- ಭದ್ರಾವತಿಯಲ್ಲಿ ಘಟನೆ: ಆಸ್ಪತ್ರೆಗೆ ದಾಖಲು
- ಸೊರಬದಲ್ಲಿ ಬಾಲಕರ ಅಶ್ಲೀಲ ವಿಡಿಯೋ: ಜೈಲು
- ಭದ್ರಾವತಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ…!
NAMMUR EXPRESS NEWS
ಭದ್ರಾವತಿ: ಹಾವು ಎಂದರೆ ಕಿಲೋ ಮೀಟರ್ ಓಡುವವರೇ ಹೆಚ್ಚು. ಆದರೆ ಇಲ್ಲೊಬ್ಬ ಭೂಪ ನಾಗರ ಹಾವೊಂದಕ್ಕೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದ್ದು ಘಟನೆ ಅಚ್ಚರಿ ಮೂಡಿಸಿದೆ.
ಭದ್ರಾವತಿಯ ಅಲೆಕ್ಸ್ ನಾಗರಹಾವಿನಿಂದ ಕಚ್ಚಿಸಿಕೊಂಡವರು. ಹಾವನ್ನು ಹಿಡಿದು ಅದಕ್ಕೆ ಮುತ್ತಿಡಲು ಮುಂದಾಗಿದ್ದ ತಕ್ಷಣ ಹಾವು ತಿರುಗಿ ತುಟಿಗೆ ಕಚ್ಚಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಏನಿದು ಘಟನೆ?!: ಭದ್ರಾವತಿಯ ಅಲೆಕ್ಸ್ ಹಾಗೂ ರೋನಿ ಎಂಬುವರು ಉರಗ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಭದ್ರಾವತಿಯ ಬೊಮ್ಮನಕಟ್ಟೆ ಮದುವೆ ಮನೆಯಲ್ಲಿ ಎರಡು ನಾಗರ ಹಾವುಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಈ ವೇಳೆ ಹಾವು ಹಿಡಿದು ಅಲೆಕ್ಸ್ ಎಂಬಾತ ಅದಕ್ಕೆ ಮುತ್ತು ಕೊಡಲು ಮುಂದಾಗಿದ್ದಾನೆ. ಈ ವೇಳೆ ಹಾವು ತಿರುಗಿ ತುಟಿಗೆ ಕಚ್ಚಿದೆ. ನಂತರ ಹಾವುಗಳನ್ನು ಕಾಡಿಗೆ ಬಿಟ್ಟು ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾನೆ.
ಅಶ್ಲೀಲ ವಿಡಿಯೋ: ಜೈಲು: ಅಪ್ರಾಪ್ತ ಬಾಲಕರ ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಿವಾಸಿ 42 ವರ್ಷದ ತಿಮ್ಮಪ್ಪ ಅವರ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾಗಿದ್ದ ಕೆ.ಟಿ. ಗುರುರಾಜ್ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು ರೂ. 1,44,000 ದಂಡ, ದಂಡವನ್ನು ಕಟ್ಟಲು ವಿಫಲನಾದರೆ, 3 ವರ್ಷಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.
ಬಾಲಕಿ ದೌರ್ಜನ್ಯ, ಜೀವಾವಧಿ ಶಿಕ್ಷೆ!: ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವನಿಗೆ ಆರೋಪ ದೃಢಪಟ್ಟ ಹಿನ್ನೆಲೆ ಜೀವಾವಧಿ ಶಿಕ್ಷೆ ಜೊತೆಗೆ 20 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ ವಾಸಿ ಆರ್ಮುಗಂ 10 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆಂದು ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.







