ಲೇಖನ: ರಾಘವೇಂದ್ರ ತೀರ್ಥಹಳ್ಳಿ
ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡುತ್ತಿದೆ. ಹೊಸಬರ, ಹೊಸತನದ ಚಿತ್ರಗಳಿಗೆ ಜನ ಜೈ ಎನ್ನುತ್ತಿದ್ದಾರೆ. ಇದಕ್ಕೆ ಉದಾಹರಣೆ ರಾಜ್ಯದ ಜನರ ಮನಗೆದ್ದ “ಪ್ರೇಮದ ಊರಲಿ” ಎಂಬ ಚಿತ್ರ ಅಚ್ಚರಿ ಸಿನಿಮಾ.
ಕಥೆ, ನಿರ್ದೇಶನ, ನಟನೆ, ಸಂಗೀತ, ಕ್ಯಾಮರಾ ಎಲ್ಲದರಲ್ಲೂ ಕುತೂಹಲ ಹುಟ್ಟಿಸುವಂತೆ ಕಲೆಕ್ಷನ್ ಮಾಡಿದೆ. ಎರಡನೇ ವಾರ ಭಾನುವಾರ ಏಕಾಏಕಿ ಕಲೆಕ್ಷನ್ ಹೆಚ್ಚಿಸ್ಕೊಂಡು ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಜತೆಗೆ ಸಾಮಾಜಿಕ ಜಾಲ ತಾಣ, ಮಾಧ್ಯಮಗಳಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಯಾವುದೇ ದೊಡ್ಡ ಸ್ಟಾರ್, ದೊಡ್ಡ ಬಂಡವಾಳ ಇಲ್ಲದೆ ಕಥೆಯೇ ಸಿನಿಮಾ ಗೆಲ್ಲಿಸಿದೆ.
ಮೊದಲ ದಿನ 12 ಲಕ್ಷ ಗಳಿಸಿದ್ದ ಸಿನಿಮಾ, ಜನರಿಂದ ಪಾಸಿಟಿವ್ ರಿವ್ಯೂ ಬರ್ತಾ ಇದ್ದ ಹಾಗೇ 5 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ.
ಸಿನಿಮಾ ಮಂದಿ ಬಜೆಟ್ ಮೇಲೆ ಕಡಿವಾಣ ಹಾಕಿಕೊಂಡು ಕಂಟೆಂಟ್ ಮತ್ತು ಪ್ರೆಸೆಂಟೇಶನ್ ಮೇಲೆ ಹೆಚ್ಚು ಗಮನ ಕೊಟ್ಟರೆ ಪ್ರತಿ ಸಿನಿಮಾ ಕೂಡ ಸೋಲಿನಿಂದ ಪಾರಾಗಿ ಒಂದಷ್ಟು ದುಡ್ಡು ನೋಡುವುದು ಖಚಿತ. ಓಟಿಟಿ ಸ್ಯಾಟಲೈಟ್ ಹಂಗಿಲ್ಲದೆ ಕೂಡ ಬಂಡವಾಳ ವಾಪಸ್ಪಡೆಯಲು ಸಾಧ್ಯ ಎಂಬುದಕ್ಕೆ ಪ್ರೇಮದ ಊರಲಿ ಸಿನಿಮಾ ನಿದರ್ಶನ.
ಹಳ್ಳಿ ಕಥೆ, ಒಳ್ಳೆ ಆಕ್ಟಿಂಗ್, ಛಾಯಾಗ್ರಾಹಣ, ಸಂಗೀತ, ಸಂಭಾಷಣೆ ಎಲ್ಲವೂ ಸೂಪರ್.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನ
ಸೆಪ್ಟೆಂಬರ್ 25ರ ಶುಕ್ರವಾರದಂದು ರಾಜ್ಯಾದ್ಯಂತ ತೆರೆಕಂಡ ‘ಪ್ರೇಮದ ಊರಲಿ ‘ ಚಿತ್ರವನ್ನು ಅಕ್ಷಿ ಸಿನಿಮಾ ಮೂಲಕ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಮಮತಾ ದೇವೇಂದ್ರ, ಪ್ರಶಾಂತ್ ಡಿ.ಎಸ್, ರಮೇಶ್ ಎನ್ ಮತ್ತು ಮುಕುಲ್ ಗೌಡ ಅವರು ಸಿನಿಮಾ ನಿರ್ಮಿಸಿದ್ದಾರೆ.
ಅಪ್ಪಟ ದೇಸಿ ಸೊಗಡಿನ ಚಿತ್ರ!
ಗ್ರಾಮೀಣ ಪರಿಸರದ ಅದ್ಭುತ ಚಿತ್ರಣ, ಕುಟುಂಬದ ಸಂಬಂಧಗಳ ನಡುವಿನ ಸಂಕೀರ್ಣತೆ, ಮನುಷ್ಯತ್ವ ಮತ್ತು ಮುಗ್ದ ಪ್ರೀತಿಯ ಸೂಕ್ಷ್ಮತೆಯನ್ನು ಒಳಗೊಂಡ ಅಪ್ಪಟ ದೇಸಿ ಸೊಗಡಿನ ಚಿತ್ರವಾಗಿದೆ ಪ್ರೇಮದ ಊರಲಿ. ಕನ್ನಡ ವೀಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ನಿರಾಸೆಯ ನಡುವೆ ಪ್ರೇಮದ ಊರಲಿ ಚಿತ್ರವು ತುಂಬಿದ ಪ್ರದರ್ಶನವನ್ನು ನೀಡುತ್ತಿರುವುದು ದಾಖಲೆಯತ್ತ ಮಿಂಚಿನ ಓಟ ನಡೆಸಿದೆ. ಅಷ್ಟೇ ಅಲ್ಲದೆ ಗಲ್ಲಾಪೆಟ್ಟಿಗೆಯಲ್ಲೂ ಕೂಡ ಕಡಿಮೆ ಬಂಡವಾಳದೊಂದಿಗೆ ಹೆಚ್ಚಿನ ಲಾಭ ಗಳಿಸುತ್ತಿದೆ.
