ತೀರ್ಥಹಳ್ಳಿ: ತೀರ್ಥಹಳ್ಳಿ ಜೀವ ವಿಮಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ಮೂಲದ ಯುವ
ಎಲ್ಐಸಿ ಅಧಿಕಾರಿ ಶಮಿತ್ (40 ವರ್ಷ) ತೀರ್ಥಹಳ್ಳಿ ಬೆಟ್ಟ ಮಕ್ಕಿಯಲ್ಲಿ ತಾವು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೆಪ್ಟೆಂಬರ್ 1 ರ
ಸಂಜೆ 5:00 ವೇಳೆಗೆ ವಿಚಾರ ಮನೆ ಮಾಲೀಕರ ಗಮನಕ್ಕೆ ಬಂದಿದೆ. ಶಮಿತ್ ಅವರ ಕುಟುಂಬದವರು ಮಂಗಳೂರಿನಲ್ಲಿದ್ದು ಮನೆಯಲ್ಲಿ ಅವರೊಬ್ಬರೇ ಇದ್ದರು ಎನ್ನಲಾಗಿದೆ.
ಸೆ.3ರಂದು ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಸಭೆ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ 157 ಗ್ರಾಮಗಳಿಗೆ ಆತಂಕ ಉಂಟು ಮಾಡಿರುವ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ತಾಲೂಕಿನ ವತಿಯಿಂದ ಈ ವರದಿಯನ್ನು ಖಂಡಿಸುವ ಸಲುವಾಗಿ ಸೆಪ್ಟೆಂಬರ್ 3 ನೇ ತಾರೀಕು ಮಧ್ಯಾಹ್ನ 3 ಘಂಟೆಗೆ ತೀರ್ಥಹಳ್ಳಿ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ
ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಮುಖಂಡರು ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, , ರೈತ ಬಾಂಧವರು ಸಾರ್ವಜನಿಕರನ್ನು ಕಸ್ತೂರಿರಂಗನ್ ವರದಿ ವಿರೋಧಿ ನಿರ್ಣಯವನ್ನು ಮಾಡುವ ಸಲುವಾಗಿ ಪಕ್ಷಾತೀತವಾದ ಈ ಸಭೆಗೆ ಆಗಮಿಸಲು
ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಹೆಲ್ಮೆಟ್ ಕಳ್ಳರು ಹೆಚ್ಚಳ: ದಿನ ನಿತ್ಯ 5 ಹೆಲ್ಮೆಟ್ ಕಳ್ಳತನ!
ತೀರ್ಥಹಳ್ಳಿ ಪಟ್ಟಣದಲ್ಲಿ ದಿನ ನಿತ್ಯ 5ಕ್ಕೂ ಹೆಚ್ಚು ಹೆಲ್ಮೆಟ್ ಕಳ್ಳತನವಾಗುತ್ತಿದೆ. ಬೈಕ್ ಕಳ್ಳರನ್ನು ಇನ್ನು ಪೊಲೀಸರು ಹಿಡಿದಿಲ್ಲ. ಆದರೆ ಹೆಲ್ಮೆಟ್ ಕಳ್ಳರು ಹೆಚ್ಚಾಗಿದ್ದಾರೆ.







