ಕೋಳಿ ಗೂಡಿನಲ್ಲಿ 3 ನಾಗರ ಹಾವು ಪ್ರತ್ಯಕ್ಷ!
– ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ ಘಟನೆ
– ಬಸ್ ಸ್ಟ್ಯಾಂಡಲ್ಲಿ ನುಗ್ಗಿದ ಬಸ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಕೋಳಿ ಗೂಡಿನಲ್ಲಿ 3 ನಾಗರ ಹಾವು ಪ್ರತ್ಯಕ್ಷವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ ಘಟನೆ ನಡೆದಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕು ಖಂಡ್ಯ ಹೋಬಳಿ ಬಿದರೆ ಗ್ರಾಮದ ನಿವಾಸಿಗಳಾದ ರಾಮೇಗೌಡ ದೇವರಾಜೇಗೌಡ ಸುಗ್ಗಿಮಕ್ಕಿ ನಾಗರತ್ನ ಕೆರೆಮನೆ ಮನೇಲಿ ಬಿರು ಬಿಸಿಲಿನಲ್ಲಿ ಕೋಳಿ ಗೂಡಿಗೆ ನುಗ್ಗಿ ಕೋಳಿ ಮೊಟ್ಟೆಗಳನ್ನ ನುಂಗಿ ಹೊರ ಬಂದಿದೆ.
ಈ ಸಂದರ್ಭದಲ್ಲಿ ಊರಿನ ಸ್ಥಳೀಯ ನಿವಾಸಿ ಶಶಿ ಬಿದರೆ ರೋಹಿತ್ ತಕ್ಷಣ ಬಾಳೆಹೊನ್ನೂರಿನ ಉರಗ ತಜ್ಞನಿಗೆ ಆಲ್ಬರ್ಟ್ ಗೆ ಕರೆ ಮಾಡಿ ಬಂದು ಅವುಗಳನ್ನ ರಕ್ಷಣೆ ಮಾಡಿ ಡಬ್ಬಕ್ಕೆ ಹಾಕಿ ಎಲೆಕಲ್ಲು ಸಮೀಪ ಕಾಡಿಗೆ ಬಿಟ್ಟಿದ್ದಾರೆ. ಒಂದೇ ದಿನ 3 ನಾಗರ ಹಾವುನ್ನು ಕಂಡು ವಿಚಿತ್ರ ಘಟನೆ ಎಂದು ಬಿದರೆ ಶಾಕ್ ಆಗಿದ್ದಾರೆ. ಈ ಹಾವುಗಳನ್ನು ಬಿದರೆ ಊರಿನ ಜನ ನೋಡಲು ನಾ ಮುಂದು ತಾ ಮುಂದು ಎಂದು ಬಂದು ವೀಕ್ಷಿಸಿದರು.
ಬಸ್ ಸ್ಟಾಂಡಲ್ಲಿ ನುಗ್ಗಿದ ಬಸ್!
ಚಿಕ್ಕಮಗಳೂರು: ಚಿಕ್ಕಮಗಳೂರಿನ ಕೆಎಸ್ಆರ್ಟಿಸಿ ಬಸ್ಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತರ ಬಸ್ಸ್ ನಿಲುಗಡೆ ಮಾಡಲು ಹೋದ ಸಂದರ್ಭದಲ್ಲಿ ಕಡೂರು ಚಿಕ್ಕಮಗಳೂರು ನಾನ್ ಸ್ಟಾಪ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಕಲಾಮಂದಿರದ ಕಾಂಪೌಂಡಿಗೆ ನುಗ್ಗಿದೆ. ಬ್ರೇಕ್ ಫೇಲ್ ಆದ ಕಾರಣ ಬಸ್ಸು ನಿಯಂತ್ರಣ ತಪ್ಪಿದೆ ಎಂದು ಚಾಲಕ ಹೇಳಿದ್ದು, ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಇನ್ನೊಂದು ಮುಖ್ಯ ಸಂಗತಿ ಎಂದರೆ ರಾತ್ರಿಯಲ್ಲಿ ಹಾಲ್ಟಿಂಗ್ ಮಾಡಲು ಬರುವ ಬಸ್ಸುಗಳಲ್ಲಿ ಕೆಲ ಡೈವರ್, ಕಂಡಕ್ಟರ್ ಗಳು ಈ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಸದ್ಯ ಘಟನೆ ನಡೆದ ಸಮಯದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ.








