ಮಲೆನಾಡು: ಕನ್ನಡದ ಜನರ ಮನ ಗೆದ್ದ ಸಿನಿಮಾ ಪ್ರೇಮದ ಊರಲಿ ಚಲನಚಿತ್ರವು ಮಲೆನಾಡಿನಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನವನ್ನು ನೀಡುತ್ತಿದೆ.
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಗಡಿಭಾಗವಾಗಿರುವ ಬೇಲೂರು ಮೂಲದ ನಿರ್ದೇಶಕರಾಗಿರುವ ಮನೋಜ್ ಕುಮಾರ್ ಅವರ ನಿರ್ದೇಶನಕ್ಕೆ ಚಿತ್ರರಸಿಕರು ಮಾರುಹೋಗಿದ್ದಾರೆ. ಕಲಾವಿದರ ಅಭಿನಯದಿಂದಲೂ ಸೈ ಎನಿಸಿಕೊಂಡಿರುವ ಈ ಚಿತ್ರವು ಎಲ್ಲೆಡೆ ಉತ್ತಮ ಸ್ಪಂದನೆಯನ್ನು ಪಡೆದುಕೊಂಡಿದೆ.
ಅಭಿಜಿತ್ ತೀರ್ಥಹಳ್ಳಿ ಅವರಿಂದ ಸಿನಿಮಾ ವೀಕ್ಷಣೆ
ತೀರ್ಥಹಳ್ಳಿ ಮೂಲದ ಅಭಿಜಿತ್ ತೀರ್ಥಹಳ್ಳಿ ಅವರ ಸಾಹಿತ್ಯ ಕೂಡ ಜನರ ಮನಸ್ಸನ್ನು ಸೂರೆ ಮಾಡಿದೆ. ಹೀಗಾಗಿ ತಮ್ಮ ಊರಿನ ಪ್ರತಿಭಾವಂತ ಯುವಕನಿಗೆ ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಅಭಿಜಿತ್ ತೀರ್ಥಹಳ್ಳಿ ಅವರು ತಮ್ಮ ಊರಿನ ಚಿತ್ರಪ್ರೇಮಿಗಳಿಗೆ ಚಿತ್ರವನ್ನು ಯಶಸ್ವಿಗೊಳಿಸಿಕೊಟ್ಟಿರುವ ಕಾರಣಕ್ಕೆ ಮತ್ತು ತಮಗೆ ಅದ್ಧೂರಿ ಸ್ವಾಗತವನ್ನು ಕೋರಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಇನ್ನು ಅವರ ಚಿತ್ರಕ್ಕೆ ಸ್ನೇಹಿತರು ಕೂಡ ಒಳ್ಳೆಯ ರೀತಿಯಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರತಿ ದಿನ ವಿನಾಯಕ ಚಿತ್ರ ಮಂದಿರದಲ್ಲಿ 4 ಶೋ ಭರ್ತಿ ಆಗುತ್ತಿದೆ.
ಮಲೆನಾಡ ಹತ್ತಾರು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್..!
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಭಾರತ್ ಸಿನಿಮಾಸ್, ಸಾಗರದ ಶ್ರೀ, ತೀರ್ಥಹಳ್ಳಿಯ ವಿನಾಯಕ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಜೆಎಂಜೆ, ಬಾಳೆಹೊನ್ನೂರಿನ ಸುದರ್ಶನಿ ಚಿತ್ರಮಂದಿರಗಳಲ್ಲಿ ಪ್ರೇಮದ ಊರಲಿ ಚಿತ್ರ ತೆರೆಕಂಡಿದೆ. ಇನ್ನು ಈ ವಾರ ಇನ್ನಷ್ಟು ಚಿತ್ರ ಮಂದಿರಕ್ಕೆ ಲಗ್ಗೆ ಇಡಲಿದೆ.
ಪ್ರೇಮದ ಊರಲಿ ಕೇವಲ ರಾಜ್ಯಾದ್ಯಂತ ಮಾತ್ರವಲ್ಲದೇ ಪರರಾಜ್ಯಗಳು ಮತ್ತು ವಿದೇಶಗಳಲ್ಲೂ ಉತ್ತಮ ರೀತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.







