ಕೊಪ್ಪ: ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹಾಗೂ ನಮ್ಮ ಮಲೆನಾಡಿಗೆ ಕೀರ್ತಿ ತಂದ ಶಾನುವಳ್ಳಿಯ ಹೆಮ್ಮೆಯ ಪುತ್ರಿ ಸ್ನೇಹಾ ಅವರನ್ನು ಶೃಂಗೇರಿ ಮಾಜಿ ಶಾಸಕ ಜೀವರಾಜ್ ಅವರು ಬಿಜೆಪಿ ಮುಖಂಡರೊಂದಿಗೆ ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ರಂಗಭೂಮಿ ಕಲಾವಿದೆ ಆಶಾ ಡ್ಯಾನಿಯಲ್ ಅವರಿಗೆ ‘ರಾಷ್ಟ್ರೀಯ ಕಲಾ ಕೇಸರಿ’ ಪ್ರಶಸ್ತಿ.
ತೀರ್ಥಹಳ್ಳಿಯ ‘ನಟ ಮಿತ್ರರು’ ತಂಡದಲ್ಲಿ ಗುರುತಿಸಿ ಕೊಂಡು ಸತತ ಎರಡು ದಶಕಗಳಿಂದ ವೈವಿದ್ಯಮಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ರಂಗಸೇವೆಯಲ್ಲಿ ನಿರತರಾಗಿದ್ದು, ಇತ್ತೀಚೆಗೆ ‘ಭಾರತ್ ರಂಗ ಮಹೋತ್ಸವ್’ ನಲ್ಲಿ ಪ್ರದರ್ಶನಗೊಂಡ ‘ಆ ಊರು ಈ ಊರು’ ನಾಟಕದ ಗಂಗಾಬಾಯಿ ಪಾತ್ರದಲ್ಲಿ ಸೈ ಎನಿಸಿಕೊಂಡ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಆಶಾ ಡ್ಯಾನಿಯಲ್ ಇವರಿಗೆ ‘ಸುರ್ವೆ ಕಲ್ಚರಲ್ ಅಕಾಡೆಮಿ- ಬೆಂಗಳೂರು’ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ 76ನೇ ಸಾಂಸ್ಕೃತಿಕ ಕಲಾಪ್ರತಿಭೋತ್ಸವ ಸಮಾರಂಭದಲ್ಲಿ ‘ರಾಷ್ಟ್ರೀಯ ಕಲಾಕೇಸರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚೆಸ್ ಅಲ್ಲಿ ಇಂಪನಾ ಹೆಬ್ಬಾರ್ ರಾಜ್ಯ ಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ/ ಕೊಪ್ಪ: ಗಡಿಕಲ್ ಶಾಲೆಯ ಇಂಪನಾ ಹೆಬ್ಬಾರ್ ಅವರು ಚೆಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ ಶುಭಾಶಯ ಕೋರಿದೆ.







