ಕಠ್ಮಂಡು: ನೇಪಾಳ ಟಿಬೇಟ್ ಗಡಿ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಜಗತ್ತಿನ ಹಲವು ದೇಶಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಹಲವು ದೇಶಗಳ ಸಾವಿರಾರು ಪ್ರವಾಸಿಗರು ಇಲ್ಲಿ ಸಿಲುಕಿದ್ದಾರೆ. ಭಾರತ ಸೇರಿ ಕನ್ನಡಿಗರು ಕೂಡ ಅಪಾಯದಲ್ಲಿದ್ದಾರೆ. ಎಲ್ಲಿ ನೋಡಿದರೂ ಹೆಣಗಳ ರಾಶಿ. ಮುಳುಗಿ ಕೆಸರಲ್ಲಿ ಸಿಲುಕಿದ ಊರುಗಳು ಕಾಣುತ್ತಿವೆ.
ಪ್ರವಾಹ ಮತ್ತು ಹಿಮಬಂಡೆ ಕುಸಿತದ ಪರಿಣಾಮದಿಂದಾಗಿ ಸುಮಾರು 350 ಮಂದಿ ಸಾವನ್ನಪ್ಪಿರುವ ಕುರಿತು ಮಾಹಿತಿ ಲಭಿಸಿದೆ. ಅಲ್ಲದೆ 1500 ಜನ ನಾಪತ್ತೆ ಆಗಿದ್ದಾರೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಮಳೆಯ ತೀವ್ರತೆ ಹೆಚ್ಚಾದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಬಹುದು ಎನ್ನುವಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ರಕ್ಷಣಾ ತಂಡಗಳು ಹೆಚ್ಚಿನ ಮತ್ತು ವಿಶೇಷ ರೀತಿಯ ಎಚ್ಚರಿಕೆಯನ್ನು ವಹಿಸಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಮೃತರ ಸಂಖ್ಯೆ ಕೂಡ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವಂತಹ ಆತಂಕಕಾರಿ ವರದಿ ಹೊರಬಿದ್ದಿದೆ.
ಪ್ರವಾಸ, ಉದ್ಯೋಗ, ಆಪ್ತರ ಭೇಟಿ ಸೇರಿದಂತೆ ಹಲವಾರು ಕಾರಣಗಳಿಗಾಗಿ ನೇಪಾಳಕ್ಕೆ ತೆರಳಿರುವ ಸುಮಾರು 300 ಜನ ಭಾರತೀಯರು ನಾಪತ್ತೆಯಾಗಿದ್ದಾರೆ. ಸುಮಾರು 100 ಜನ ಭಾರತೀಯರನ್ನು ಪತ್ತೆಹಚ್ಚಲಾಗಿದೆ. ನಾಪತ್ತೆಯಾದವರ ಅಂತಿಮ ಸಂಖ್ಯೆ ಅಧಿಕೃತವಾಗಿ ತಿಳಿಸಿಲ್ಲ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆ ಮತ್ತು ಪೊಲೀಸರು ಸೇರಿದಂತೆ ಸುಮಾರು 10೦೦೦ಕ್ಕೂ ಹೆಚ್ಚು ಸಿಬ್ಬಂದಿಗಳು ರಕ್ಷಣೆ ಮತ್ತು ಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ನೇಪಾಳದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಭಾರತೀಯರಿಗಾಗಿ ನೆರವು ಮತ್ತು ಮಾಹಿತಿಯನ್ನು ಒದಗಿಸುವ ಸಲುವಾಗಿ ಭಾರತ ಸರ್ಕಾರ ಮತ್ತು ನೇಪಾಳದ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಛೇರಿ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರವಾಹ ಪೀಡಿತ ಭಾರತೀಯರು ಅಥವಾ ಅವರ ಕುಟುಂಬಸ್ಥರು +9779851316807, +9779709107500 ಸಂಖ್ಯೆಗಳ ಮೂಲಕ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಕಾನ್ಪುರದಲ್ಲಿ ವಿಮಾನ ಪತನ; ಕನ್ನಡಿಗ ಪೈಲೆಟ್ ನ ದುರಂತ ಅಂತ್ಯ
ಉತ್ತರ ಪ್ರದೇಶ: ತರಬೇತಿ ವಿಮಾನವೊಂದು ಧಾರುಣವಾಗಿ ಪತನಗೊಂಡಿರುವ ಘಟನೆ ಗುರುವಾರದಂದು ಕಾನ್ಪುರದ ಗಂಗಾ ನದಿಯ ದಡದಲ್ಲಿ ನಡೆದಿದೆ. ಪರಿಣಾಮವಾಗಿ ಕರ್ನಾಟಕ ಮೂಲದ ಪೈಲೆಟ್ ಅಭಿಷೇಕ್ ಪೂಜಾರಿ ಮತ್ತು ಗುಜರಾತ್ ಮೂಲದ ಸಚಿನ್ ಭಾಟಿಯಾ ಇಬ್ಬರು ದುರಂತ ರೀತಿಯಲ್ಲಿ ಅಂತ್ಯ ಕಂಡಿದ್ದಾರೆ. ಗಾರ್ಗ್ ಏವಿಯೇಷನ್ ನಿರ್ವಹಿಸುತ್ತಿರುವ ಟೆಕ್ನಮ್ ವಿಮಾನವು ಬೆಳಿಗ್ಗೆ 11:30ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕತ್ರಿ ಪ್ರದೇಶದ ನಾಥಪೂರ್ವ ಎನ್ನುವ ಗ್ರಾಮದಲ್ಲಿ ವಿಮಾನವು ಪತನಗೊಂಡಿತು ಎನ್ನುವ ಮಾಹಿತಿಯನ್ನು ಪೊಲೀಸ್ ಆಯುಕ್ತರಾದ ರಘುಬೀರ್ ಲಾಲ್ ಅವರು ಪಿಟಿಐಗೆ ನೀಡಿದ್ದಾರೆ.







