ಕ್ರೀಡಾಕೂಟ: ಕಾರ್ಕಳದ ಕ್ರೈಸ್ಟ್ ಕಿಂಗ್, ಶಾಲೆ, ಕಾಲೇಜು ಸಾಧನೆ – ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ – ಜಾವೆಲಿನ್ ಎಸೆತದಲ್ಲಿ ಸುದೀಶ್ ಎಸ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ NAMMUR EXPRESS NEWS ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ರಾಧಾನಾಯಕ್ ಸರಕಾರಿ ಪ್ರೌಢಶಾಲೆ, ಎಣ್ಣೆಹೊಳೆ, ಕಾರ್ಕಳ ಇಲ್ಲಿ ನಡೆದ 14ರ ವಯೋಮಿತಿಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅಭಿಷ್ 400 ಮೀ ಓಟ ಮತ್ತು 80ಮೀ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ, ಸ್ಮಿತಿ ಶೆಟ್ಟಿ ಎತ್ತರ ಜಿಗಿತ ದ್ವಿತೀಯ, ಸುದೀಕ್ಷಾ ಚಕ್ರ ಎಸೆತ ದ್ವಿತೀಯ, 6ನೇ ತರಗತಿಯ ತ್ರಿಷ್ಮಾ 200 ಮೀ ದ್ವಿತೀಯ ಸ್ಥಾನ ಪಡೆದುಕೊಂಡು ತಾಲುಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಬಾಲಕರ 400×100 ರಿಲೇಯಲ್ಲಿ ಎಂಟನೇ ತರಗತಿಯ ಅಭಿಷ್,…
Author: Nammur Express Karkala
ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಪುಸ್ತಕಗಳಿಗೆ ವಿಶೇಷ ರಿಯಾಯಿತಿ – ಕರ್ನಾಟಕದ ಪ್ರಮುಖ ಪುಸ್ತಕ ಮಳಿಗೆ ಕ್ರಿಯೇಟಿವ್ ಪುಸ್ತಕ ಮನೆ – ಪುಸ್ತಕ ಪ್ರೇಮಿಗಳಿಗೆ 10% ನಿಂದ 50%ನ ವರೆಗೆ ರಿಯಾಯಿತಿ – ನ.1ರಿಂದ ನ. 9ರವರೆಗೆ ಕಾರ್ಕಳ, ಮೂಡಬಿದಿರೆ ಮಳಿಗೆಯಲ್ಲಿ ರಿಯಾಯಿತಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕದ ಪ್ರಮುಖ ಪುಸ್ತಕ ಮಳಿಗೆ ಹಾಗೂ ಪ್ರಕಾಶನ ಸಂಸ್ಥೆ ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಪುಸ್ತಕಗಳಿಗೆ ವಿಶೇಷ ರಿಯಾಯಿತಿ ಮಾರಾಟ ಶುರುವಾಗಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿಯ ಪ್ರಚಾರ ಹಾಗೂ ಓದುಗರಲ್ಲಿ ಪುಸ್ತಕಾಭಿರುಚಿ ಬೆಳೆಸುವ ಉದ್ದೇಶದಿಂದ ಕಾರ್ಕಳ ಹಾಗೂ ಮೂಡುಬಿದಿರೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ವಿಶೇಷ ರಿಯಾಯಿತಿಯಲ್ಲಿ ಪುಸ್ತಕ ಮಾರಾಟ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಸಾಹಿತ್ಯ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ನೂರಾರು ಪುಸ್ತಕಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಕನ್ನಡ ಸಾಹಿತ್ಯ ಕ್ಷೇತ್ರದ ಮಹನೀಯರ ಕೃತಿಗಳ ಜೊತೆಗೆ ಯುವ…
ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ * ಕನ್ನಡ ಹೋರಾಟಗಾರ, ಸಮಾಜವಾದಿ ಹಿರಿಯ ಕೊಂಡಿಗೆ ರಾಜ್ಯದ ನಮನ * ಮಲೆನಾಡು ಕಂಡ ಅಪ್ರತಿಮ ನಾಯಕನಿಗೆ ಒಲಿದ ಪ್ರಶಸ್ತಿ ಕನ್ನಡದ ಕಣ್ಮಣಿಗಳು-1 ವಿಶೇಷ ವರದಿ:ಉಮೇಶ್ ದೇಮ್ಲಾಪುರ ಶಿವಮೊಗ್ಗ: ಮಾಜಿ ಶಾಸಕರು, ಸಮಾಜವಾದಿ ಹೋರಾಟಗಾರರು ಆದ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಮಾಜವಾದಿ ಹಿರಿಯ ಕೊಂಡಿ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಮಲೆನಾಡಿಗರ ಸಂತಸಕ್ಕೆ ಕಾರಣವಾಗಿದೆ. ಕನ್ನಡದ ಕಾವ್ಯ, ನಾಟಕ, ಸಾಹಿತ್ಯ, ರಾಜಕೀಯ ಹಾಗೂ ಹೋರಾಟದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಕೋಣಂದೂರು ಲಿಂಗಪ್ಪ ಅವರು ಈ ಬಾರಿ 2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೋಣಂದೂರು ಲಿಂಗಪ್ಪ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಉಳುವವನೇ ಹೊಲದೊಡೆಯ ಚಳುವಳಿಯ ಮೂಲಕ ಗೇಣಿದಾರರ ರೈತರಿಗೆ ಭೂ ಒಡೆತನ ಸಿಗುವಂತೆ ಮಾಡಿದ ಅಪ್ಪಟ ಸಮಾಜವಾದಿ ಹೋರಾಟಗಾರರಾಗಿದ್ದಾರೆ. ಬಹುಮುಖ ಪ್ರತಿಭೆ ಲಿಂಗಪ್ಪ ಕೋಣಂದೂರು ಮೂಲದ ಈ ಬಹುಮುಖ ಪ್ರತಿಭೆ…
70 ಮಂದಿ ಸಾಧಕರು, ಸೇವಕರಿಗೆ ರಾಜ್ಯೋತ್ಸವ ಪ್ರಶಸ್ತಿ – ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ 70 ಮಂದಿ ಆಯ್ಕೆ – 5 ಲಕ್ಷ ನಗದು, 25 ಗ್ರಾಂ ಚಿನ್ನ ಪ್ರಮಾಣ ಪತ್ರ NAMMUR EXPRESS NEWS ಬೆಂಗಳೂರು: 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಅಧಿಕೃತ ಪಟ್ಟಿ ಕರ್ನಾಟಕ ಸರ್ಕಾರದಿಂದ ಪ್ರಕಟವಾಗಿದೆ. ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಆಯ್ಕೆ ಮಾಡಲಾಗಿದೆ. ನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ. ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದೆ. ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಾರೆ ” ಎಂದು ಸಚಿವ ಶಿವರಾಜ್ ತಂಗಡಗಿ ವಿಧಾನಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ…
