ಎನ್.ಆರ್.ಪುರ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲಾ ಪಂಚಾಯಿತಿಗೆ ಆಗಸ್ಟ್ 13 ರಂದು ಆದೇಶ ಹೊರಡಿಸಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಟ್ಟಿದ ಕಟ್ಟಡ, ಮನೆಗಳ ತೆ-ರಿಗೆ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳನ್ನು ಕೈ ಬಿಡುವಂತೆ ಆದೇಶಿಸಿದೆ. ಈ ಆದೇಶ ಮತ್ತು ಕಸ್ತೂರಿ ರಂಗನ್ ವರದಿ, ರೈತರ ಸಮಸ್ತೆಗಳ ನಿವಾರಣೆಗೆ ಅಗ್ರಹಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ
ಅ.7ರಿಂದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಆಹೋ ರಾತ್ರಿ ಧರಣಿ ಹಮ್ಮಿಕೊಂಡಿದೆ. ಈ ಬಗ್ಗೆ ಒಕ್ಕೂಟದ ಗೌರವ ಅಧ್ಯಕ್ಷರಾದ ರಾಮಸ್ವಾಮಿ, ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ ಈಗಾಗಲೇ ಹೋರಾಟದ ಸಿದ್ಧತೆ ನಡೆಸುತ್ತಿದ್ದಾರೆ.
ಎನ್. ಆರ್. ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚಿಗೆ ಮಾಹಿತಿ ನೀಡಿದ, ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘವೇಂದ್ರ ಈ ಬಗ್ಗೆ ಮಾಹಿತಿ ನೀಡಿ ಹಿಂದಿನಿಂದಲೂ ಗ್ರಾಮಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಪಂಚಾಯತ್ ಕಂದಾಯ ವಿಧಿಸುತ್ತಿತ್ತು. ಆದರೆ, ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆಯು ಆದೇಶ ಮಾಡಿ 2025 ರ ಅನ್ವಯ ತೆರಿಗೆ ನಿರ್ಧರಣೆ ಮತ್ತು 2.0.ತಂತ್ರಾಂಶದಿಂದ ಆಸ್ತಿಗಳನ್ನು ಕೈ ಬಿಡಬೇಕು ಎಂದು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿ ಆದೇಶ ಮಾಡಿದೆ. ಈ ಬಗ್ಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧಿವೇಶನ ನಡೆಯುವ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಸುತ್ತೋಲೆ ಬಂದು ತಿಂಗಳುಗಳೇ ಶೃಂಗೇರಿ ಕ್ಷೇತ್ರದ ಶಾಸಕರು ಎಲ್ಲೂ ಪ್ರಸ್ತಾಪ ಮಾಡುತ್ತಿಲ್ಲ. ಇದನ್ನು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಖಂಡಿಸುತ್ತವೆ. ಈ ಸುತ್ತೋಲೆ ಪ್ರಕಾರ ರಾಜ್ಯ ಅಥವಾ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳ ಭೂಮಿ ಮತ್ತು ನಿವೇಶನಗಳಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಲ್ಪಟ್ಟ ಕಟ್ಟಡ ಅಥವಾ ನಿವೇಶನಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ಇರುವುದಿಲ್ಲ ಮತ್ತು ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ವ್ಯಾಪ್ತಿಯಲ್ಲಿ ಒಳಪಟ್ಟಿರುವ ಆಸ್ತಿಗಳನ್ನು ಸಹ ಕೈ ಬಿಡುವಂತೆ ಆದೇಶ ಮಾಡಲಾಗಿದೆ ಎಂದು ದೂರಿದರು.
ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರೇ ಈ ಆದೇಶ ಹೊರಡಿಸಿದ್ದು ಈಶ್ವರ ಖಂಡ್ರೆ ಅವರು ಯಾವುದೇ ಇಲಾಖೆಗೆ ಬಂದರೂ ರೈತರನ್ನು ಟಾರ್ಗೆಟ್ ಮಾಡುತ್ತಾರೆ.ಈ ಹಿಂದೆಯೂ ಅರಣ್ಯ ಸಚಿವರಾಗಿದ್ದಾಗ ರೈತರನ್ನು ಅರಣ್ಯದಿಂದ ತೆರವುಗೊಳಿಸಲು ಆದೇಶ ಮಾಡಿದ್ದರು.ಆದ್ದರಿಂದ ಮುಖ್ಯ ಮಂತ್ರಿಗಳು ಈಶ್ವರ ಖಂಡ್ರೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಫಾರಂ ನಂಬರ್ 50.53 ಹಾಗೂ 94ಸಿ . 94 ಸಿ ದಾಖಲೆಗಳನ್ನು ನೀಡಬೇಕು ಎಂದು ಕಂದಾಯ ಇಲಾಖೆಗೆ ಅರ್ಜಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ಈ ದಾಖಲೆಗಳನ್ನು ಇಟ್ಟುಕೊಂಡು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಕಾನೂನು ಹೋರಾಟ ಮಾಡುತ್ತೇವೆ.ಬರಗಾಲ ಬಂದಿರುವುದರಿಂದ ರೈತರ ಖಾತೆಗೆ 2500 ರುಪಾಯಿ ಪರಿಹಾರ ನೀಡುತ್ತೇವೆ ಎಂದು ಅಧಿವೇಶನದಲ್ಲಿ ಸರ್ಕಾರ ಘೋಷಣೆ ಮಾಡಿದೆ. ಈ ಪರಿಹಾರವು ರೈತರಿಗೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಕನಿಷ್ಠ 50 ಸಾವಿರದಿಂದ 1 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಕ್ಕೊತ್ತಾಯ ಮಾಡುತ್ತಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ತಾಲೂಕು ಅಧ್ಯಕ್ಷ ಕಿಚೇಬಿ ಪ್ರದೀಪ್, ಕ್ಷೇತ್ರ ಸಂಚಾಲಕ ಅಶೋಕ್ನೀಲುವಾನಿ,ಕ್ಷೇತ್ರ ವಕ್ತಾರರಾದ ಪ್ರಮೋದ್ ನೀಲುವಾನಿ ವಿಕಾಸ್ಬಂಗುವಾನಿ ಇದ್ದರು.







