ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾಗೆ ಅದ್ದೂರಿ ಸಿದ್ಧತೆ ನಡೆದಿದೆ. 4 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಲವು ಸಂಚಾಲಕ ನೇತೃತ್ವದಲ್ಲಿ ದಸರಾ ಕಾರ್ಯಕ್ರಮ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ದಸರಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ದಸರಾ ಮುಖ್ಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಈ ಬಗ್ಗೆ
ತೀರ್ಥಹಳ್ಳಿಯ ಮಯೂರ ಹೋಟೆಲ್ ಸಭಾಂಗಣದಲ್ಲಿ ಮಾಹಿತಿ ನೀಡಿ, ಅ.21ರಂದು ವಿಜಯದಶಮಿಯಂದು ಅದ್ದೂರಿಯಾಗಿ ದಸರಾ ಮೆರವಣಿಗೆ ನಡೆಯಲಿದೆ.
ಶಾಸಕ ಆರಗ ಜ್ಞಾನೇಂದ್ರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲು ತಿಳಿಸಿದ್ದಾರೆ..
ಈ ಬಾರಿ ಏನೆಲ್ಲಾ ಕಾರ್ಯಕ್ರಮ ಇರುತ್ತೆ..!?
17 -10-2026 ರ ಶನಿವಾರ ಬೆಳಗ್ಗೆ 10 ಗಂಟೆಗೆ ಯುವ ದಸರಾ ಕಾರ್ಯಕ್ರಮ ನಡೆಯಲಿದೆ.. ತುಂಗಾ ತೀರದ ಮರಳು ಗುಡ್ಡೆಯ ಮೇಲೆ ಯುವಕರಿಗೆ ಹಾಗೂ ಮಹಿಳೆಯರಿಗೆ ರೋಮಾಂಚನಕಾರಿ ಆಟೋಟ ಸ್ಪರ್ಧೆಗಳು ನಡೆಯಲಿದೆ. ಪ್ರಮುಖವಾಗಿ ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಗಿರಿಗಟ್ಲೆ ಸೇರಿ ಹಲವು ಆಟೋಟ ಸ್ಪರ್ಧೆಗಳು ನಡೆಯಲಿದೆ.. ಇದರ ಜೊತೆಗೆ ಆಕರ್ಷಕ ಡಿಜೆ ಮತ್ತು ರೈನ್ ಡಾನ್ಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ..
17-10-2026 ರ ಶನಿವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಕವಿಗೋಷ್ಠಿ ನಡೆಯಲಿದೆ. ಸಂಜೆ 6:30 ಕ್ಕೆ ತೀರ್ಥಹಳ್ಳಿಯಲ್ಲಿ ಪ್ರಥಮ ಬಾರಿ ತೀರ್ಥಹಳ್ಳಿಯ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಸರಾ ಕಿರುಚಿತ್ರೋತ್ಸವ ಹಾಗೂ ಸಂವಾದ ನಡೆಯಲಿದೆ..
18-10-2026 ರ ಭಾನುವಾರ ಸಂಜೆ 6:30 ಕ್ಕೆ , ಕುಶಾವತಿಯ ಪಾರ್ಕ್ ನಲ್ಲಿ ಮಹಿಳಾ ದಸರಾ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ..
ಕುಣಿತಾ ಭಜನೆ – ಪ್ರೇಮ ಅರಳಸುರಳಿ ಮತ್ತು ತಂಡ
ಯೋಗ ನೃತ್ಯ – ಭಾರತೀಯ ಯೋಗ ಸಮಿತಿ, ಬಾಳೆಬೈಲು
ನೃತ್ಯ ರೂಪಕ– ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರ(ರಿ.)
ಭರತನಾಟ್ಯ – ಮಾರ್ಗ ನೃತ್ಯ ಶಾಲೆ, ಹುಂಚದಕಟ್ಟೆ
ನೃತ್ಯ ರೂಪಕ ಸರ್ವಜ್ಞ ತಂಡ, ಮೇಲಿನಕುರುವಳ್ಳಿ
ನವದುರ್ಗೆಯರ ದೃಶ್ಯಾವಳಿ – ಪ್ಲಾನೆಟ್ ಪಿಟ್ ನೆಸ್,
ಪ್ರಹಸನ – ಸುಮ ಮತ್ತು ತಂಡ, ತೀರ್ಥಹಳ್ಳಿ
ಫ್ಯಾಷನ್ ಷೋ – ದೇಶದ ವಿವಿಧ ಭಾಗಗಳ ಫ್ಯಾಷನ್ ಷೋ
ಯಕ್ಷ ನೃತ್ಯ – ಅರ್ನಿ ಮತ್ತು ತಂಡ,
ಹೆಣ್ಣು ಹುಲಿ ಹೆಜ್ಜೆ ನಿಹಾರಿಕಾ ಮತ್ತು ತಂಡ
19-10-2026 ರ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಿತ ಸಾಂಸ್ಕೃತಿಕ ಸೌರಭ ಎಂಬ ಕಾರ್ಯಕ್ರಮ ನಡೆಯಲಿದೆ.. ನಾಡಿನ ವಿವಿಧ ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ, ಜಾನಪದ ಕಲಾ ತಂಡಗಳಿಂದ ಜಾನಪದ ಜಾತ್ರೆ, ನೃತ್ಯ ವೈವಿಧ್ಯ, ಸೇರಿದಂತೆ ಹಲವಾರು ಆಕರ್ಷಕ ಕಾರ್ಯಕ್ರಮಗಳು ನಡೆಯಲಿದೆ..
