ಟಾಪ್ 3 ನ್ಯೂಸ್
ತೀರ್ಥಹಳ್ಳಿ : ಘಂಟೆಹಕ್ಕು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..!
– ಭದ್ರಾವತಿ : ಚಲಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ, ಸವಾರನ ಕಾಲಿಗೆ ಗಂಭೀರ ಗಾಯ..!!
– ಶಿವಮೊಗ್ಗ : ಬಿಜೆಪಿ ಮುಖಂಡನಿಗೆ ಬೈಕ್ ಡಿಕ್ಕಿ..!!
NAMMUR EXPRESS NEWS
ತೀರ್ಥಹಳ್ಳಿ : ಘಂಟೆಹಕ್ಕು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..!
ತೀರ್ಥಹಳ್ಳಿ : ಕೈಮರ ಹಾಗೂ ಘಂಟೆಹಕ್ಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿದ್ದ ಗದ್ದೆಗೆ ಹೋಗಿ ಬಿದ್ದಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಕೈಮರದಿಂದ ಸ್ವಲ್ಪ ದೂರದಲ್ಲಿ ಈ ಘಟನೆ ಸಂಭವಿಸಿದ್ದು ಕಾರಿನಲ್ಲಿ ಇಬ್ಬರು ಬೆಡ್ ಶೀಟ್ ವ್ಯಾಪಾರಿಗಳು ಇದ್ದರು ಎನ್ನಲಾಗಿದೆ. ಶಿವಮೊಗ್ಗದಿಂದ ಬೆಡ್ ಶಿಟ್ ವ್ಯಾಪಾರಕ್ಕಾಗಿ ತೆರಳುವಾಗ ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಗದ್ದೆಗೆ ಪಲ್ಟಿ ಹೊಡೆದಿದೆ. ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯರು ಕೂಡಲೇ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಿದ್ದಾರೆ.
– ಭದ್ರಾವತಿ : ಚಲಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ, ಸವಾರನ ಕಾಲಿಗೆ ಗಂಭೀರ ಗಾಯ..!!
ಭದ್ರಾವತಿ: ಚಲಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ. ಭದ್ರಾವತಿ ತಾಲೂಕು ಕೈಮರ ಸರ್ಕಲ್ನಲ್ಲಿ ಘಟನೆ ಸಂಭವಿಸಿದೆ. ಅರಹತೊಳಲು ಗ್ರಾಮದ ಲೋಕೇಶಪ್ಪ ಅವರು ಬೈಕ್ನಲ್ಲಿ ತೆರಳುವಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಲೋಕೇಶಪ್ಪ ಅವರ ಎಡಗಾಲಿಗೆ ತೀವ್ರ ಗಾಯವಾಗಿದೆ. ಅಪಘಾತ ಪಡಿಸಿದ ಕಾರು ಚಾಲಕನೆ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಲೋಕೇಶಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : ಬಿಜೆಪಿ ಮುಖಂಡನಿಗೆ ಬೈಕ್ ಡಿಕ್ಕಿ..!!
ಶಿವಮೊಗ್ಗ: ನಮೋ ಯುವ ರನ್ ಮ್ಯಾರಥಾನ್ನಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕ ಎಸ್.ದತ್ತಾತ್ರಿ ಅವರು ಬಿ.ಹೆಚ್.ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾದ್ದರಿಂದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಲಿಸಲಾಯಿತು. ವೈದ್ಯಕೀಯ ತಂಡ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆಗೆ ನಾಲ್ಕು ಹೊಲಿಗೆ ಹಾಕಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್ಸಿ ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಎನ್. ಕೆ.ಜಗದೀಶ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ದತ್ತಾತ್ರಿ ಅವರ ಆರೋಗ್ಯ ವಿಚಾರಿಸಿದರು.








