ತೀರ್ಥಹಳ್ಳಿ: ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ವತಿಯಿಂದ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರಿಕೆಟ್ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, U-17 ವಿಭಾಗದಲ್ಲಿ ವಿಜಯಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಅದ್ಭುತ ಗೆಲುವಿನ ಮೂಲಕ ವಿದ್ಯಾರ್ಥಿಗಳು ಇದೇ ತಿಂಗಳ 09, 10, ಮತ್ತು 11 ರಂದು ಭದ್ರಾವತಿಯಲ್ಲೇ ನಡೆಯಲಿರುವ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಇಡೀ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಆಯ್ಕೆಯಾದ ಹೆಮ್ಮೆಯ ವಿದ್ಯಾರ್ಥಿಗಳು
• ಉತ್ಸವ್ ಗೌಡ (10ನೇ ತರಗತಿ)
• ಪಾರ್ಥ ಕೆ.ವಿ (10ನೇ ತರಗತಿ)
• ವರ್ಚಸ್ (10ನೇ ತರಗತಿ)
• ನೈರುತ್ (9ನೇ ತರಗತಿ)
• ಹೃದಯ್ (9ನೇ ತರಗತಿ)
• ವಿರಾಜ್ (9ನೇ ತರಗತಿ)
• ಅಮಿತ್ (9ನೇ ತರಗತಿ)
• ಅಗಸ್ತ್ಯ (9ನೇ ತರಗತಿ)
ಅಭಿನಂದನೆಗಳು:
ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರು ಹಾರ್ದಿಕವಾಗಿ ಅಭಿನಂದಿಸಿ, ಮುಂದಿನ ವಿಭಾಗೀಯ ಮಟ್ಟದ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.