20-10-26 ರ ಮಂಗಳವಾರ ಸಂಜೆ ಕುಶಾವತಿ ಪಾರ್ಕ್ ನಲ್ಲಿ ಸಾಂಸ್ಕೃತಿಕ ವೈಭವ ಎಂಬ ಕಾರ್ಯಕ್ರಮ ಸ್ಥಳೀಯ ಕಲಾವಿದರಿಂದ ನಡೆಯಲಿದೆ..
1.ಬ್ರಹ್ಮಲಿಂಗೇಶ್ವರ ಮಹಾತ್ಮೆ ರೂಪಕ ಸೃಷ್ಟಿ ಕಲಾ ತಂಡ(ರಿ.) ಮೇಲಿನಕುರುವಳ್ಳಿ
2. ಶ್ರೀ ದೇವಿ ಸ್ತುತಿ- ಸುಮುಖ ಸಂಗೀತ ನೃತ್ಯ ಶಾಲೆ(ರಿ.), ತೀರ್ಥಹಳ್ಳಿ
3. ಕನ್ನಡ ಚಿತ್ರಗೀತೆಗಳ ಝಲಕ್- ಸ್ಥಳೀಯ ಗಾಯಕರಿಂದ
4. ಸಾಕ್ಸೋಫೋನ್ ಜುಗಲ್ ಬಂದಿ- ಗುರುಪ್ರಸಾದ್ ದೇವಾಡಿಗ ಮತ್ತು ಶ್ವೇತಾ ದೇವಾಡಿಗ, ತೀರ್ಥಹಳ್ಳಿ
5. ನೃತ್ಯ ಕಾರ್ಯಕ್ರಮ- ಡಾನ್ಸ್ ಪ್ಯಾಲೇಸ್ , ತೀರ್ಥಹಳ್ಳಿ
6. ಶಾಸ್ತ್ರೀಯ ನೃತ್ಯ – ಸ್ಮೃತಿ ಕಲಾ ಶರಧಿ (ರಿ.) ಬೆಜ್ಜವಳ್ಳಿ
7. ಯಕ್ಷಗಾನ ಕಾರ್ಯಕ್ರಮ – ಶ್ರೀ ಗುತ್ಯಮ್ಮ ಯಕ್ಷಗಾನ ಮತ್ತು ಜಾನಪದ ಕಲಾ ಕೇಂದ್ರ(ರಿ.) ತೀರ್ಥಹಳ್ಳಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಕಾರ್ಯಕ್ರಮ.
21-10-2026 ರ ಬುಧವಾರ ಮಧ್ಯಾಹ್ನ 2 ಗಂಟೆಗೆ ರಾಮೇಶ್ವರ ದೇವಸ್ಥಾನದ ಆವರಣದಿಂದ ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ ಪಲ್ಲಕ್ಕಿ ಉತ್ಸವ. ಆಕರ್ಷಕ ಸ್ತಬ್ಧಚಿತ್ರಗಳು, ಕರ್ನಾಟಕದ ಸುಪ್ರಸಿದ್ಧ ಜಾನಪದ ಕಲಾ ತಂಡಗಳ ಕಣ್ಮನ ಸೆಳೆಯುವ ರಾಜಬೀದಿ ಉತ್ಸವ ನಡೆಯಲಿದೆ..
ಸಂಜೆ 5:30ಕ್ಕೆ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ನಿರ್ದೇಶನದ ನೃತ್ಯನಿಕೇತನ ಕೊಡವೂರು ಉಡುಪಿ ಕಲಾವಿದರಿಂದ ನೃತ್ಯಸಿಂಚನ ಹಾಗೂ “ನವದುರ್ಗೆ ನೃತ್ಯರೂಪಕ’ ಕಾರ್ಯಕ್ರಮ ನಡೆಯಲಿದೆ..
ಮೆರವಣಿಗೆ ಕುಶಾವತಿಯ ನೆಹರು ಉದ್ಯಾನವನ ತಲುಪಿ ಧಾರ್ಮಿಕ ಕಾರ್ಯಕ್ರಮಗಳು ಸಂಜೆ 07:15ಕ್ಕೆ ಸಭಾ ಕಾರ್ಯಕ್ರಮ-ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಅಭಿನಂದನೆ ಹಾಗೂ 8 ಗಂಟೆಗೆ ಹುಲಿ ಹೆಜ್ಜೆ ನಡೆಯಲಿದೆ ಎಂದರು..
ಪತ್ರಿಕಾಗೋಷ್ಠಿಯಲ್ಲಿ ಸಂದೇಶ್ ಜವಳಿ,ಅಮರಾನಾಥ್ ಶೆಟ್ಟಿ,ಲಯನ್ ಪಾಂಡುರಂಗ, ಶಚಿಂದ್ರ ಹೆಗಡೆ, ಸುಶೀಲಾ ಶೆಟ್ಟಿ, ಅನಿಲ್ ವಿಧಾತ, ಸೇರಿದಂತೆ ಹಲವರು ಉಪಸ್ಥಿತರಿದ್ದರು..







