ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸದಸ್ಯರ ಅವಧಿ ಮುಕ್ತಾಯವಾಗಿದ್ದು,
15 ಮಂದಿ ಚುನಾಯಿತರು, ಮೂವರು ನಾಮ ನಿರ್ದೇಶಿತ ಸದಸ್ಯರು ಈಗ ಮಾಜಿ ಅಗಲಿದ್ದಾರೆ.
5 ವರ್ಷ ಪೂರೈಸಿದ ಸದಸ್ಯರಿಗೆ ಮಂಗಳವಾರ ಬೀಳ್ಕೊಡುಗೆ ನೀಡಲಾಯಿತು. ಅಲ್ಲದೆ ಅಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ಅವರ ಅಧ್ಯಕ್ಷ ಸ್ಥಾನ ಕೂಡ ನಿರ್ಗಮಿತವಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಕೌನ್ಸಿಲ್ನ ಅಧಿಕಾರಾವಧಿ ಅಕ್ಟೋಬರ್ 27ರ ಇಂದು ಕೊನೆಗೊಳ್ಳುತ್ತಿದೆ. ಇದೀಗ ಇಡೀ ಪಟ್ಟಣಕ್ಕೆ ಜನ ನಾಯಕರಿಲ್ಲದಾಗಿದೆ.
ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 600 ಗ್ರಾ.ಪಂ.ಸದಸ್ಯರು. 25 ತಾ.ಪಂ ಸದಸ್ಯರು 9 ಜಿ.ಪಂ ಸದಸ್ಯರು 15 ಪ.ಪಂ ಸದಸ್ಯರು ಜನಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದರು. ಈಗ ಕ್ಷೇತ್ರಕ್ಕೆ ಶಾಸಕರೊಬ್ಬರೇ ಜನಪ್ರತಿನಿಧಿ ಇದ್ದಾರೆ.
5 ವರ್ಷ ಏರುಪೇರು ನಡುವೆ ಉತ್ತಮ ಸೇವೆ
ಕಳೆದ 5 ವರ್ಷಗಳ ಕಾಲ ಪಟ್ಟಣದ ಅಭಿವೃದ್ಧಿಗೆ, ನಾಗರೀಕ ಸೌಕರ್ಯಗಳ ನಿರ್ವಹಣೆಗಾಗಿ ಕಾಳಜಿಯಿಂದ ಕೆಲಸ ಮಾಡಿದ ಪ.ಪಂ. ಎಲ್ಲಾ 15 ಮಂದಿ ಚುನಾಯಿತ ಸದಸ್ಯರು, ಮೂವರು ನಾಮನಿರ್ದೇಶಿತ ಸದಸ್ಯರು ಅಭಿನಂದನಾರ್ಹರಾಗಿದ್ದಾರೆ. ಕೌನ್ಸಿಲ್ ಅವಧಿ ಮುಕ್ತಾಯವಾದ ಹಿನ್ನಲೆ ಅ.27ರ ಇಂದು ಪ.ಪಂ.ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದರು. ಅಲ್ಲದೆ ಪ.ಪಂ.ಅಧ್ಯಕ್ಷ ರತ್ನಾಕರ ಶೆಟ್ಟರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 12 ಗಂಟೆಗೆ ಕೊನೆಯ ಸಭೆ ನಡೆಸಲಾಯಿತು. ಕಾಂಗ್ರೆಸ್ ಈ ಬಾರಿ ಆಡಳಿತ ನಡೆಸಿತ್ತು. ಈ ವೇಳೆ ಎಲ್ಲಾ ಸದಸ್ಯರು ಪರಸ್ಪರ ಅಭಿನಂದನೆಗಳನ್ನು ಅರ್ಪಿಸಿಕೊಂಡರು. ಮುಂದಿನ ಕೆಟಗರಿಗೆ ಕೂಡ ಕಸರತ್ತು ಶುರುವಾಗಿದೆ.
ಸಂಸದರು, ಶಾಸಕರನ್ನು ಬಿಟ್ರೆ ಜನಪ್ರತಿನಿಧಿಗಳೇ ಇಲ್ಲ..!
ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳ ಸರ್ಕಾರಗಳು ಸ್ಥಳೀಯ ಆಡಳಿತದ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿದೆ. ರಾಜ್ಯದಲ್ಲಿ ಶಾಸಕರು, ಸಂಸದರನ್ನು ಹೊರತುಪಡಿಸಿದ ಇನ್ನೊಬ್ಬ ಜನಪ್ರತಿನಿಧಿ ಇಲ್ಲದಯಾಗಿದೆ. ಜಿಲ್ಲಾ ಪಂಚಾಯ್ತಿ ಸದಸ್ಯರಿಲ್ಲ, ತಾಲ್ಲೂಕು ಪಂಚಾಯ್ತಿ ಸದಸ್ಯರಿಲ್ಲ, ಗ್ರಾಮ ಪಂಚಾಯ್ತಿ ಸದಸ್ಯರಿಲ್ಲ. ಈಗ ಕೊನೆಗೆ ಪಟ್ಟಣ ಪಂಚಾಯ್ತಿ ಸದಸ್ಯರೂ ಇಲ್ಲವಾಗಿ ಕೊನೆಗೆ ಶಾಸಕ ಸಂಸದ ಎರಡು ತಲೆಗಳು ಮಾತ್ರ ಉಳಿದಿದೆ.
ಕಾಂಗ್ರೆಸ್ ಸದಸ್ಯರು ಯಾರು ಯಾರು..?
ರತ್ನಾಕರ್ ಶೆಟ್ಟಿ, ಗೀತಾ ಶೆಟ್ಟಿ, ರಹಮತುಲ್ಲಾ ಅಸಾದಿ, ಬಿ.ಗಣಪತಿ, ಜಯಪ್ರಕಾಶ್ ಶೆಟ್ಟಿ, ಶಬನಂ, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ನಮ್ರತ್, ನಾಮ ನಿರ್ದೇಶಿತ ಸದಸ್ಯರು: ರಾಘವೇಂದ್ರ ಶೆಟ್ಟಿ, ಅನಿಲ್, ವಿಲಿಯಂ ಮಾರ್ಟೀಸ್.
ಬಿಜೆಪಿ ಸದಸ್ಯರು ಯಾರು ಯಾರು..?
ಸಂದೇಶ ಜವಳಿ, ರಾಘವೇಂದ್ರ ಸೊಪ್ಪುಗುಡ್ಡೆ, ನವೀನ್( ಯತಿರಾಜ್ ), ರವೀಶ್ ಬಾಬಿ, ಜ್ಯೋತಿ ಮೋಹನ್, ಜ್ಯೋತಿ ಗಣೇಶ್.
ಎಲ್ಲಾ ಸದಸ್ಯರಿಗೆ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳು







