮ್ಮ ರಸ ಯ್ಯನ ಅಗ್ರಹಾರದ ಶ್ರೀ ಗುರು ಮಂದಿರದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜನ್ಮ ಜಯಂತಿ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ, ಈ ಶುಭ ಕಾರ್ಯದಲ್ಲಿ ಭಾಗವಹಿಸಿ ಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾ ಗಬೇಕೆಂದು ತೀರ್ಥಹಳ್ಳಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.
ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ
ತೀರ್ಥಹಳ್ಳಿ : ರಥಬೀದಿಯಲ್ಲಿರುವ ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾ ನದ ಶ್ರೀ ಮಹಾಲಕ್ಷ್ಮೀ ಅಮ್ಮನವರ ಸಾನಿಧ್ಯದಲ್ಲಿ ವರ್ಷಂಪ್ರತಿಯಂತೆ ದಿನಾಂಕ : 28-08-2026 ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯನ್ನು ಶ್ರದ್ಧಾಭಕ್ತಿ ಪೂರ್ವಕವಾಗಿ ಆಚರಿಸಲಾಗುವುದು.ಬೆಳಗ್ಗೆ 9-30ಕ್ಕೆ ಪ್ರಾರ್ಥನೆ, ಕಲಶ ಸ್ಥಾಪನೆ ಮಹಾಲಕ್ಷ್ಮೀ ಅಮ್ಮನವರಿಗೆ ಮುತ್ತೈದೆಯರಿಂದ ಉಡಿ ತುಂಬುವುದು, ಕುಂಕುಮಾರ್ಚನೆ ಜರುಗಲಿರುವುದು. ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ
5-30ಕ್ಕೆ ಮಹಾದ್ವಾರ ತೆರೆದು, ದೀಪನಮಸ್ಕಾರ, ಉಡಿ ತುಂಬುವುದು, ಕುಂಕುಮಾರ್ಚನೆ ಮತ್ತು ಶ್ರೀಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ “ಬಾರೇ ಭಾಗ್ಯದ ನಿಧಿಯೇ” ವಿಶೇಷ ಭಜನಾ ಕಾರ್ಯಕ್ರಮ ಜರುಗಲಿರುವುದು. ಭಕ್ತಾದಿಗಳು ಅತೀಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಶ್ರೀದೇವರ ಕೃಪೆಗೆ ಪಾತ್ರರಾಗಬೇ ಕಾಗಿ ವಿನಂತಿ. ಉಡಿ ತುಂಬುವವರಿಗೆ ಉಡಿ ನಾಮಾಗ್ರಿಗಳು ದೇವಸ್ಥಾನದಲ್ಲಿ ದೊರಕುತ್ತದೆ.
ಕುಪ್ಪಳಿ ಸಮೀಪ ಮುಸ್ಸಿನಕೊಪ್ಪದಲ್ಲಿ ಮಹಾ ಲಕ್ಷ್ಮಿ ಹಬ್ಬ: ಧರ್ಮಸ್ಥಳ ಸಂಘ, ಸ್ಥಳೀಯ ಸ್ತ್ರೀ ಶಕ್ತಿ ಸಂಘ, ಆವಿಷ್ಕಾರ್ ಮಲ್ಟಿ ಪರ್ಪಸ್ ಸೊಸೈಟಿ ಆಯೋಜನೆ
ದೇವಂಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಪರಮಪೂಜ್ಯ ಡಾ॥ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಆವಿಷ್ಕಾರ ಸೌಹಾರ್ದ ಮಲ್ಟಿಪರ್ಪಸ್ ಕೋ-ಅಪರೇಟಿನ್ ಸೊಸೈಟಿ ಲಿ., ಸಂಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ತೀರ್ಥಹಳ್ಳಿ ತಾಲೂಕು ಮುಸ್ಸಿನಕೊಪ್ಪದಲ್ಲಿ ನೇತ್ರಾವತಿ & ಸಿರಿ ಸಂಘದ ವತಿಯಿಂದ ನಡೆಯಲಿದೆ. 28-08-2026 ನೇ ಶುಕ್ರವಾರ, ಸಮಯ : ಬೆಳಿಗ್ಗೆ 9:00 ಕ್ಕೆ ಶ್ರೀ ಧರ್ಮಶ್ರೀ ಯುವಕ ಮಂಡಳ, ಮುಸ್ಸಿನಕೊಪ್ಪ, ಕಲ್ಲುಕೊಡಿಗೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ. ಸರ್ವರನ್ನು ಸ್ವಾಗತಿಸಲಾಗಿದೆ.