ಆಂಟಿಗೆ ಪಿಂಟಿಗೆ ಮಾಡಿ ಗ್ರಾಮದ ಅಭಿವೃದ್ಧಿಗೆ ಹಣ! – ಕಲ್ಲುಕೊಡಿಗೆ ಶ್ರೀ ಧರ್ಮಶ್ರೀ ಯುವಕ ಸಂಘದ ಕೆಲಸ ಮಾದರಿ – ಅಂಟಿಗೆ ಪಿಂಟಿಗೆ ಕಲಾವಿದರಿಗೆ ಸನ್ಮಾನದ ಗೌರವ NAMMUR EXPRESS NEWS ತೀರ್ಥಹಳ್ಳಿ/ಕೊಪ್ಪ: ಆಂಟಿಗೆ ಪಿಂಟಿಗೆ ಮಲೆನಾಡಿನ ಪ್ರಸಿದ್ಧ ಕಲೆ. ಆಂಟಿಗೆ ಪೆಂಟಿಗೆಯನ್ನು ದೀಪಾವಳಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಜ್ಯೋತಿಯನ್ನು ಬೆಳಗಿಸಿ ಆಚರಣೆ ಮಾಡಲಾಗುತ್ತದೆ. ಇಂತಹ ಆಚರಣೆ ಇದೀಗ ಸಮಾಜದ ಅಭಿವೃದ್ಧಿ ಕೆಲಸಕ್ಕೂ ವೇದಿಕೆಯಾಗಿದೆ. ಹೌದು. ತೀರ್ಥಹಳ್ಳಿ ತಾಲೂಕು ಹಾಗೂ ಕೊಪ್ಪ ತಾಲೂಕಿನ ಗಡಿ ಭಾಗವಾದ ಗಡಿಕಲ್ ಸಮೀಪದ ಕಲ್ಲುಕೊಡಿಗೆ -ಮುಸ್ಸಿನ ಕೊಪ್ಪದ ಶ್ರೀ ಧರ್ಮಶ್ರೀ ಯುವಕ ಮಂಡಲದ ಅಧ್ಯಕ್ಷರಾದ ಸುಧಾಕರ್ ಕುಪ್ಪಳ್ಳಿ ಇವರ ನೇತೃತ್ವದಲ್ಲಿ ಎಲ್ಲಾ ಸದಸ್ಯರು, ಗ್ರಾಮಸ್ತರ ಸಹಯೋಗದಲ್ಲಿ ನಡೆಸಲಾಯಿತು. ಬೆಕ್ಕನೂರು ಗ್ರಾಮದ ಮುಸ್ಸಿನಕೊಪ್ಪದಲ್ಲಿ ನಿರ್ಮಾಣ ಆಗಿರುವ ನವೀಕೃತ ಸಮುದಾಯ ಭವನದ ಅಭಿವೃದ್ಧಿ ಕೆಲಸಗಳಿಗಾಗಿ ಸಂಘದ ಸದಸ್ಯರು ಮನೆ ಮನೆಗಳಿಗೆ ತೆರಳಿ ಸುಮಾರು ಐದು ದಿನಗಳ ಕಾಲ ಅಕ್ಕಿ, ತೆಂಗಿನ ಕಾಯಿ, ಅಡಿಕೆ ಸೇರಿ ಸುಮಾರು 90 ಸಾವಿರ…
ಎನಿತು ಇನಿತು ಕನ್ನಡ ನುಡಿಯು… ಮನವನು ತಣಿಸುವ ಮೋಹನ ಸುಧೆಯೂ… ಕನ್ನಡ ರಾಜ್ಯೋತ್ಸವ… ನಮ್ಮೆಲ್ಲರ ಮನೆ ಮನೆ ಉತ್ಸವ..! – ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕನ್ನಡ ಕಟ್ಟೋಣ… ಕನ್ನಡ ಬೆಳೆಸೋಣ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಎನಿತು ಇನಿತು ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯೂ…ಕನ್ನಡದ ಮಣ್ಣು ಎಲ್ಲರಿಗೂ ಹೆಮ್ಮೆ. ಕರುನಾಡಿಗೆ ನವೆಂಬರ್ 1 ಉದಯದ ದಿನ. ಈ ನಾಡಿನ ಹಬ್ಬಕ್ಕೆ ಇಡೀ ಕರುನಾಡು ಸಂಭ್ರಮದಲ್ಲಿದೆ. ಮಂತ್ರ ಕಣ ಶಕ್ತಿ ಕಣ ತಾಯಿ ಕಣ ಎಂದು ಕುವೆಂಪುರ ಹೊಗಳಿಕೆಗೆ ಪಾತ್ರವಾದ ನಾಡು ನುಡಿ ನಮ್ಮದು. ಅಂತಹ ಪಾವನ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಕನ್ನಡಿಗನು ಧನ್ಯ. ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾದ ವಿಶ್ವ ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಬಾ ಭಾವೆ ಅವರಿಂದ ಕರೆಸಿಕೊಂಡ ಕನ್ನಡ ಭಾಷೆಗೆ ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಹಲವು ಪ್ರಥಮತೆಗಳಿಗೆ ಸಾಕ್ಷಿಯಾದ ಭಾಷೆ ಮತ್ತು ನಾಡು ನಮ್ಮದು. ರಾಜ ಮಹಾರಾಜರು,…
ಮಲೆನಾಡು ಟಾಪ್ 3 ನ್ಯೂಸ್ ಕೆರೆಕಟ್ಟೆಯಲ್ಲಿ ಆನೆ ದಾಳಿಗೆ ಇಬ್ಬರ ಬಲಿ: ಆಕ್ರೋಶದ ಕಿಚ್ಚು! – ಸ್ಥಳಕ್ಕೆ ಜೀವರಾಜ್ ಸೇರಿ ಅನೇಕ ನಾಯಕರ ಆಗಮನ – ಭಾರೀ ಹೋರಾಟಕ್ಕೆ ಸಿದ್ಧತೆ: ಇಬ್ಬರ ಸಾವಿಗೆ ಯಾರು ಹೊಣೆ? – ಕೋಣಂದೂರು ಮೂಲದ ಪೂಜಾ ಆತ್ಮಹತ್ಯೆ! * ಆಸ್ಪತ್ರೆಯಲ್ಲೇ ಪತ್ನಿ ಶವ ಬಿಟ್ಟು ಪರಾರಿಯಾದ ಪತಿ – ಮಳೆ ಮಳೆ: ಅಡಿಕೆ ಬೆಳೆಗಾರರ ಬದುಕು ಕಷ್ಟ ಕಷ್ಟ! NAMMUR EXPRESS NEWS ಶೃಂಗೇರಿ: ಶೃಂಗೇರಿಯ ಕೆರೆಕಟ್ಟೆಯಲ್ಲಿ ಆನೆ ದಾಳಿಯಿಂದ ಇಬ್ಬರ ಸಾವು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ದಾಳಿಗೆ ಇಬ್ಬರು ಗ್ರಾಮಸ್ಥರು ಜೀವ ತೆತ್ತಿದ್ದಾರೆ. ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಲಾರ ಸಮೀಪ…
ಕರಾವಳಿಯಲ್ಲಿ ಏನೇನ್ ಆಯ್ತು? – ಪ್ರಮುಖ 10 ಸುದ್ದಿಗಳು * ಹೆಬ್ರಿ: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್ * ಪುತ್ತೂರು: ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ * ಸುಳ್ಯ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ •ಕುಂದಾಪುರ: ವಿದೇಶದಲ್ಲಿ ಉದ್ಯೋಗ ನೆಪದಲ್ಲಿ ಹಣದ ವಂಚನೆ * ಬ್ರಹ್ಮಾವರ: ಕಳಪೆ ಗುಣಮಟ್ಟದ ಆಭರಣ ಅಡವಿಟ್ಟು ಸಾಲ * ಬಂಟ್ವಾಳ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ * ಮೂಲ್ಕಿ: ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ಸಂಗ್ರಹ! * ಕಾರ್ಕಳ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು * ಉಡುಪಿ: ಪೊಲೀಸರ ಟೋಪಿಯಲ್ಲಿ ಬದಲಾವಣೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಹೆಬ್ರಿ: ರಸ್ತೆ ಬದಿಯಲ್ಲಿ ಇರಿಸಿದ್ದ ಬ್ಯಾರಿಕೇಡ್ ಗೆ ಬೈಕ್ ವೊಂದು ಢಿಕ್ಕಿ ಹೊಡೆದ ಘಟನೆ, ಕಳೆದ ಕೆಲವು ದಿನಗಳ ಹಿಂದೆ ಮುದ್ರಾಡಿಯ ಆಟೋ ನಿಲ್ದಾಣದ ಬಳಿ ನಡೆದಿದೆ. ಮುದ್ರಾಡಿ ಗ್ರಾಮದ ಹರೀಶ್ ಎನ್ನುವವರು ಬೈಕ್ ನಲ್ಲಿ ಬಚ್ಚಪ್ಪು ಕಡೆಯಿಂದ ಮುದ್ರಾಡಿಯತ್ತ…
ಜಾತಿ ಗಣತಿ ಸಮೀಕ್ಷೆ ಇಂದು ಅಂತ್ಯ..!! – ಆನ್‌ಲೈನ್ ಸಮೀಕ್ಷೆಗೆ ನ.10ರ ವರೆಗೆ ಅವಕಾಶ – 5.52 ಕೋಟಿ ಮಂದಿ ಸಮೀಕ್ಷೆ NAMMUR EXPRESS NEWS ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಶುಕ್ರವಾರಕ್ಕೆ ಅಂತ್ಯವಾಗಲಿದೆ. ಅವಧಿ ವಿಸ್ತರಣೆಯ ನಿರ್ಧಾರ ಆಗಿಲ್ಲ. ಆನ್‌ಲೈನ್‌ನಲ್ಲಿ ಮಾಹಿತಿ ನೀಡುವವರಿಗೆ ನ.10 ವರೆಗೆ ಅವಕಾಶ ನೀಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಗುರುವಾರದ ಅಂತ್ಯಕ್ಕೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಹಾಗೂ 5,52, 57,205 (ಶೇ.101) ಜನರ ಸಮೀಕ್ಷೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದೆ. ಇದಕ್ಕೆ ಕೆಲ ತಾಂತ್ರಿಕ ಕಾರಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರಾಗಿದ್ದಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದರು. ಅಲ್ಲದೆ, ವಿದ್ಯುತ್…
ಶೃಂಗೇರಿಯಲ್ಲಿ ಕಾಡು ಆನೆ ದಾಳಿಗೆ ಇಬ್ಬರು ಬಲಿ! – ಸಹೋದರರನ್ನು ತುಳಿದು ಸಾಯಿಸಿದ ಕಾಡು ಆನೆ – ಸ್ಥಳದಲ್ಲಿ ಬಿಗುವಿನ ವಾತಾವರಣ: ಜನರ ಆಕ್ರೋಶ NAMMUR EXPRESS BREAKING NEWS ಶೃಂಗೇರಿ: ಕಾಡಾನೆ ದಾಳಿಗೆ ಇಬ್ಬರು ರೈತರ ದುರ್ಮರಣವಾಗಿದೆ. ಶೃಂಗೇರಿಯ ಕೆರೆಕಟ್ಟೆಯಲ್ಲಿ ಕಾಡಾನೆಯ ಭೀಕರ ದಾಳಿಗೆ ಇಂದು ಮುಂಜಾನೆ ಉಮೇಶ್ ಮತ್ತು ಹರೀಶ್ ಎಂಬ ಇಬ್ಬರು ಸಹೋದರರು ರೈತರು ದುರ್ಮರಣ ಹೊಂದಿದ್ದಾರೆ. ಅರಣ್ಯ ಸಚಿವರು ಹಾಗೂ ಶಾಸಕರು ಸ್ಥಳಕ್ಕೆ ಆಗಮನ ಮಾಡಲೇಬೇಕು ಎಂದು ಜನ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಮಂದಿ ಕಾಡು ಆನೆ ದಾಳಿಗೆ ಈ ವರೆಗೆ ಬಲಿ ಆಗಿದ್ದಾರೆ. ಆಗುಂಬೆ ಬಳಿ ಪ್ರತ್ಯಕ್ಷ ಆಗಿದ್ದ ಆನೆ ಇದು ಎನ್ನಲಾಗಿದೆ.



