ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾಲಕ್ಷ್ಮಿ ತಾಯಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಕೆಲಸದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ ಅವರನ್ನು ಸಂತೋಷವಾಗಿಡಿ. ಸಮೃದ್ಧಿಯು ನಿಮಗೆ ಬುದ್ಧಿವಂತ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ವೃತ್ತಿಪರ ಯಶಸ್ಸು ನಿಮ್ಮ ಶಕ್ತಿಯಾಗಲಿದೆ. ** ವೃಷಭ ರಾಶಿ : ವಿವಿಧ ಸಂಸ್ಕೃತಿಗಳ ಜನರೊಂದಿಗೆ ಬೋಧನೆ, ಬರವಣಿಗೆ ಅಥವಾ ಸಂಪರ್ಕದ ಅಗತ್ಯವಿರುವ ವ್ಯವಹಾರಗಳನ್ನು ಪರಿಗಣಿಸಲು ಇಂದು ಉತ್ತಮ ದಿನ. ಇತರರೊಂದಿಗಿನ ನಿಮ್ಮ ಸಂಬಂಧಗಳ ಮೇಲೆ ಕೇಂದ್ರೀಕರಿಸಲು ಮತ್ತು ನಿಮ್ಮ ವೈಯಕ್ತಿಕ ಮತ್ತು ಕೆಲಸದ ಜೀವನವನ್ನು ಸಮತೋಲನಗೊಳಿಸಲು ಇದು ಸಮಯ. ಎಲ್ಲಾ…
Author: Nammur Express Karkala
ಐವತ್ತು ಸಾವಿರ ದಾಟಿದ ಚಾಲಿ ಅಡಿಕೆ! – ಅಡಿಕೆ ಫಸಲು ಕಡಿಮೆ ಇರುವುದರಿಂದ ಅಡಿಕೆ ಬೆಲೆ ಏರಿಕೆ – ರಾಜ್ಯದಲ್ಲಿ ಎಲ್ಲಾ ಕಡೆ ಅಡಿಕೆ ದರ ಹೆಚ್ಚಳ NAMMUR EXPRESS NEWS ಮಂಗಳೂರು : ಚಾಲಿ ಅಡಕೆ (ಸಿಂಗಲ್ ಚೋಲ್) ಮಂಗಳವಾರ ಕೆ.ಜಿಗೆ 520 ರೂ.ಗೆ ಖರೀದಿಯಾಗಿದೆ. ಕಳೆದ ವಾರ 500 ರೂ. ಗಡಿ ತಲುಪಿತ್ತು. ಮುಂದಿನ ದಿನಗಳಲ್ಲಿ ಸಿಂಗಲ್ ಮಂಗಳೂರು ಚಾಲಿ ಅಡಕೆ 550 ರೂ. ಗಡಿ ಚೋಲ್ ದಾಟುವ ನಿರೀಕ್ಷೆ ಇದೆ. ಸಿಂಗಲ್ ಜೋಲ್ ಅಡಕೆಗೆ ಕ್ಯಾಂಪ್ಲೋ 520 ರೂ. ನಿಗದಿ ಮಾಡಿದ ಬೆನ್ನಲ್ಲೇ ಕೆಲವು ಖಾಸಗಿ ವ್ಯಾಪಾರಸ್ಥರು ವರವನ್ನು ಕೊಂಚ ಏರಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ಸಿಂಗಲ್ ಬೋಲ್ ಗೆ 480 ರೂ. ದರವಿತ್ತು. ಕರಿಕೋಕ ಅಡಕೆಗೆ ಕಳೆದ ವರ್ಷ ಬೇಡಿಕೆ ಇಲ್ಲದ ಕಾರಣ ಈ ಸಮಯಕ್ಕೆ ಕೆ.ಜಿಗೆ 70 ರೂ. ದರವಿತ್ತು. ಈ ಬಾರಿ 250 ರೂ. ದರವಿದೆ. ಉತ್ತರ ಭಾರತದಲ್ಲಿ ಅಡಕೆ ಬೇಡಿಕೆ…
ಕುಂದಾಪುರ: ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಭಾಗ್ಯ! – ಉಷಾ ಗ್ರಾಂಡ್ ಹೋಟೆಲ್ ಎದುರು ನಡೆದ ಸ್ಮಾರ್ಟ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಯಶಸ್ವಿ – ಆಯೋಜನೆಗೆ ಹೋಟೆಲ್ ಕಾರ್ಮಿಕರಿಂದ ಮೆಚ್ಚುಗೆ NAMMUR EXPRESS NEWS ಕುಂದಾಪುರ: ಕುಂದಾಪುರದ ಉಷಾ ಗ್ರಾಂಡ್ ಹೋಟೆಲ್ ಎದುರು, ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಹೋಟೆಲ್ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕಿಂತ ಹೆಚ್ಚು ಹೋಟೆಲ್ ಕಾರ್ಮಿಕರು ಭಾಗವಹಿಸಿ, ತಮ್ಮ ಸ್ಮಾರ್ಟ್ ಕಾರ್ಡ್ ನೋಂದಣಿ ಪೂರ್ಣಗೊಳಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ, ಪರಿಸರದ ಅನೇಕ ಹೋಟೆಲ್‌ಗಳ ಕಾರ್ಮಿಕರು ಬಂದು ಯೋಜನೆಯಿಂದ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಆಯುಕ್ತರು ಹಾಗೂ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು ಮಾರ್ಗದರ್ಶನ…
ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ – ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನುಡಿ ನಮನ – ಸಮಾಜ ಸೇವಕ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್, ಸುಧನ್ವ, ನಮನ ಅವರಿಗೆ ಸನ್ಮಾನ ತೀರ್ಥಹಳ್ಳಿ: ರಾಜ್ಯದ ಕ್ರಿಯಾಶೀಲ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಅ.29ರ ಸಂಜೆ ಸರಳವಾಗಿ ಪುನೀತ್ ನಮನ-2025 ಕಾರ್ಯಕ್ರಮ ಆಚರಣೆ ಮಾಡಲಾಯಿತು. ತೀರ್ಥಹಳ್ಳಿ ಸಮಾಜ ಸೇವಕರು, ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ಕುಪ್ಪಳಿ, ಪ್ರಶಾಂತ್ ಕುಮಾರ್, ಶ್ರೀಕಾಂತ್ ಬೆಟ್ಟಮಕ್ಕಿ, ರಾಘವೇಂದ್ರ ಚಿಡುವ, ಶಿರುಪತಿ ಮಂಜುನಾಥ್ ಸೇರಿ ಅನೇಕರು, ನಮ್ಮೂರ್ ಎಕ್ಸ್ ಪ್ರೆಸ್ ಸಿಬ್ಬಂದಿ, ಪುನೀತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸೊಪ್ಪುಗುಡ್ಡೆ ರಾಘವೇಂದ್ರ ಅವರು, ಪುನೀತ್…
ಹಸೆಮಣೆ ಏರಬೇಕಿದ್ದ ಯುವತಿ ಇಂದು ಹೃದಯಾಘಾತಕ್ಕೆ ಬಲಿ * ಲೋ ಬ್ಲಡ್ ಪ್ರಷರ್ ಹಾಗೂ ಹೃದಯಾಘಾತದಿಂದ ಸಾವು ಶಂಕೆ * ಶುಕ್ರವಾರ ನಡೆಯಬೇಕಿದ್ದ ಮದುವೆ,ವಿಧಿಯ ಕ್ರೂರ ಅಟ್ಟಹಾಸ NAMMMUR EXPRESS NEWS ಅಜ್ಜಂಪುರ: ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದ ಯುವತಿಯೊಬ್ಬಳು ಅಕಾಲಿಕವಾಗಿ ಮರಣಹೊಂದಿದ ಹೃದಯವಿದ್ರಾವಕ ಘಟನೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಸೊಲ್ಲಾಪುರ ಗ್ರಾಮದ ಶೃತಿ(24)ಅವರು ಅಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶೃತಿ ಅವರಿಗೆ ಲೋ ಬ್ಲಡ್ ಪ್ರೆಶರ್ ಹಾಗೂ ಹೃದಯಾಘಾತ ಉಂಟಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. * ಶುಕ್ರವಾರ ನಡೆಯಬೇಕಿದ್ದ ಮದುವೆಗೆ,ವಿಧಿಯ ಕ್ರೂರ ಅಟ್ಟಹಾಸ ಶೃತಿ ಅವರ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ ನಾಳೆ (ಶುಕ್ರವಾರ) ನಡೆಯಬೇಕಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗಲೇ ಈ ದುರ್ಘಟನೆ ನಡೆದಿದ್ದು, ಮನೆಯವರಲ್ಲಿ ಹಾಗೂ ಸಂಬಂಧಿಕರ ವಲಯದಲ್ಲಿ ಆಘಾತದ ಅಲೆ ಹರಡಿದೆ.ಮದುವೆ ಸಂಭ್ರಮದ ಮನೆಯನ್ನು ಕ್ಷಣಾರ್ಧದಲ್ಲಿ ಸೂತಕದ ವಾತಾವರಣ ಆವರಿಸಿದ್ದು, ಕಣ್ಣೀರಿನಲ್ಲಿ…
ಕರಾವಳಿ ಟಾಪ್ 10 ನ್ಯೂಸ್ * ಬಂಟ್ವಾಳ: ಕಾಣೆಯಾದ ಆಟೋ ಚಾಲಕ * ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ * ಉಳ್ಳಾಲ: ಮಾದಕ ವಸ್ತು ಸೇವನೆ; ಆರೋಪಿ ಪೊಲೀಸರಿಗೆ ಸೆರೆ * ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರರ ಅಕ್ರಮ ಕೂಟ * ಕುಂದಾಪುರ: ರಾತ್ರೋರಾತ್ರಿ ಹಣ ಲಪಟಾಯಿಸಿದ ಅನಾಮಿಕರು * ಪುತ್ತೂರು: ಮೇಯಲು ಬಿಟ್ಟ ಎರಡು ಆಡುಗಳ ಕಳುವು * ಕಡಬ: ಬೃಹತ್ ನೀರಿನ ಟ್ಯಾಂಕ್ ತೆರವು * ಕಾಪು: ಅಪಾಯಕಾರಿಯಾಗಿವೆ ಹೊಂಡಮಯ ರಸ್ತೆಗಳು * ಕಾರ್ಕಳ: ಸರ್ಕಾರಿ ಬಸ್ ಗಳಿಗಾಗಿ ಬೇಡಿಕೆ * ಹೆಬ್ರಿ: ತಂತಿ ಬೇಲಿಗೆ ಸಿಲುಕಿದ್ದ ಚಿರತೆಯ ರಕ್ಷಣೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬಂಟ್ವಾಳ: ಹಳೆ ಸೇತುವೆಯ ಬಳಿ ಆಟೋವನ್ನು ನಿಲ್ಲಿಸಿ, ಚಾಲಕ ನಾಪತ್ತೆಯಾಗಿರುವ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ. ನಾಪತ್ತೆಯಾಗಿರುವ ಆಟೋ ಚಾಲಕ ಮಾರ್ನಬೈಲು ನಿವಾಸಿ ಪ್ರೀತಮ್ ಲೋಬೋ ಎಂಬ ಮಾಹಿತಿ ಲಭಿಸಿದೆ. ಬುಧವಾರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ಬ್ಯಾಟರಿ ಚಾಲಿತ…
ಧರ್ಮಸ್ಥಳ ಕೇಸ್ ನಲ್ಲಿ ಬಿಗ್ ಟ್ವಿಸ್ಟ್..! – ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನದಿಂದ ಪ್ರಕರಣವನ್ನು ರದ್ದುಪಡಿಸುವಂತೆ ಸೂಚನೆ – ಕೇಸ್ ರದ್ದು ಮಾಡಲು ಬುರುಡೆ ಗ್ಯಾಂಗ್ ಹೈಕೋರ್ಟ್ ಗೆ ಅರ್ಜಿ.! NAMMUR EXPRESS NEWS ಬೆಂಗಳೂರು : ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ. ಉತ್ಖನನ ಮಾಡಿ, ತನಿಖೆ ನಡೆಸಿ ಎಂದು ತಾವೇ ಕೊಟ್ಟ ಅತ್ಯಂತ ಮಹತ್ವದ ದೂರನ್ನು ಇದೀಗ ವಜಾಗೊಳಿಸಿ ಎಂದು ಹೈಕೋರ್ಟ್ ಗೆ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬುರುಡೆ ಗ್ಯಾಂಗ್ ನೀಡಿದ್ದ ದೂರನ್ನು ವಜಾಗೊಳಿಸಿ ಎಂದು ಬುರುಡೆ ಗ್ಯಾಂಗ್ ಹೈಕೋರ್ಟ್ ಗೆ ಮನವಿ ಮಾಡಿದೆ. ಇವರು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ, ಎಸ್‌ಐಟಿ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಆರಂಭಿಕ ಎಲ್ಲಾ ಹೇಳಿಕೆಯಲ್ಲಿ ಎಸ್‌ಐಟಿ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಬುರುಡೆ ಗ್ಯಾಂಗ್ ಇದೀಗ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳ ವಿರುದ್ಧ ನಡೆದ ಅಪಪ್ರಚಾರ ಪ್ರಕರಣ ಇದಾಗಿದ್ದು,…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ತುಂಬಾ ಶುಭ ದಿನವಾಗಲಿದೆ. ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕೋಪ ಮತ್ತು ವಾದಗಳನ್ನು ನಿಯಂತ್ರಿಸಿ, ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಇಂದು, ನೀವು ಹೆಚ್ಚು ಕೆಲಸ ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳಿರುವುದಿಲ್ಲ. ಇಂದು, ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ** ವೃಷಭ ರಾಶಿ : ಇಂದು ನಿಮಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವಾಗ…
ಕ್ರಿಕೆಟ್ ಅಲ್ಲಿ ಆಗುಂಬೆ ಠಾಣೆ ಪೊಲೀಸರು ಚಾಂಪಿಯನ್ – ಮಾಳೂರು ಪೊಲೀಸ್ ತಂಡ ರನ್ನರ್ ಅಪ್ NAMMUR EXPRESS NEWS ತೀರ್ಥಹಳ್ಳಿ: ಅ. 28ರಂದು ಆಯೋಜಿಸಿದ್ದ ಉಪ ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಗುಂಬೆ ಠಾಣೆ ಪೊಲೀಸರು ಚಾಂಪಿಯನ್ ಪಟ್ಟ ಗಳಿಸಿದ್ದಾರೆ. 6 ಪೊಲೀಸ್ ಠಾಣೆಗಳಾದ ತೀರ್ಥಹಳ್ಳಿ, ಆಗುಂಬೆ, ಮಾಳೂರು,ರಿಪ್ಪನಪೇಟೆ,ನಗರ, ಹೊಸನಗರ ತಂಡಗಳು ಭಾಗವಹಿಸಿದ್ದು ಈ ಆರು ತಂಡಗಳ ಪೈಕಿ ಪೈನಲ್ಸ್ ನಲ್ಲಿ ಆಗುಂಬೆ ಪೊಲೀಸ್ ಠಾಣೆಯ ತಂಡ ವಿನ್ನರ್ಸ್ ಆಗಿದ್ದು ಮಾಳೂರು ಪೊಲೀಸ್ ತಂಡ ರನ್ನರ್ ಅಪ್ ಆಗಿರುತ್ತದೆ. ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ಪಡೆದ ತಂಡಗಳಿಗೆ ಅಭಿನಂದನೆಗಳು.
ರಾಜ್ಯಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ * ರಸ್ತೆ ಗುಂಡಿ ಸಮಸ್ಯೆ,ಹಕ್ಕುಪತ್ರ ವಿಳಂಬ,ರೈತರ ವಿರುದ್ಧ ಎಸ್‌ಐಟಿ ರಚನೆ ವಿರೋಧಿಸಿ ಆಕ್ರೋಶ * ರಸ್ತೆ ಗುಂಡಿ ಮುಚ್ಚಿದ ಜೆಡಿಎಸ್ ಕಾರ್ಯಕರ್ತರು, ರಸ್ತೆ ಸರಿಪಡಿಸುವಂತೆ ಆಗ್ರಹ NAMMMUR EXPRESS NEWS ಕೊಪ್ಪ: ಶೃಂಗೇರಿ ಕ್ಷೇತ್ರದಾದ್ಯಂತ ತಲೆದೂರಿರುವ ರಸ್ತೆ ಗುಂಡಿ ಸಮಸ್ಯೆ ಮತ್ತು ಕ್ಷೇತ್ರದ ಅಭಿವೃದ್ಧಿ ಕುಂಠಿತವನ್ನು ವಿರೋಧಿಸಿ ಜೆಡಿಎಸ್‌ನಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ನೇತೃತ್ವದಲ್ಲಿ ಆಯೋಜನೆಗೊಂಡ ಪ್ರತಿಭಟನೆಯು ಕೊಪ್ಪದ ಕುವೆಂಪು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಜೆಡಿಎಸ್ ಹಿರಿಯ ನಾಯಕರೂ, ಕಾರ್ಯಕರ್ತರೂ, ಭಾಗವಹಿಸಿದರು. ರಸ್ತೆ ಗುಂಡಿಗಳನ್ನು ಸ್ವತಃ ತಾವೇ ಮುಚ್ಚುವ ಮೂಲಕ ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಶಾಸಕರು ಹಾಗು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಸರ್ಕಾರ ಹಾಗೂ ಶಾಸಕರ ಅಸಮರ್ಥತೆಯನ್ನು ವಿರೋಧಿಸಿ ಸ್ಥಳೀಯರು ಮತ್ತು ಪಕ್ಷದ ಕಾರ್ಯಕರ್ತರು ಸರ್ಕಾರದ…



