ಡಿಸೆಂಬರ್ ಮಧ್ಯ ಎಳ್ಳಮಾವಾಸ್ಯೆ ಜಾತ್ರೆ!
– ಡಿಸೆಂಬರ್ 19ರಂದು ತೀರ್ಥಸ್ನಾನ
– ಡಿಸೆಂಬರ್ 20ರಂದು ರಥೋತ್ಸವ
– ಡಿಸೆಂಬರ್ 21ರಂದು ತೆಪ್ಪೋತ್ಸವ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆಯು ರಾಜ್ಯಾದ್ಯಂತ ಪ್ರಸಿದ್ಧವಾಗಿದೆ. ಈ ಬಾರಿ ಡಿಸೆಂಬರ್ ಮಧ್ಯವೇ ಬಂದಿದೆ.
ಜಾತ್ರೆ ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಇಲ್ಲವೇ ಜನವರಿ ತಿಂಗಳ ಮೊದಲ ವಾರದಲ್ಲಿ ಅಂದರೆ ಸಂಕ್ರಾಂತಿಯ ಮೊದಲೇ ಬರುತ್ತಿತ್ತು. ಆದರೆ ಈ ಬಾರಿ ಎಲ್ಲಾ ಹಬ್ಬಗಳು ಬೇಗ ಬಂದಿರುವಂತೆ, ಜಾತ್ರೆಯು ಲಗುಬಗೆಯಿಂದ ಆಗಮಿಸುತ್ತಿದೆ. ಈ ಬಾರಿಯ ಎಳ್ಳಮಾವಾಸ್ಯೆ ಜಾತ್ರೆಯು ಡಿಸೆಂಬರ್ 19 ರಂದೇ ಬಂದಿದ್ದು, ಮೊದಲ ದಿನ ತೀರ್ಥಸ್ನಾನವಿದ್ದು, 20ರಂದು ರಥೋತ್ಸವ ಮತ್ತು ಕೊನೆಯ ದಿನವಾದ 21ರಂದು ತೆಪ್ಪೋತ್ಸವ ನಡೆಯಲಿದೆ. ಪ್ರತಿ ವರ್ಷ ಹೊಸ ವರ್ಷ ವೇಳೆ ಬರುವುದರಿಂದ ಹೊಸ ವರ್ಷದ ಆಚರಣೆಗೆ ತೊಂದರೆ ಆಗುತ್ತಿತ್ತು. ಹೊಸ ವರ್ಷಕ್ಕೆ ಈ ಬಾರಿ ಜಾತ್ರೆ ಅಡ್ಡಿ ಆಗುವುದಿಲ್ಲ.