ಹೊಸಬರ ಸಿನಿಮಾಕ್ಕೆ ಮೆಚ್ಚುಗೆ ನೀಡಿದ ಜನ!
ನಾಯಕ ಶ್ರೀರಾಮ್, ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅವರು ತಮ್ಮ ಸಹಜ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ರಂಗಾಯಣ ರಘು ಅವರ ಪರಕಾಯ ಪ್ರವೇಶಕ್ಕೆ ಚಿತ್ರರಸಿಕರು ಶರಣಾಗತರಾಗಿದ್ದಾರೆ. ಎಲ್ಲರ ನಟನೆ ಸೂಪರ್.
ಸಂಗೀತದಲ್ಲಿ ಗಮನ ಸೆಳೆದ ಸುನಾದ್ ಗೌತಮ್
ಸುನಾದ್ ಗೌತಮ್ ಅವರ ಸಂಗೀತದೊಂದಿಗೆ ರಾಜ್ ಕಾಂತ್ ಅವರ ಛಾಯಾಗ್ರಹಣದ ಗ್ರಾಮೀಣ ಪರಿಸರದ ಚಿತ್ರಣ ಕಣ್ಣು ಮತ್ತು ಮನಸ್ಸನ್ನು ಸೂರೆಗೊಳಿಸಿದೆ. ಒಟ್ಟಾರೆ ಬಹಳ ವರ್ಷಗಳ ನಂತರ ಕುಟುಂಬ ಸಮೇತರಾಗಿ ವೀಕ್ಷಿಸುವಂತಹ ಕನ್ನಡ ಚಿತ್ರವೊಂದು ತೆರೆಕಂಡಿರುವುದು ಸಿನಿಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ.
ಇನ್ನು ಅಪಾಯವಿದೆ ಎಚ್ಚರಿಕೆ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕರು ಆದ ಅಭಿಜಿತ್ ತೀರ್ಥಹಳ್ಳಿ ಬರೆದಿರುವ ಹಾಡುಗಳು ಸೂಪರ್ ಹಿಟ್ ಆಗಿವೆ.
ಒಂದು ಕನ್ನಡ ಸಿನಿಮಾವನ್ನ ಕನ್ನಡಿಗರು ಅಪ್ಪಿ ಒಪ್ಪಿಕೊಳ್ಳಲು ಸ್ಟಾರ್ ಡಮ್ ಬೇಕಿಲ್ಲ , ಬಾಲಿವುಡ್ ಶೈಲಿ ಕಾಪಿ ಮಾಡಬೇಕಿಲ್ಲ. ಸು ಫ್ರಮ್ ಸೊ ಸಿನಿಮಾ ಬಳಿಕ ಕನ್ನಡ ಪ್ರೇಕ್ಷಕ ಪ್ರಭು ಅದರ ಪ್ರತಿ ಫಲವೇ “ಪ್ರೇಮದ ಊರಲ್ಲಿ ” ಸಿನಿಮಾ.
ಎಲ್ಲಾ ಮಾದರಿ ಚಿತ್ರ ಮಂದಿರಗಳು, ‘ಬುಕ್ಮೈ ಶೋ’ನಲ್ಲಿ ಹೌಸ್ ಫುಲ್ ಆಗುತ್ತಿದೆ.. ಶುಕ್ರವಾರದಿಂದ ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅ.2ರಿಂದ ತೆಲುಗಿನಲ್ಲಿ ಡಬ್ ಆದ ಆವೃತ್ತಿಯು ಬಿಡುಗಡೆಯಾಗಲಿದೆ.
ಪ್ರಚಾರ ಕೂಡ ಸಿಂಪಲ್.. ನಡೆದೇ ಪ್ರಚಾರ ಮಾಡಿದ್ದರು!
ದೊಡ್ಡ ದೊಡ್ಡ ನಗರದಲ್ಲಿ ಸಿನಿಮಾ ಇವೆಂಟ್ ಮಾಡಿ ಪ್ರಚಾರ ಮಾಡಿಲ್ಲ. ಸೈಕಲ್ ಮೂಲಕ ಪ್ರಚಾರ ಮಾಡಿದ ಚಿತ್ರ ತಂಡ ಇವತ್ತು 5 ಕೋಟಿ ಕಲೆಕ್ಷನ್ ಮಾಡಿದೆ. ಎಲ್ಲರ ಪ್ರಾಮಾಣಿಕ ಪ್ರಯತ್ನಕ್ಕೆ ಜನ ಫಿದಾ ಆಗಿದ್ದಾರೆ.







