ಇನ್ನು ಮಳೆಗಾಲವೇ ಮುಗಿದಿಲ್ಲ ಈಗಾಗಲೇ ಚಳಿಗಾಲ ಆರಂಭವಾಗಿದೆ. ಬಹುತೇಕ ಮಲೆನಾಡು ಭಾಗದಲ್ಲಿ ಹಾಗೂ ರಾಜ್ಯದಲ್ಲಿ ಚಳಿ ಹೆಚ್ಚಾಗಿರುವುದರಿಂದ ಆರೋಗ್ಯ ಸಂಪೂರ್ಣ ಹದಗಿಟ್ಟಿದೆ.
ಕಳೆದ ಎರಡು ಮೂರು ದಿನಗಳಿಂದ ಬಾರಿ ಚಳಿ ಎದುರಾಗಿದ್ದು ಸಂಜೆ 6:00 ಆಗುತ್ತಿದ್ದಂತೆ ಚಳಿ ಆರಂಭವಾಗುತ್ತಿದೆ.
ವಾತಾವರಣ ಹದಗೆಟ್ಟಿರುವುದರಿಂದ ರೈತರಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಅಡಿಕೆ ಬೆಳೆಯನ್ನು ಕಟಾವು ಮಾಡಲು ರೈತರಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಮನೆಗಳಲ್ಲೂ ಕೂಡ ಚಿಕ್ಕ ಮಕ್ಕಳಿಂದ ವಯಸ್ಸಾದವರೆಗೂ ಕೂಡ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿರುವುದರಿಂದ ಆಸ್ಪತ್ರೆಯಲ್ಲಿ ಸರದಿ ಸಾಲುಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗೆ ಮಳೆ ಬಿಸಿಲು ಚಳಿಯು ವಾತಾವರಣದ ಏರುಪೇರಿನಿಂದ ಜನರನ್ನು ಕಂಗೆಡಿಸುವಂತೆ ಮಾಡಿದೆ.
ಮಳೆ ಇಲ್ಲ.. ನೀರಿನ ಮೂಲಗಳು ಖಾಲಿ ಖಾಲಿ!
ಈ ವರ್ಷ ನಿಗದಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ನದಿ ಮೂಲಗಳು ಬತ್ತಿ ಹೋಗಿವೆ. ಇಡೀ ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಲಿದೆ. ಇನ್ನೊಂದು ಕಡೆ ಯಾವುದೇ ಡ್ಯಾಮ್ ಅಲ್ಲಿ ನೀರಿಲ್ಲ. ಇದರಿಂದ ವಿದ್ಯುತ್ ಕೊರತೆ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ.
ವಿಚಿತ್ರ ವಾತಾವರಣ: ಅನಾರೋಗ್ಯ ಹೆಚ್ಚಳ!
ಒಂದು ಕಡೆ ಚಳಿ ಮತ್ತೊಂದೆಡೆ ಇಬ್ಬನಿ,ಮಳೆ, ಬಿಸಿಲು ಎಲ್ಲ ಸೇರಿ ಜನರಿಗೆ ದೊಡ್ಡ ತಲೆ ಬಿಸಿ ತಂದಿದೆ. ಮೈ ಕೊರೆಯುವ ಚಳಿ ಈಗಾಗಲೇ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಜನರು ಎಚ್ಚರದಿಂದ ಇರುವುದು ಅಗತ್ಯ..







