ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿಯಲ್ಲಿ ಸೋಲಾರ್ ಅಳವಡಿಕೆಗೆ ದಿನಾಂಕ 13-10-2026, 14-10-2026 ಹಾಗೂ 15-10-2026 ರಂದು 3 ದಿಗಳಲ್ಲಿ ತೀರ್ಥಹಳ್ಳಿ ಮೆಸ್ಕಾಂ, ಉಪವಿಭಾಗ ಕಛೇರಿಯ ಆವರಣದಲ್ಲಿ ಬೆಳಿಗ್ಗೆ 10.00 ರಿಂದ ಸಾಯಂಕಾಲ 5.30 ರವರೆಗೆ ತಮ್ಮ ತಮ್ಮ ಮನೆಯ ಮೇಲ್ಛಾವಣಿಗೆ ಸೋಲಾರ ಅಳವಡಿಸುವ ಯೋಜನೆಯ ಸಲುವಾಗಿ 3 ದಿನಗಳ ಕ್ಯಾಂಪ್ ಹಮ್ಮಿಕೊಂಡಿದ್ದು, ಇದಕ್ಕೆ ಸೋಲಾರ್ ಅಳವಡಿಸುವ ವಿವಿಧ ಕಂಪೆನಿಯವರು ಆಗಮಿಸಿ, ಪಿಎಂ ಸೋಲಾರ್ ಸೂರ್ಯಘರ್ ಯೋಜನೆಯಲ್ಲಿ ಬರುವ ಸಂಪೂರ್ಣ ಮಾಹಿತಿಯನ್ನು ನೀಡಲಿರುತ್ತಾರೆ. ತಾವು ಈ ಕಾರ್ಯಕ್ರಮಕ್ಕೆ ಆಗಮಿಸಿ ಈ ಯೋಜನೆಯ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳುವಂತೆ ತಮ್ಮಲ್ಲಿ ಈ ಮೂಲಕ ಕೋರಲಾಗಿದೆ.
ಶ್ರೀ ರಾಮೇಶ್ವರ ದೇವಸ್ಥಾನ ದೇವಸ್ಥಾನದಲ್ಲಿ ದಸರಾ ವಿಶೇಷ ಪೂಜೆ
ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಅಂಗವಾಗಿ 21-10-2026ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಸಂಜೆ 5.30 ರಿಂದ ದುರ್ಗಾ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ ಹಾಗೂ ಇತರೆ ದೇವತಾ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ 21-10-2026ರ ಬುಧವಾರ ವಿಜಯದಶಮಿ ದಿನದಂದು ಬೆಳಿಗ್ಗೆ ದುರ್ಗಾ ಹೋಮ ನೆರವೇರಲಿದೆ.
ಆಸ್ತಿಕ ಭಕ್ತ ಮಹಾಜನರು ಪುಣ್ಯ ಪ್ರದವಾದ ಈ ಶರನ್ನವರಾತ್ರೋತ್ಸವದಲ್ಲಿ ಸೇವೆಗಳನ್ನು ನೆಡೆಸಿ ಶ್ರೀ ಜಗನ್ಮಾತೆ ಹಾಗೂ ಸಪರಿವಾರ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.
ವಿಶೇಷ ಸೂಚನೆ: ದುರ್ಗಾ ಪಾರಾಯಣ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ಇತರೆ ಸೇವೆಗಳನ್ನು ಮಾಡಿಸಲು ಇಚ್ಛಿಸುವ ಭಕ್ತರು ಅರ್ಚಕರಲ್ಲಿ ತಮ್ಮ ಹೆಸರು, ರಾಶಿ ಮತ್ತು ನಕ್ಷತ್ರದ ವಿವರಗಳನ್ನು ನೀಡುವಂತೆ ಕೋರಲಾಗಿದೆ.







