ರಾಜಧಾನಿಯಲ್ಲಿ ನ.15ರಂದು ಕಾಡಸುರಗಿ ಪುಸ್ತಕ ಬಿಡುಗಡೆ
– ಮಲೆನಾಡಿನ 40 ಮಂದಿ ಸಾಧಕರ ಸಾಧನೆಯ ಕುರಿತು ಬರಹ
– ಲೇಖಕ ಎಸ್ ಶ್ರೀಧರ ಮೂರ್ತಿಯವರ ಮುಂದಾಳತ್ವದಲ್ಲಿ ಪುಸ್ತಕ
NAMMUR EXPRESS NEWS
ಬೆಂಗಳೂರು: ಬೆಂಗಳೂರು ಮಲೆನಾಡ ಬರಹಗಾರರ ವೇದಿಕೆಯಿಂದ ನವಂಬರ್ 15ರಂದು ಸಂಜೆ 5:30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ಕಾಡಸುರಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುಸ್ತಕದಲ್ಲಿ ಮಲೆನಾಡಿನ 40 ಮಂದಿ ಸಾಧಕರ ಸಾಧನೆಯ ಕುರಿತು ಬರಹಗಳಿದ್ದು ಮಲೆನಾಡಿನವರೇ ಆದ 18 ಮಂದಿ ಬರಹಗಾರರನ್ನು ಗುರುತಿಸಿ ಅವರಿಗೆ ಸೂಚಿಸಿದ ಸಾಧಕರ ಬಗ್ಗೆ ವಿಷಯ ಸಂಗ್ರಹಿಸಿದ ಲೇಖನಗಳು ಈ ಕಾಡಸುರಗಿಯ ಗೊಂಚಲಾಗಿವೆ. ನಾಡಿನ ಪ್ರಸಿದ್ಧ ಬರಹಗಾರರೂ ಮತ್ತು ಲೇಖಕರೂ ಆದ ಎನ್ ಎಸ್ ಶ್ರೀಧರಮೂರ್ತಿಯವರ ಮುಂದಾಳತ್ವದಲ್ಲಿ ಈ ಪುಸ್ತಕವನ್ನು ಸಿದ್ಧಗೊಳಿಸಲಾಗಿದ್ದೂ ಈ ಪುಸ್ತಕ ಅವರ ತರಲು ಎಂ ಆರ್ ಸುರೇಶ್, ಮಂಡಗದ್ದೆ ಶ್ರೀನಿವಾಸಯ್ಯ, ಹೆಚ್. ಸಿ ಜಯಪ್ರಕಾಶ್ ಅವರ ಶ್ರಮವಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ನಿರ್ದೇಶಕರಾದ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಈ ಪುಸ್ತಕ ಬಿಡುಗಡೆಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ.ಬಿ.ಆರ್.ಗುರುಪ್ರಸಾದ್ ಆಗಮಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಮಲೆನಾಡು ಬರಹಗಾರ ಪ್ರೊ. ಎನ್ ಎಸ್ ಶ್ರೀಧರಮೂರ್ತಿ ವೇದಿಕೆ ಬೆಂಗಳೂರು ಇದರ ಅಧ್ಯಕ್ಷರಾದ ವಹಿಸುವರು. ಪುಸ್ತಕದ ಸಂಪಾದಕ ಮಂಡಳಿಯಲ್ಲಿ ಮಂಡಗದ್ದೆ ಶ್ರೀನಿವಾಸಯ್ಯ, ಚಿದಾನಂದ ಹೆಗ್ಗಾರು, ಹೆಚ್ ಸಿ ಜಯಪ್ರಕಾಶ್, ಪ್ರೊ. ಎನ್ ಎಸ್
ಶ್ರೀಧರಮೂರ್ತಿಯವರಿದ್ದಾರೆ. ಸರ್ವರೂ ಈ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡ ಬರಹಗಾರರ ವೇದಿಕೆಯಿಂದ ನವೆಂಬರ್ 15ರಂದು ಸಂಜೆ 5:30ಕ್ಕೆ ಬೆಂಗಳೂರು ಆಗಮಿಸುವಂತೆ ಹೆಚ್ ಸಿ ಜಯಪ್ರಕಾಶ್ ಮನವಿ ಮಾಡಿದ್ದಾರೆ.








