ಪ್ರತಿಭಾ ಸನ್ಮಾನಕ್ಕೆ ವೇದಿಕೆ ಆದ ಅಡಿಕೆ ನಾಡು ಸೊಸೈಟಿ!
– ವಿನಯ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಯಶಸ್ವಿ ಕಾರ್ಯಕ್ರಮ
– ಮಲೆನಾಡು ಮೂಲದ ಸಾಧಕರಿಗೆ, ಪ್ರತಿಭೆಗಳಿಗೆ ಮಲೆನಾಡ ಮುತ್ತುಗಳು ಪ್ರಶಸ್ತಿ
NAMMUR EXPRESS NEWS
ಬೆಂಗಳೂರು: ರಾಜಧಾನಿಯಲ್ಲಿರುವ ಮಲೆನಾಡು ಮೂಲದ ಜನರಿಗೆ ಅರ್ಥಿಕ ಶಕ್ತಿ ನೀಡುವ ಮೂಲಕ 9ನೇ ವರ್ಷ ಪೂರೈಸಿರುವ ಅಡಿಕೆನಾಡು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ 9ನೇ ಸರ್ವ ಸದಸ್ಯರ ವಾರ್ಷಿಕ ಸಭೆ ಜಯನಗರದ ಚಂದ್ರ ಹಾಸ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು.
ಅವಧೂತ ವಿನಯ ಗುರೂಜಿ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲೆನಾಡು ಭಾಗದ ಸುಮಾರು 1500 ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ವಿನಯ್ ಗುರೂಜಿ ಮಾತನಾಡಿ, ರಾಜಧಾನಿಯಲ್ಲಿ ಇಂತಹ ಸಂಸ್ಥೆ ಹುಟ್ಟು ಹಾಕಿ ಮಲೆನಾಡಿಗರ ಸೇವೆ. ಮಾಡುತ್ತಿರುವ ಸಹಕಾರಿ ಹಾಗೂ ಅದರ ಅಧ್ಯಕ್ಷರಾದ ಮಣಿ ಹೆಗ್ಡೆ ಮತ್ತು ಎಲ್ಲಾ ನಿರ್ದೇಶಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಮೋಜಿ ಗೌಡರು ವಿಧಾನಪರಿಷತ್ ಸದಸ್ಯರು, ಸಿರಿಬೈಲ್ ಧರ್ಮೇಶ್, ನಿರ್ದೇಶಕರು ರಾಜ್ಯ ಒಕ್ಕಲಿಗರ ಸಂಘ, ಸಹಕಾರಿಯ ಉಪಾಧ್ಯಕ್ಷರಾದ ಅಮರಾವತಿ ಕೃಷ್ಣಮೂರ್ತಿ ಸೇರಿ ಅನೇಕ ಗಣ್ಯರು ಇದ್ದರು. ಸಹಕಾರಿಯ ಅಧ್ಯಕ್ಷರಾದ ಮಣಿ ಹೆಗ್ಡೆ ಅಧ್ಯಕ್ಷತೆ ವಹಿಸಿ ಸಹಕಾರಿ ಅಭಿವೃದ್ಧಿಗೆ ಕಾರಣರಾದ ಸರ್ವರಿಗೂ ಧನ್ಯವಾದ ಅರ್ಪಣೆ ಮಾಡಿದರು.
ರಾಜಧಾನಿಯ ಮಲೆನಾಡಿಗರಿಗೆ ಆರ್ಥಿಕ ಸ್ವಾವಲಂಬನೆ ಜತೆಗೆ ಮಲೆನಾಡಿಗರ ಸಂಘಟನೆಗೆ ಬಹು ದೊಡ್ಡ ಕಾಣಿಕೆ ನೀಡಿರುವ ಈ ಸೊಸೈಟಿ ಅಧ್ಯಕ್ಷರಾದ ಮಣಿ ಹೆಗ್ಡೆ, ಉಪಾಧ್ಯಕ್ಷರಾದ ಎಲ್.ಸಿ. ಕೃಷ್ಣಮೂರ್ತಿ, ನಿರ್ದೇಶಕರಾದ ಎಂ ಆರ್ ಜಯೇಶ, ಹೆಚ್. ಸಿ. ನಾಗರಾಜ್, ಜೆ.ಡಿ.ಕುಮಾರಸ್ವಾಮಿ, ಬಿ.ಬಿ. ರತ್ನಾಕರ್, ಎನ್.ಎ.ಪ್ರಭಾಕರ್, ಕೆ.ಎಸ್. ಪುಟ್ಟಪ್ಪಗೌಡ, ಹೆಚ್.ಎಲ್. ಅಶೋಕ್, ಯು.ಆರ್. ಶಮಿತ ಮಲ್ನಾಡ್, ಕೆ.ಎಸ್. ಶ್ವೇತಶ್ರೀ ವಿಜಯ್, ಡಿ.ಕೆ.ಕೃಷ್ಣಮೂರ್ತಿ, ಎಲ್. ದಾಸಪ್ಪ, ಎಸ್.ಕಾಳಿದಾಸ್, ರಮ್ಯಾ ಎಸ್. ನಾಯಕ್ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೊಳಿಗೆ ನಾಗರಾಜ್, ಪುರುಷೋತ್ತಮ ಗೌಡ, ಕರವೇ ನಾಗರಾಜ್, ನಂಟೂರು ಸುಬ್ಬಯ್ಯ ಸೇರಿ ಮಲೆನಾಡ ಗಣ್ಯರು ಹಾಜರಿದ್ದರು.
ಬೆಂಗಳೂರಿನಲ್ಲಿರುವ ಸಾಧಕರಿಗೆ ಪ್ರಶಸ್ತಿ ಗೌರವ
ಬೆಂಗಳೂರಿನಲ್ಲಿರುವ ಮಲೆನಾಡಿನ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಮಲೆನಾಡಿನ ಮುತ್ತುಗಳು ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಕೆ.ಸಿ. ಗಿರಿ ಕೆ.ಎಸ್.ಪಿ.ಎಸ್. ಪೊಲೀಸ್ ಉಪ ಅಧೀಕ್ಷಕರು, ಚನ್ನಪಟ್ಟಣ, ಹೆಚ್. ವಿ. ಸುದರ್ಶನ್ ಪೊಲೀಸ್ ಇನ್ಸ್ಪೆಕ್ಟರ್, ಇಂದಿರಾನಗರ, ಹೆಚ್.ಆರ್. ಮೂರ್ತಿ,, ಕೃಷಿ ಉದ್ಯಮ, ಮೈಸೂರು, ಎ.ಡಿ. ಪ್ರೀತಂ ಪೊಲೀಸ್ ಇನ್ಸ್ಪೆಕ್ಟರ್, ಡಾ.ಯಲ್ಲಪ್ಪ MBBS, MD ಇವರಿಗೆ ಈ ಸಭೆಯಲ್ಲಿ ಸನ್ಮಾನಿಸಿ ಮಲೆನಾಡ ಮುತ್ತುಗಳು ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.








