ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಸ್ತಬ್ದ ಚಿತ್ರಗಳ ಮೆರವಣಿಗೆಯನ್ನು ಜನ ವೀಕ್ಷಣೆ ಮಾಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ರಂಜಿತ್, ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ್ ಶೆಟ್ಟಿ, ಸಂದೇಶ್ ಜವಳಿ, ಅಮರ ನಾಥ ಶೆಟ್ಟಿ ಸೇರಿ ಪ್ರಮುಖರು ಹಾಜರಿದ್ದರು.
ಮೆರವಣಿಗೆ ಕುಶಾವತಿ ಪಾರ್ಕ್ ಹೋಗಲಿದ್ದು ಅಲ್ಲಿ ಬನ್ನಿ ಪೂಜೆ ನಡೆಯಲಿದೆ. ಸಾವಿರಾರು ಜನ ಬನ್ನಿ ಕಡಿದು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಹುಲಿ ಹೆಜ್ಜೆ ಹುಲಿ ವೇಷ ಸ್ಪರ್ಧೆ ನಡೆಯಲಿದೆ.







