ಕೊಪ್ಪ: ಜಪಾನ್ ದೇಶದ ಐಚಿ- ನಗೋಯಾದಲ್ಲಿ ನಡೆದಂತಹ 2026ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ 4×100 ರಿಲೇ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆಮ್ಮೆಯ ಕ್ರೀಡಾ ಪ್ರತಿಭೆ, ಪ್ರಸಿದ್ಧ ಅಥ್ಲೆಟ್ ಸ್ನೇಹ ಶಾನುವಳ್ಳಿ ಕೊಪ್ಪಕ್ಕೆ ಬುಧವಾರ ಆಗಮಿಸಲಿದ್ದಾರೆ.
ಪಂದ್ಯಾವಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಪದಕದೊಂದಿಗೆ 7 ಅಕ್ಟೋಬರ್ 2026ರ ಬುಧವಾರದಂದು ಬೆಳಿಗ್ಗೆ 9:30ಕ್ಕೆ ತಮ್ಮ ಹುಟ್ಟೂರಿಗೆ ಆಗಮಿಸುತ್ತಿದ್ದು, ತಾಲ್ಲೂಕಿನ ಜನರು ತಮ್ಮ ಹೆಮ್ಮೆಯ ಮನೆಮಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಮಾವಿನಕಟ್ಟೆಯಲ್ಲಿರುವ ಜಜಿಕೇಶ್ವರ ದೇವಾಲಯದಿಂದ ಬೈಕ್ ರ಼್ಯಾಲಿಯ ಮೂಲಕ ಸ್ವಾಗತವನ್ನು ಕೋರುವ ಮುಖಾಂತರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.







