ತೀರ್ಥಹಳ್ಳಿ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದ್ದು, ಜನವರಿ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನು ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಲಿಂಗಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಯುವ ಮುಖಂಡ, ಜನಪರ ನಾಯಕ ಪುಟ್ಟೊಡ್ಲು ರಾಘವೇಂದ್ರ ಅವರ ಹೆಸರು ಕೇಳಿಬರುತ್ತಿದೆ.
ಬಿಸಿಎಂ ಬಿ ವರ್ಗಕ್ಕೆ ಮೀಸಲಾತಿ ಬಂದಿದ್ದು, ಇದೀಗ ದಶಕಗಳ ಪಕ್ಷ ಸೇವೆ ಜತೆಗೆ ಯುವ ನಾಯಕತ್ವಕ್ಕೆ ಈ ಬಾರಿ ಅವಕಾಶ ಆಗುವ ಸಾಧ್ಯತೆ ಹೆಚ್ಚಿದೆ.
ರಾಜಕೀಯದ ಜತೆಗೆ ಸಮಾಜ ಸೇವೆ
ಪುಟ್ಟೊಡ್ಲು ರಾಘವೇಂದ್ರ ಅವರು ಯುವ ಕಾಂಗ್ರೆಸ್ ಮುಖಂಡರಾಗಿ, ಮಂಡಗದ್ದೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ಪಕ್ಷದ ಕೆಲಸಗಳ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆಶ್ರಮಗಳಿಗೆ ನೆರವು, ಬಡವರಿಗೆ ಸಹಾಯಹಸ್ತ, ಆರೋಗ್ಯ, ಚಿಕಿತ್ಸೆಗೆ ನೆರವುದಂತಹ ಸಮಾಜಮುಖಿ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿರುವಂತಹ ಪ್ರಮುಖ ಯುವ ನಾಯಕರಾಗಿ ಹೆಸರು ಗಳಿಸಿದ್ದಾರೆ.
ಪಕ್ಷದಲ್ಲಿ ಸ್ಥಾನ ಖಚಿತ ಎನ್ನುತ್ತಿವೆ ಮೂಲಗಳು!
ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಅವಿರತವಾಗಿ ಶ್ರಮಿಸಿ, ಗ್ರಾಮ ಜಿಲ್ಲಾ ತಾಲ್ಲೂಕು ಸೇರಿದಂತೆ ವಿಧಾನಸಭೆ ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದು, ಪಕ್ಷದ ನಾಯಕರ ಆತ್ಮೀಯತೆ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. 4 ವಿಧಾನ ಸಭೆ, 5 ಲೋಕ ಸಭೆ, ಸ್ಥಳೀಯ ಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಯುವ ನಾಯಕರ ಪೈಕಿ ಅತೀ ಹೆಚ್ಚು ಪಕ್ಷಕ್ಕೆ ಸೇವೆ ನೀಡಿರುತ್ತಾರೆ.
ಕೃಷಿಕರಾಗಿ ಗ್ರಾಮೀಣ ಪ್ರದೇಶದ ನಾಡಿಮಿಡಿತವನ್ನು ಅರಿತಿರುವ ಇವರ ಸೇವೆಯನ್ನು ಗುರುತಿಸಿ ಪಕ್ಷವು ಇವರಿಗೆ ಚುನಾವಣಾ ಅಭ್ಯರ್ಥಿಯಾಗಿ ಸ್ಥಾನವನ್ನು ನೀಡುವುದು ಬಹುತೇಕ ಖಚಿತವೆನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.







