ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮುಗಿದು ಇದೀಗ ಹಿಂಗಾರು ಹಂಗಾಮು ಆರಂಭವಾಗಿದ್ದು, ಈ ಬಾರಿ ಮಳೆಯ ಕೊರತೆ ಎದುರಾಗುವ ಆತಂಕವಿದೆ.
ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನಾ ವರದಿಯ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಸಮಗ್ರ ಹಿಂಗಾರು ಋತುವಿನಲ್ಲಿ ಕರ್ನಾಟಕದಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ರಾಜ್ಯದ ಒಟ್ಟಾರೆ ಸರಾಸರಿ ವಾಡಿಕೆ ಮಳೆ 182.2 ಮಿ.ಮೀ. ಆಗಿದ್ದರೆ, ದಕ್ಷಿಣ ಒಳನಾಡಿನ ವಾಡಿಕೆ ಮಳೆಯು 201.9 ಮಿ.ಮೀ. ಆಗಿದೆ. ಆದರೆ ಈ ಬಾರಿ ಈ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಈಗಾಗಲೇ ಹಳ್ಳ, ನದಿಗಳ ನೀರು ಬತ್ತಿ ಹೋಗಿದೆ.
ನೀರು ಮಿತ ವ್ಯಯ ಮಾಡುವುದು ಒಳ್ಳೆಯದು
ಕರ್ನಾಟಕದ ರೈತರಿಗೆ ಮತ್ತು ಜಲಾಶಯಗಳ ನೀರಿನ ನಿರ್ವಹಣೆಗೆ ಈ ಮುನ್ಸೂಚನೆ ಎಚ್ಚರಿಕೆಯ ಗಂಟೆಯಾಗಿದ್ದು, ಹಿಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ಮಳೆ ಕಡಿಮೆಯಾಗುವ ಸಂಭವ ಇರುವುದರಿಂದ ನೀರಿನ ಮಿತವ್ಯಯ ಮತ್ತು ಪರ್ಯಾಯ ಬೆಳೆ ಯೋಜನೆಗಳ ಕಡೆಗೆ ಗಮನಹರಿಸುವುದು ಅಗತ್ಯವಾಗಿದೆ.
– ತಾಪಮಾನ ಮತ್ತು ಸೆಕೆ ಹೆಚ್ಚಾಗಲಿದೆ
– ಮಳೆ ಕೊರತೆಯ ಜೊತೆಗೆ ತಾಪಮಾನವೂ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
* ಗರಿಷ್ಠ ತಾಪಮಾನ: ಈಶಾನ್ಯ ಭಾರತ ಮತ್ತು ವಾಯವ್ಯ ಭಾರತದ ಕೆಲ ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ಹಗಲಿನ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಾಗಿರಲಿದೆ.
* ಕನಿಷ್ಠ ತಾಪಮಾನ: ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ರಾತ್ರಿಯ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗಲಿದ್ದು, ಸೆಕೆ ಮುಂದುವರಿಯಲಿದೆ.
*






